ಜೂನಿಯರ್ ಎನ್​ಟಿಆರ್-ಪುನೀತ್ ಗೆಳೆತನ ಎಂಥದ್ದು? ಇಲ್ಲಿದೆ ವಿವರ

Jr NTR: ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಬಿಡುಗಡೆ ಆಗಲಿಕ್ಕಿದೆ. ಜೂ ಎನ್​ಟಿಆರ್ ಪುನೀತ್ ರಾಜ್​ಕುಮಾರ್ ಜೊತೆಗೆ ಬಹಳ ಆತ್ಮೀಯ ಗೆಳೆತನ ಹೊಂದಿದ್ದರು. ಇದೀಗ ರಿಷಬ್ ಶೆಟ್ಟಿ ಜೊತೆಗೆ ಆಪ್ತ ಗೆಳೆತನ ಹೊಂದಿದ್ದಾರೆ.

ಜೂನಿಯರ್ ಎನ್​ಟಿಆರ್-ಪುನೀತ್ ಗೆಳೆತನ ಎಂಥದ್ದು? ಇಲ್ಲಿದೆ ವಿವರ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 15, 2024 | 11:28 AM

ಜೂನಿಯರ್ ಎನ್​ಟಿಆರ್ ಹಾಗೂ ಪುನೀತ್ ರಾಜ್ಕುಮಾರ್ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಪುನೀತ್ ನಿಧನ ಹೊಂದಿದಾಗ ಜೂನಿಯರ್ ಎನ್​ಟಿಆರ್ ಅವರು ಬೆಂಗಳೂರಿಗೆ ಓಡೋಡಿ ಬಂದಿದ್ದರು. ಪುನೀತ್ ಶವದ ಪಕ್ಕ ನಿಂತು ಕಣ್ಣೀರು ಹಾಕಿದ್ದರು. ಕುಟುಂಬದವರಿಗೂ ಅವರು ಬಲ ತುಂಬಿದ್ದರು. ಸಮಯ ಸಿಕ್ಕಾಗ ಈಗಲೂ ಪುನೀತ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಪುನೀತ್ಗಾಗಿ ಒಂದು ಹಾಡನ್ನು ಕೂಡ ಜೂನಿಯರ್ ಎನ್ಟಿಆರ್ ಹಾಡಿದ್ದರು.

‘ಚಕ್ರವ್ಯೂಹ’ ಸಿನಿಮಾ 2016ರಲ್ಲಿ ರಿಲೀಸ್ ಆಯಿತು. ಈ ಚಿತ್ರಕ್ಕೆ ಪುನೀತ್ ಹೀರೋ. ಈ ಸಿನಿಮಾದಲ್ಲಿ ‘ಗೆಳೆಯ..ಗೆಳೆಯ..’ ಹೆಸರಿನ ಹಾಡು ಬರುತ್ತದೆ. ಇದನ್ನು ಜೂನಿಯರ್ ಎನ್ಟಿಆರ್ ಅವರು ಹಾಡಿದ್ದರು. ಈ ಬಗ್ಗೆ ಅವರು ಕೋರಿದಾಗ ಮರುಮಾತಿಲ್ಲದೆ ಒಪ್ಪಿಕೊಂಡಿದ್ದರು. ಈ ಬಗ್ಗೆ ಪುನೀತ್ ರಾಜ್ಕುಮಾರ್ ಅವರು ಹೇಳಿಕೊಂಡಿದ್ದರು.

‘ಜೂನಿಯರ್ ಎನ್ಟಿಆರ್ ನನ್ನ ತಮ್ಮನ ತರ. ನಮ್ಮ ನಿರ್ಮಾಪಕರು ಹೋಗಿ ಬೇರೆಯವರಿಂದ ಈ ಬಗ್ಗೆ ಎನ್ಟಿಆರ್ಗೆ ಅಪ್ರೋಚ್ ಮಾಡಿದರು. ಅಪ್ಪು ನನ್ನ ಬ್ರದರ್ ತರ, ಹಾಡ್ತೀನಿ ಎಂದು ಹೈದರಾಬಾದ್ಗೆ ಕರೆದು ಊಟೋಪಚಾರ ಮಾಡಿದರು. ಅವರ ತಾಯಿ ಕುಂದಾಪುರದವರು. ಅವರು ಅಡುಗೆ ಮಾಡಿದರು. ಅವರು ಏನೇ ಕೇಳಿದರೂ ಇಲ್ಲ ಎಂದಿಲ್ಲ. ನಾನು ಎಂದಿಗೂ ಚಿರರುಣಿ’ ಎಂದಿದ್ದರು ಜೂನಿಯರ್ ಎನ್​ಟಿಆರ್.

ಇದನ್ನೂ ಓದಿ:‘ಮುಂಗಾರು ಮಳೆ’ ಚಿತ್ರದ ಆಫರ್ ಗಣೇಶ್ ಕೈ ಸೇರಲು ಕಾರಣ ಆಗಿದ್ದೇ ಪುನೀತ್ ರಾಜ್​ಕುಮಾರ್

ಜೂನಿಯರ್ ಎನ್​ಟಿಆರ್ ಅವರು ಕನ್ನಡನ ಅದ್ಭುತವಾಗಿ ಮಾತನಾಡುತ್ತಾರೆ. ‘ಆರ್ಆರ್ಆರ್’ ಚಿತ್ರದ ಕನ್ನಡ ವರ್ಷನ್ಗೆ ಅವರೇ ಡಬ್ ಮಾಡಿದರು. ಅವರು ಕರ್ನಾಟಕದ ವೇದಿಕೆ ಮೇಲೆ ಬಂದಾಗ ಕನ್ನಡದಲ್ಲೇ ಮಾತನಾಡುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ.

‘ದೇವರ’ ಚಿತ್ರ ಸೆಪ್ಟೆಂಬರ್ 27ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಇದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರು ತಾಯಿಯ ಕುಂದಾಪುರಕ್ಕೆ ಬಂದಿದ್ದರು. ಈ ವೇಳೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ಜೊತೆ ಎಲ್ಲ ಕಡೆಗಳಲ್ಲಿ ಸುತ್ತಾಡಿದ್ದರು. ಉಡುಪಿ ಕೃಷ್ಣ ಮಠಕ್ಕೂ ಭೇಟಿ ನೀಡಿ ಬಂದಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ನಾಳೆಯಲ್ಲ, ಮುಂದಿನ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಮಂಡನೆ: ಸಿದ್ದರಾಮಯ್ಯ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಹಿಂದೆ ಇಂದಿರಾ ಗಾಂಧಿಯನ್ನು ಇಬ್ರಾಹಿಂ ಅವಾಚ್ಯ ಪದಗಳಿಂದ ನಿಂದಿಸಿದ್ದರು:ಶಾಸಕ
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
ಮಧ್ಯರಾತ್ರಿ ಬಿಗ್​ಬಾಸ್ ಮನೆಯಿಂದ ಹೊರ ಹೋದವರ್ಯಾರು?
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
Video: ಆಟೋ ಚಾಲಕನನ್ನು ಥಳಿಸಿದ ಮಹಿಳೆ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ಪಕ್ಷದಲ್ಲಿ ತಿಕ್ಕಾಟ ಇದ್ದೇ ಇರುತ್ತದೆ, ಅದರೆ ಅನ್ಯೋನ್ಯವಾಗಿದ್ದೇವೆ: ಶಾಸಕ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ತೆರಿಗೆ ಹಣ ಸಂಗ್ರಹದಲ್ಲೂ ಸರ್ಕಾರ ಭಾರೀ ಹಿಂದೆ ಬಿದ್ದಿದೆ: ಕುಮಾರಸ್ವಾಮಿ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಪ್ರಭಾಕರ್ ಜೊತೆ ಸರಿಗಮ ವಿಜಿಗೆ ಇತ್ತು ಒಳ್ಳೆಯ ಒಡನಾಟ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ
ಕಾಂಗ್ರೆಸ್​ನ ನೂತನ ಪ್ರಧಾನ​ ಕಚೇರಿ‘ಇಂದಿರಾ ಭವನ’ ಉದ್ಘಾಟಿಸಿದ ಸೋನಿಯಾ