ಭಾರತದ ಶ್ರೀಮಂತ ನಟ ಹೃತಿಕ್ ಅವರ ಒಟ್ಟೂ ಆಸ್ತಿ ಎಷ್ಟು ಕೋಟಿ?
ಹೃತಿಕ್ ರೋಷನ್ ಅವರು ‘ಕಹೋ ನ ಪ್ಯಾರ್ ಹೈ’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಚಿತ್ರದಿಂದ ಹೃತಿಕ್ ರೋಷನ್ ಅವರು ದೊಡ್ಡ ಗೆಲುವು ಕಂಡರು. ನಂತರ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಆಸ್ತಿ 3,101 ಕೋಟಿ ರೂಪಾಯಿಗೂ ಅಧಿಕವಾಗಿದೆ.
ನಟ ಹೃತಿಕ್ ರೋಷನ್ ಅವರಿಗೆ ಇಂದು (ಜನವರಿ 10) ಜನ್ಮದಿನ. ಅವರಿಗೆ ಈಗ 51 ವರ್ಷ. ಈ ವಯಸ್ಸಿನಲ್ಲೂ ಸಖತ್ ಫಿಟ್ ಆ್ಯಂಡ್ ಫೈನ್ ಆಗಿ ಅವರು ಕಾಣಿಸಿಕೊಳ್ಳುತ್ತಾರೆ. ಅವರಿಗೆ ಫ್ಯಾನ್ಸ್ ಶುಭಾಶಯ ತಿಳಿಸುತ್ತಿದ್ದಾರೆ. ಹೃತಿಕ್ ರೋಷನ್ 12ನೇ ವಯಸ್ಸಿಗೆ ಬಣ್ಣದ ಬದುಕು ಆರಂಭಿಸಿದರು ಅನ್ನೋ ವಿಚಾರ ನಿಮಗೆ ಗೊತ್ತೇ? ಹೌದು, ರಜನಿಕಾಂತ್ ನಟನೆಯ ‘ಭಗವಾನ್ ದಾದ’ ಸಿನಿಮಾದಲ್ಲಿ ಹೃತಿಕ್ ರೋಷನ್ ಬಾಲ ಕಲಾವಿದನಾಗಿ ನಟಿಸಿದ್ದರು. ಆ ಮೂಲಕ ಅವರು ಗಮನ ಸೆಳೆದರು. ಈ ಚಿತ್ರದಲ್ಲಿ ಅವರ ತಂದೆ ರಾಕೇಶ್ ರೋಷನ್ ಕೂಡ ಪ್ರಮುಖ ಪಾತ್ರ ಮಾಡಿದ್ದರು. ಈ ಸಿನಿಮಾಗೆ ಹೃತಿಕ್ ತಾತ ಜೆ. ಓಂ ಪ್ರಕಾಶ್ ನಿರ್ದೇಶನ ಮಾಡಿದ್ದರು ಅನ್ನೋದು ಮತ್ತೊಂದು ವಿಶೇಷ.
ಹೃತಿಕ್ ರೋಷನ್ ಅವರು ‘ಕಹೋ ನ ಪ್ಯಾರ್ ಹೈ’ ಚಿತ್ರದ ಮೂಲಕ ಹೀರೋ ಆದರು. ಆ ಬಳಿಕ ಹೃತಿಕ್ ಅವರಿಗೆ ಸಾಲು ಸಾಲು ಗೆಲುವು ಸಿಕ್ಕವು. ಹೃತಿಕ್ ಅವರ ಆಸ್ತಿ 3,101 ಕೋಟಿ ರೂಪಾಯಿಗೂ ಅಧಿಕವಾಗಿದೆ ಎಂದು ಹೇಳಲಾಗಿದೆ. ಹೃತಿಕ್ ರೋಷನ್ ಅವರು ಪ್ರತಿ ಚಿತ್ರಕ್ಕೆ ಸಂಭಾವನೆಯಾಗು 75-100 ಕೋಟಿ ರೂಪಾಯಿ ಪಡೆಯುತ್ತಾರೆ.
ಹೃತಿಕ್ ರೋಷನ್ ಅವರು ಬ್ರ್ಯಾಂಡ್ ಪ್ರಚಾರ ಕೂಡ ಮಾಡುತ್ತಾರೆ. ಇದಕ್ಕೆ ಅವರು ಪಡೆಯೋದು ಬರೋಬ್ಬರಿ 12 ಕೋಟಿ ರೂಪಾಯಿ. ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಳ್ಳಲು 4 ಕೋಟಿ ರೂಪಾಯಿ ಪಡೆಯುತ್ತಾರೆ. ಹೃತಿಕ್ ಅವರು HRX ಹೆಸರಿನ ಬ್ರ್ಯಾಂಡ್ ಹೊಂದಿದ್ದು, ಇದರ ಮೂಲಕ ಶ್ಯೂ, ಶರ್ಟ್ ಸೇರಿ ಅನೇಕ ಸ್ಪೋರ್ಟ್ಸ್ ವಸ್ತುಗಳು ಇದರಲ್ಲಿ ಸಿಗುತ್ತವೆ. ಈ ಕಂಪನಿಯ ಮೌಲ್ಯ 200 ಕೋಟಿ ರೂಪಾಯಿ ಆಗಿದೆ.
ಹೃತಿಕ್ ರೋಷನ್ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿದ್ದಾರೆ. ಮುಂಬೈನ ಜುಹುದಲ್ಲಿ ಡುಪ್ಲೆಕ್ಸ್ ಮನೆ ಹೊಂದಿದ್ದಾರೆ. ಇದರ ಬೆಲೆ 100 ಕೋಟಿ ರೂಪಾಯಿ. ಪೆಂಟ್ಹೌಸ್ ಹೊಂದಿದ್ದು ಇದು 70 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಇದಲ್ಲದೆ, ಜುಹುದಲ್ಲಿ ಇನ್ನೂ ಹಲವು ಕಡೆಗಳಲ್ಲಿ ಅವರು ಜಾಗ ಹೊಂದಿದ್ದಾರೆ. ಸಲ್ಮಾನ್ ಖಾನ್ ಅವರು ಲೋನೋವಾಲಾದಲ್ಲಿ ಫಾರ್ಮ್ಹೌಸ್ ಹೊಂದಿದ್ದು ಇದರ ಸಮೀಪವೇ ಹೃತಿಕ್ ಕೂಡ 7 ಎಕರೆಯಲ್ಲಿ ಫಾರ್ಮ್ ಹೌಸ್ ಹೊಂದಿದ್ದು, ನೂರಾರು ಕೋಟಿ ಬೆಲೆ ಬಾಳುತ್ತದೆ.
ಇದನ್ನೂ ಓದಿ: ಸಾವಿನ ಕದ ತಟ್ಟಿ ಬಂದಿದ್ದ ಹೃತಿಕ್ ರೋಷನ್; 50 ಅಂತಸ್ತಿನ ಕಟ್ಟಡದ ಮೇಲಾಗಿದ್ದೇನು?
ಹೃತಿಕ್ ರೋಷನ್ ಅವರಿಗೆ ಕಾರುಗಳ ಬಗ್ಗೆ ಸಖತ್ ಕ್ರೇಜ್ ಇದೆ. ಮಸ್ಟಂಗ್, ಮರ್ಸೀಡಿಸ್ ಹಾಗೂ ಇತರ ಲಕ್ಷುರಿ ಕಾರುಗಳ ಕಲೆಕ್ಷನ್ ಅವರ ಗ್ಯಾರೇಜ್ನಲ್ಲಿ ಇದೆ. ವ್ಯಾನಿಟಿ ವ್ಯಾನ್ ಹೊಂದಿದ್ದು, ಇದಕ್ಕೆ 3 ಕೋಟಿ ರೂಪಾಯಿ ನೀಡಿದ್ದರು. ಹೃತಿಕ್ ರೋಷನ್ ಅವರು ‘ಫೈಟರ್’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಸಾಧಾರಣ ಯಶಸ್ಸು ಕಂಡಿದೆ. ಈಗ ಅವರು ‘ವಾರ್ 2’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.