ಜನ್ಮದಿನದಂದೇ ಜೂನಿಯರ್​​ ಎನ್​​ಟಿಆರ್​ ಗುಡ್​ ನ್ಯೂಸ್​; ಮನೆಗೆ ಬಂದ ಹೊಸ ಅತಿಥಿಗಳು

ಜೂನಿಯರ್ ಎನ್​ಟಿಆರ್ ತಮ್ಮ 43ನೇ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಮನೆಗೆ 'ಅಸಾಹಿ' ಮತ್ತು 'ಯೂಹಿ' ಎಂಬ ಎರಡು ಮುದ್ದಾದ ಸಾಕು ಗಿಳಿಗಳನ್ನು ಸ್ವಾಗತಿಸಿದ್ದಾರೆ. ಈ ಹೆಸರುಗಳಿಗೆ ಜಪಾನ್ ಜೊತೆ ವಿಶೇಷ ನಂಟಿದ್ದು, 'ಆರ್‌ಆರ್‌ಆರ್' ಮತ್ತು 'ದೇವರ' ಚಿತ್ರದ ಪ್ರಚಾರದ ನಂತರ ಎನ್​ಟಿಆರ್ ಜಪಾನ್‌ ಮೇಲೆ ಹೊಂದಿರುವ ಪ್ರೀತಿಯ ಸಂಕೇತವಾಗಿದೆ.

ಜನ್ಮದಿನದಂದೇ ಜೂನಿಯರ್​​ ಎನ್​​ಟಿಆರ್​ ಗುಡ್​ ನ್ಯೂಸ್​; ಮನೆಗೆ ಬಂದ ಹೊಸ ಅತಿಥಿಗಳು
ಜೂನಿಯರ್ ಎನ್​​ಟಿಆರ್
Edited By:

Updated on: May 21, 2026 | 8:09 AM

ಟಾಲಿವುಡ್ ಸ್ಟಾರ್ ಜೂನಿಯರ್ ಎನ್​​ಟಿಆರ್ ತಮ್ಮ 43ನೇ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದ ನಟ, ತಮ್ಮ ಮನೆಗೆ ಬಂದಿರುವ ಹೊಸ ಅತಿಥಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.

ಜೂನಿಯರ್ ಎನ್​​ಟಿಆರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುಂದರವಾದ ಎರಡು ಸಾಕು ಗಿಳಿಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಹಕ್ಕಿಗಳಿಗೆ ‘ಅಸಾಹಿ’ ಮತ್ತು ‘ಯೂಹಿ’ ಎಂದು ನಾಮಕರಣ ಮಾಡಲಾಗಿದ್ದು, ಇವುಗಳ ಹೆಸರಿನ ಹಿಂದೆ ಒಂದು ವಿಶೇಷವಾದ ಜಪಾನ್ ಕನೆಕ್ಷನ್ ಇದೆ.

‘ನನ್ನ ಮುದ್ದಿನ ಹಕ್ಕಿಗಳಾದ ಅಸಾಹಿ ಮತ್ತು ಯೂಹಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಇದು ಜಪಾನ್ ದೇಶದ ಮೇಲಿನ ನನ್ನ ಪ್ರೀತಿಯ ಸಂಕೇತ’ ಎಂದು ಎನ್​​ಟಿಆರ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾ ಜಪಾನ್‌ನಲ್ಲಿ ಬಿಡುಗಡೆಯಾದ ದಿನದಿಂದಲೂ ಜೂನಿಯರ್ ಎನ್​​ಟಿಆರ್ ಅವರಿಗೆ ಅಲ್ಲಿ ಅಪಾರ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಇತ್ತೀಚೆಗಷ್ಟೇ ‘ದೇವರ’ ಚಿತ್ರದ ಪ್ರಚಾರಕ್ಕಾಗಿ ಅವರು ಜಪಾನ್‌ಗೆ ಭೇಟಿ ನೀಡಿದ್ದಾಗ ಸಿಕ್ಕ ಅಭೂತಪೂರ್ವ ಸ್ಪಂದನೆ ಅವರ ಮನ ಗೆದ್ದಿತ್ತು. ಇದೇ ಕಾರಣಕ್ಕೆ ತಮ್ಮ ಹೊಸ ಸಾಕುಪ್ರಾಣಿಗಳಿಗೆ ಜಪಾನಿ ಮೂಲದ ಹೆಸರುಗಳನ್ನು ಇಟ್ಟಿದ್ದಾರೆ.

ಇದನ್ನೂ ಓದಿ: ‘ಇಡೀ ಕುಟುಂಬ ಶಪಿಸಿತು’; ಜೂ. ಎನ್​​ಟಿಆರ್ ಈ ಸ್ಥಿತಿಗೆ ಪ್ರಶಾಂತ್ ನೀಲ್ ಕಾರಣ

ಸಿನಿಮಾ ವಿಚಾರಕ್ಕೆ ಬರುವುದಾದರೆ, ಜೂನಿಯರ್ ಎನ್​​ಟಿಆರ್ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ ‘ಡ್ರ್ಯಾಗನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಅದರಲ್ಲಿ ಎನ್​​ಟಿಆರ್ ಅಫ್ಘಾನಿಸ್ತಾನ ಮೂಲದ ‘ಅಸ್ಯಾಸಿನ್’ (ಹಂತಕ) ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಜನ್ಮದಿನದಂದೇ ಇತ್ತ ಸಿನಿಮಾದ ಅಪ್ಡೇಟ್ ಹಾಗೂ ಅತ್ತ ಮನೆಗೆ ಹೊಸ ಹಕ್ಕಿಗಳ ಆಗಮನವಾಗಿರುವುದು ನಟನ ಅಭಿಮಾನಿಗಳಲ್ಲಿ ಸಂತಸ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us