‘RRR’ ಚಿತ್ರದ ರೀತಿ ‘ವಾರ್ 2’ನಲ್ಲೂ ಇರಲಿದೆ ಭರ್ಜರಿ ಡ್ಯಾನ್ಸ್; ಮತ್ತೊಂದು ಆಸ್ಕರ್ ಮೇಲೆ ಕಣ್ಣು?

| Updated By: ರಾಜೇಶ್ ದುಗ್ಗುಮನೆ

Updated on: Jan 14, 2025 | 10:09 AM

‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್ ಡ್ಯಾನ್ಸ್ ಇರಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ‘ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಹಾಡಿನ ಯಶಸ್ಸಿನ ನಂತರ, ಜೂನಿಯರ್ ಎನ್​​ಟಿಆರ್ ಅವರ ಡ್ಯಾನ್ಸ್ ಮತ್ತೊಮ್ಮೆ ಗಮನ ಸೆಳೆಯಲಿದೆ .

‘RRR’ ಚಿತ್ರದ ರೀತಿ ‘ವಾರ್ 2’ನಲ್ಲೂ ಇರಲಿದೆ ಭರ್ಜರಿ ಡ್ಯಾನ್ಸ್; ಮತ್ತೊಂದು ಆಸ್ಕರ್ ಮೇಲೆ ಕಣ್ಣು?
ಎನ್​​ಟಿಆರ್-ಹೃತಿಕ್
Follow us on

‘ಆರ್​ಆರ್​ಆರ್’ ಚಿತ್ರದ ನಾಟು ನಾಟು ಹಾಡು ಸಖತ್ ಸದ್ದು ಮಾಡಿತ್ತು. ಈ ಹಾಡಿನಲ್ಲಿ ರಾಮ್ ಚರಣ್ ಹಾಗೂ ಜೂನಿಯರ್ ಎನ್​ಟಿಆರ್ ಅವರು ಮಸ್ತ್ ಸ್ಟೆಪ್ ಹಾಕಿದ್ದರು. ಈ ಸಿನಿಮಾದ ಹಾಡಿಗೆ ಆಸ್ಕರ್ ಕೂಡ ಬಂತು. ಜೂನಿಯರ್ ಎನ್​ಟಿಆರ್ ಅವರು ಎಂತಹ ಅದ್ಭುತ ಡಾನ್ಸರ್ ಎಂಬುದನ್ನು ಸಾಬೀತು ಮಾಡಿದ್ದರು. ಈಗ ಅವರು ‘ವಾರ್ 2’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾದಲ್ಲು ಭರ್ಜರಿ ಡ್ಯಾನ್ಸ್ ಒಂದು ಇರಲಿದೆ.

ಎಲ್ಲರಿಗೂ ತಿಳಿದಿರುವಂತೆ ಹೃತಿಕ್ ರೋಶನ್ ಅವರು ಅದ್ಭುತ ನೃತ್ಯ ಮಾಡುತ್ತಾರೆ. ಹೃತಿಕ್ ಅವರು ಈ ಮೊದಲು ಅದನ್ನು ಸಾಬೀತು ಮಾಡಿದ್ದಾರೆ. ‘ಧೂಮ್ 2’ ಸಿನಿಮಾದಲ್ಲಿ ಅವರು ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. ಈಗ ಹೃತಿಕ್ ಅವರು ‘ವಾರ್ 2’ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಈಗ ‘ವಾರ್ 2’ ಚಿತ್ರದ ಬಗ್ಗೆ ಅಪ್​ಡೇಟ್ ಕೊಟ್ಟಿದ್ದಾರೆ.

‘ವಾರ್ 2 ಸಿನಿಮಾ ಸಿದ್ಧತೆ ನಡೆಯುತ್ತಿದೆ. ಅದರಲ್ಲಿ ಡ್ಯಾನ್ಸ್ ನಂಬರ್ ಇದೆ. ಇದಕ್ಕೆ ಸಿದ್ಧತೆ ನಡೆಯುತ್ತಿದೆ. ನನ್ನ ಕಾಲು ಸ್ಟ್ರಾಂಗ್ ಆಗಿ ಇದೆ ಎಂದು ಭಾವಿಸುತ್ತೇನೆ’ ಎಂದು ಹೃತಿಕ್ ರೋಶನ್ ಹೇಳಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ‘ಮತ್ತೊಂದು ಸೂಪರ್ ಹಿಟ್ ಸಾಂಗ್ ಲೋಡಿಂಗ್’ ಎಂದು ಅನೇಕರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಮತ್ತೊಂದು ಆಸ್ಕರ್ ಪಕ್ಕಾ’ ಎಂದಿದ್ದಾರೆ.

ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್​ಟಿಆರ್ ಒಂದಾಗುತ್ತಾರೆ ಎನ್ನುವ ವಿಚಾರವೇ ಸಾಕಷ್ಟು ಖುಷಿ ಕೊಟ್ಟಿದೆ.  ಇವರಿಬ್ಬರು ಆ್ಯಕ್ಷನ್ ಜೊತೆಗೆ ಡ್ಯಾನ್ಸ್ ಕೂಡ ಮಾಡಿದರೆ ಹೇಗಿರುತ್ತದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಸದ್ಯ ಹೃತಿಕ್ ಅವರು ಜೂನಿಯರ್ ಎನ್​ಟಿಆರ್ ಹೆಸರನ್ನು ತೆಗೆದುಕೊಂಡಿಲ್ಲ. ಆದಾಗ್ಯೂ ಅನೇಕರು ಇಬ್ಬರ ಹೆಸರನ್ನು ಜೋಡಿಸುತ್ತಾ ಇದ್ದಾರೆ.

ಇದನ್ನೂ ಓದಿ: ಭಾರತದ ಶ್ರೀಮಂತ ನಟ ಹೃತಿಕ್ ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ?

ಹೃತಿಕ್ ರೋಶನ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ದಕ್ಷಿಣದಲ್ಲಿ ಜೂನಿಯರ್​ ಎನ್​ಟಿಆರ್​ ಅವರಿಗೆ ಜನಪ್ರಿಯತೆ ಇದೆ. ಇಬ್ಬರೂ ಈಗ ಹೊಸ ಸಿನಿಮಾಗಾಗಿ ಒಂದಾಗುತ್ತಿರುವುದು ವಿಶೇಷ. ಈಗಾಗಲೇ ‘ವಾರ್’ ಸಿನಿಮಾ ಹಿಟ್ ಆಗಿದೆ. ಇದರ ಸೀಕ್ವೆಲ್ ಬಗ್ಗೆ ಈಗ ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.