AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ತುರ್ತು ಪರಿಸ್ಥಿತಿ; ಶಾಕಿಂಗ್ ಟ್ವಿಸ್ಟ್‌ ಕೊಟ್ಟ ಸುದೀಪ್

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಶೋ ಈಗ ಸಕತ್ ರೋಚಕ ಹಂತಕ್ಕೆ ತಲುಪಿದೆ. ಪ್ರತಿಯೊಬ್ಬ ಸ್ಪರ್ಧಿಗಳನ್ನು ನಾವೇ ನೇರವಾಗಿ ನಾಮಿನೇಟ್ ಮಾಡುತ್ತಿದ್ದೇವೆ ಮತ್ತು ಎಮರ್ಜೆನ್ಸಿ ಎಕ್ಸಿಟ್‌ಗೆ ಸಿದ್ಧರಾಗಿ ಎಂದು ಕಿಚ್ಚ ಸುದೀಪ್ ನೀಡಿದ ಶಾಕಿಂಗ್ ಆಫರ್‌ಗೆ ಸ್ಪರ್ಧಿಗಳು ತೀವ್ರ ಆತಂಕಗೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ತುರ್ತು ಪರಿಸ್ಥಿತಿ; ಶಾಕಿಂಗ್ ಟ್ವಿಸ್ಟ್‌ ಕೊಟ್ಟ ಸುದೀಪ್
ಸುದೀಪ್ Image Credit source: Colors Kannada
ರಾಜೇಶ್ ದುಗ್ಗುಮನೆ
|

Updated on:Sep 21, 2026 | 10:38 AM

Share

ಮುಖ್ಯಾಂಶಗಳು

  • ಬಿಗ್ ಬಾಸ್ ಮನೆಯಲ್ಲಿ ತುರ್ತು ಪರಿಸ್ಥಿತಿ
  • ವೋಟಿಂಗ್ ಇಲ್ಲದೆ ನೇರ ನಾಮಿನೇಷನ್ಯಾ
  • ಯಾವಾಗ ಬೇಕಾದರೂ ‘ಎಮರ್ಜೆನ್ಸಿ ಎಕ್ಸಿಟ್’ 

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇದೀಗ ರಿಲೀಸ್ ಆಗಿರುವ ಹೊಸ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಮನೆ ಮಂದಿಗೆ ಅಷ್ಟೇ ಅಲ್ಲದೆ ವೀಕ್ಷಕರಿಗೂ ದೊಡ್ಡ ಅಚ್ಚರಿ ಕಾಯ್ದಿಟ್ಟಿದೆ.

ಈ ಬಾರಿಯ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ‘ಎಮರ್ಜೆನ್ಸಿ’ ಘೋಷಿಸಲಾಗಿದೆ. ನಿರೂಪಕ ಕಿಚ್ಚ ಸುದೀಪ್ ಅವರು ಪ್ರತಿಯೊಬ್ಬ ಸ್ಪರ್ಧಿಗೂ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ‘ಈ ವಾರ ಎಲ್ಲರೂ ನಾಮಿನೇಟ್. ಈ ಮನೆಯಲ್ಲಿ ಯಾರು ಉಳಿಯುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ’ ಎಂದು ಸುದೀಪ್ ಹೇಳುವ ಮೂಲಕ ಎಲಿಮಿನೇಷನ್ ತೂಗುಕತ್ತಿ ಪ್ರತಿಯೊಬ್ಬರ ಮೇಲೂ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ ವೀಕ್ಷಕರ ವೋಟಿಂಗ್ ಆಧಾರದ ಮೇಲೆ ಎಲಿಮಿನೇಷನ್ ನಡೆಯುತ್ತದೆ. ಆದರೆ ಈ ಬಾರಿ, ‘ಪ್ರತಿಯೊಬ್ಬ ಕಂಟೆಸ್ಟೆಂಟ್ ಅನ್ನು ನಾವೇ ಖುದ್ದಾಗಿ ನಾಮಿನೇಟ್ ಮಾಡುತ್ತಿದ್ದೇವೆ’ ಎಂದು ಸುದೀಪ್ ಪ್ರಕಟಿಸಿದ್ದಾರೆ. ಈ ವಾರ ಯಾವಾಗ ಬೇಕಾದರೂ, ಏನ್ ಬೇಕಾದರೂ ಆಗಬಹುದು. ಹೀಗಾಗಿ ‘ಎಮರ್ಜೆನ್ಸಿ ಎಕ್ಸಿಟ್’ಗೆ ಸಿದ್ಧರಾಗಿರಿ ಎಂಬ ಸೂಚನೆ ನೀಡಿದ್ದಾರೆ.

ಸುದೀಪ್ ಅವರ ಈ ಮಾತನ್ನು ಕೇಳಿ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳ ಮುಖದಲ್ಲೂ ಆತಂಕ ಎದ್ದು ಕಾಣುತ್ತಿದೆ. ಯಾರು ಯಾವಾಗ ಮನೆಯಿಂದ ಹೊರಹೋಗಬೇಕಾಗುತ್ತದೋ ಎನ್ನುವ ಭಯ ಪ್ರತಿಯೊಬ್ಬರಲ್ಲೂ ಆವರಿಸಿದೆ. ಈ ಹೊಸ ಟ್ವಿಸ್ಟ್ ಆಟದ ಚಿತ್ರಣವನ್ನೇ ಬದಲಾಯಿಸುವ ಲಕ್ಷಣಗಳು ಕಾಣಿಸುತ್ತಿವೆ.

ಇದನ್ನೂ ಓದಿ: ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಬೋಲ್ಡ್, ಬಿಗ್ ಬಾಸ್‌ನಲ್ಲಿ ಸೈಲೆಂಟ್; ಸೌಂದರ್ಯಾ ಶೆಟ್ಟಿ ನಡೆಗೆ ಫ್ಯಾನ್ಸ್ ಅಚ್ಚರಿ

ಈ ಸೀಸನ್‌ನಲ್ಲಿ ಒಂದಿಲ್ಲೊಂದು ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಬಿಗ್ ಬಾಸ್, ಈ ತುರ್ತು ಎಲಿಮಿನೇಷನ್ ನಿರ್ಧಾರದ ಮೂಲಕ ಆಟವನ್ನು ಮತ್ತಷ್ಟು ರೋಚಕಗೊಳಿಸಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರಬೀಳಲಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:53 am, Mon, 21 September 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ