ಜ್ಯೂ. ಎನ್ಟಿಆರ್ ‘ಆರ್ಆರ್ಆರ್’ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿ ಕೊಂಚ ರಿಲೀಫ್ ಆಗಿದ್ದಾರೆ. ಇತ್ತೀಚೆಗೆ ಅವರು ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಶೀಘ್ರವೇ ಅವರು ‘ಆರ್ಆರ್ಆರ್’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಜ್ಯೂ.ಎನ್ಟಿಆರ್ ಕುಟುಂಬ ಸಮೇತ ಫ್ರಾನ್ಸ್ನ ಪ್ಯಾರಿಸ್ಗೆ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
ಜ್ಯೂ.ಎನ್ಟಿಆರ್ ‘ಆರ್ಆರ್ಆರ್’ ಸಿನಿಮಾದಲ್ಲಿ ನಟಿಸಿದ್ದಾರೆ. ದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ. ಜ್ಯೂ.ಎನ್ಟಿಆರ್ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಕಾರಣಕ್ಕೆ ಉಳಿದ ಎಲ್ಲಾ ಪ್ರಾಜೆಕ್ಟ್ಗಳ ಕೆಲಸವನ್ನು ಮುಂದೂಡುವಂತೆ ಅವರು ಸೂಚಿಸಿದ್ದಾರೆ. ಪ್ರಚಾರದ ಮಧ್ಯೆಯೂ ಅವರು ಪ್ಯಾರಿಸ್ಗೆ ತೆರಳಿದ್ದಾರೆ. ಪತ್ನಿ ನಂದಮೂರಿ ಪ್ರಣತಿ, ಮಕ್ಕಳಾದ ಅಭಯ್ ರಾಮ್ ಮತ್ತ್ತು ಭಾರ್ಗವ್ ರಾಮ್ ಕೂಡ ಟ್ರಿಪ್ಗೆ ತೆರಳಿದ್ದಾರೆ.
ಕೊವಿಡ್ ಕಾಣಿಸಿಕೊಂಡ ನಂತರ ಜ್ಯೂ.ಎನ್ಟಿಆರ್ ಅವರು ಕುಟುಂಬದ ಜತೆ ಎಲ್ಲಿಯೂ ಹೊರಗೆ ತೆರಳಿರಲಿಲ್ಲ. ಕೊವಿಡ್ ಎರಡನೇ ಅಲೆ ಈಗ ಕಡಿಮೆ ಆಗಿದೆ. ಈ ಕಾರಣಕ್ಕೆ ಅವರು ಕುಟುಂಬದ ಜತೆ ಪ್ಯಾರಿಸ್ ತೆರಳಿದ್ದಾರೆ. ಎಸ್.ಎಸ್. ರಾಜಮೌಳಿ ಅವರು ಶೀಘ್ರವೇ ಆರ್ಆರ್ಆರ್ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ಜ್ಯೂ.ಎನ್ಟಿಆರ್ ಅವರು ಜಾಹೀರಾತು ಶೂಟಿಂಗ್ಗಾಗಿ ಮುಂಬೈಗೆ ತೆರಳಬೇಕಿತ್ತು. ಆದರೆ, ಆ ಕೆಲಸವನ್ನು ಸದ್ಯಕ್ಕೆ ಹೋಲ್ಡ್ನಲ್ಲಿ ಇರಿಸಿದ್ದಾರೆ. ಇನ್ನು, ಕೊರಟಾಲ ಶಿವ ಜತೆ ಜ್ಯೂ.ಎನ್ಟಿಆರ್ ಸಿನಿಮಾ ಮಾಡುತ್ತಿದ್ದಾರೆ. ಇದೇ ತಿಂಗಳಲ್ಲಿ ಈ ಸಿನಿಮಾ ಮುಹೂರ್ತ ನಡೆಯಬೇಕಿತ್ತು. ಅದನ್ನು ಕೂಡ ಜ್ಯೂ.ಎನ್ಟಿಆರ್ 2021ಕ್ಕೆ ಪೋಸ್ಟ್ಪೋನ್ ಮಾಡಿದ್ದಾರೆ.
ನೈಜ ಘಟನೆ ಆಧರಿಸಿ ‘ಆರ್ಆರ್ಆರ್’ ಸಿನಿಮಾ ತಯಾರಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಿಂದೆ ‘ದೋಸ್ತಿ..’ ಹಾಡು ಬಿಡುಗಡೆ ಆಗಿತ್ತು. ಇತ್ತೀಚೆಗೆ ರಿಲೀಸ್ ಆದ ಎರಡನೇ ಗೀತೆ ‘ಹಳ್ಳಿ ನಾಟು..’ ಎಲ್ಲೆಲ್ಲೂ ರಾರಾಜಿಸುತ್ತಿದೆ. ಈ ಹಾಡಿನಿಂದಾಗಿ ಚಿತ್ರದ ಮೇಲಿನ ಕ್ರೇಜ್ ಹೆಚ್ಚುವಂತಾಗಿದೆ. 2022ರ ಜ.7ರಂದು ಈ ಸಿನಿಮಾ ಅದ್ದೂರಿಯಾಗಿ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆ ದಿನಕ್ಕಾಗಿ ಸಿನಿಪ್ರಿಯರು ಕಾದು ಕುಳಿತಿದ್ದಾರೆ.
ಇದನ್ನೂ ಓದಿ: ರಾಜಕಾರಣಿಗಳಿಂದ ಮಹಿಳೆಯರಿಗೆ ಅವಮಾನ; ಜ್ಯೂ. ಎನ್ಟಿಆರ್ ನೀಡಿದ ಎಚ್ಚರಿಕೆ ಸಂದೇಶದ ವಿಡಿಯೋ ಇಲ್ಲಿದೆ
Published On - 7:15 pm, Sun, 21 November 21