ಹುಟ್ಟುಹಬ್ಬದ ದಿನ ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್

Jr NTR Birthday: ‘ಕೆಜಿಎಫ್’ ಅಂಥಹಾ ಬೃಹತ್ ಸಿನಿಮಾಗಳನ್ನು ನೀಡಿರುವ ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಈಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿ ಭಾರಿ ವೈರಲ್ ಆಗಿದೆ. ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಇದೇ ಕಾರಣಕ್ಕೆ ಜೂ ಎನ್​​ಟಿಆರ್, ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ್ದಾರೆ.

ಹುಟ್ಟುಹಬ್ಬದ ದಿನ ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್
Neel Jrntr

Updated on: May 20, 2026 | 6:43 PM

ಇಂದು (ಮೇ 20) ಜೂ ಎನ್​​ಟಿಆರ್ (Jr NTR) ಹುಟ್ಟುಹಬ್ಬ. ತಮ್ಮ 43ನೇ ಹುಟ್ಟುಹಬ್ಬವನ್ನು ಜೂ ಎನ್​​ಟಿಆರ್ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಜೂ ಎನ್​​ಟಿಆರ್, ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ಹೇಳಿದ್ದಾರೆ. ‘ಕೆಜಿಎಫ್’ ಅಂಥಹಾ ಬೃಹತ್ ಸಿನಿಮಾಗಳನ್ನು ನೀಡಿರುವ ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ಈಗ ಜೂ ಎನ್​​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾ ನಿರ್ದೇಶಿಸುತ್ತಿದ್ದು, ಆ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿ ಭಾರಿ ವೈರಲ್ ಆಗಿದೆ. ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಇದೇ ಕಾರಣಕ್ಕೆ ಜೂ ಎನ್​​ಟಿಆರ್, ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ್ದಾರೆ.

ತಮ್ಮ ಇನ್​​ಸ್ಟಾಗ್ರಾಂ ಪೋಸ್ಟ್‌ನಲ್ಲಿ ಅಭಿಮಾನಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿರುವ ಜೂನಿಯರ್ ಎನ್‌ಟಿಆರ್, ‘ವರ್ಷಗಳಿಂದ ನೀವು ತೋರುತ್ತಿರುವ ಪ್ರೀತಿ, ಹಾರೈಕೆ ಮತ್ತು ನಿರಂತರ ಬೆಂಬಲ ನನ್ನ ಸಿನಿ ಪಯಣದಲ್ಲಿ ಸಿಗುತ್ತಿರುವ ಅತಿ ದೊಡ್ಡ ಆಶೀರ್ವಾದಗಳಾಗಿವೆ. ನನ್ನ ಪ್ರತಿಯೊಂದು ಹಂತದಲ್ಲೂ ಇಷ್ಟೊಂದು ಪ್ರೀತಿಯಿಂದ ನನ್ನ ಜೊತೆ ನಿಂತಿರುವ ನನ್ನ ಪ್ರೀತಿಯ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಮುಂದುವರಿದು ‘ಡ್ರ್ಯಾಗನ್’ ಸಿನಿಮಾದ ಟೀಸರ್​​ನ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಅನ್ನು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನೀಡಿರುವ ತಾರಕ್, ‘ಡ್ರ್ಯಾಗನ್ ಗ್ಲಿಂಪ್ಸ್‌ಗೆ ಸಿಕ್ಕ ಪ್ರತಿಕ್ರಿಯೆಯನ್ನು ನೋಡಿ ನಮ್ಮ ಮುಖದಲ್ಲಿ ದೊಡ್ಡ ನಗು ಮೂಡಿದೆ. ಅಷ್ಟೇ ಅಲ್ಲದೆ, ನಿಮ್ಮೆಲ್ಲರಿಗೂ ಒಂದು ಮರೆಯಲಾಗದ ಸಿನಿಮೀಯ ಅನುಭವವನ್ನು ನೀಡಲು ಇದು ನಮಗೆ ಮತ್ತಷ್ಟು ಆತ್ಮವಿಶ್ವಾಸ ಮತ್ತು ಉತ್ಸಾಹವನ್ನು ತುಂಬಿದೆ. ಆದರೆ ಈ ಎಲ್ಲ ಯಶಸ್ಸಿನ ಸಂಪೂರ್ಣ ಶ್ರೇಯಸ್ಸು ಆ ಒಬ್ಬನೇ ವ್ಯಕ್ತಿಗೆ ಸಲ್ಲಬೇಕು, ಅವರೇ ‘ಡ್ರ್ಯಾಗನ್’ ಎಂಬ ಅದ್ಭುತ ಲೋಕದ ಕನಸು ಕಂಡ ನನ್ನ ಪ್ರಶಾಂತ್ ನೀಲ್’ ಎಂದು ನಿರ್ದೇಶಕರ ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ:‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟನ ಹೊಸ ಸಿನಿಮಾ ‘ಸರ್ವೇ ನಂಬರ್ 45’

ಕೊನೆಯದಾಗಿ ಚಿತ್ರರಂಗದ ಸಹೋದ್ಯೋಗಿಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ ವಂದಿಸಿರುವ ನಟ, ‘ನನಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ ಮತ್ತು ಚಿತ್ರಕ್ಕೆ ಬೆಂಬಲ ನೀಡಿದ ಎಲ್ಲಾ ಹಿತೈಷಿಗಳು, ಚಿತ್ರರಂಗದ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಮಾಧ್ಯಮ ಮಿತ್ರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ ಹೀಗೆಯೇ ಇರಲಿ’ ಎಂದು ಬರೆಯುವ ಮೂಲಕ ತಮ್ಮ ಸಹಿಯಿರುವ ಪತ್ರವನ್ನು ಪೋಸ್ಟ್ ಮಾಡಿದ್ದಾರೆ.

ಜೂ ಎನ್​ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದು, ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ. ಮಾದಕ ವಸ್ತು ಲೋಕದ ಮೇಲೆ ಹಿಡಿತ ಸಾಧಿಸಲು ಬಡಿದಾಡುವ ಗ್ಯಾಂಗುಗಳ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us