ಡ್ರಗ್​ ಕೇಸ್​ನಲ್ಲಿ ಅರೆಸ್ಟ್ ಆದ ನಿರ್ಮಾಪಕನಿಗೆ ಚಿತ್ರರಂಗದವರೇ ಗ್ರಾಹಕರು? ಬಿಗ್ ಬಾಸ್ ಸ್ಪರ್ಧಿಯ ಹೆಸರು ರಿವೀಲ್

ಇತ್ತೀಚೆಗೆ ಚೌದರಿಯನ್ನು ಪೊಲೀಸರು ರೆಡ್​​ಹ್ಯಾಂಡ್​ ಆಗಿ ಹಿಡಿದಿದ್ದರು. ಅವರ ಬಳಿ ಡ್ರಗ್ಸ್ ಕೂಡ ಪತ್ತೆ ಆಗಿತ್ತು. ಈ ಕಾರಣದಿಂದ ಚೌದರಿಯನ್ನು ಪೊಲೀಸರು ನ್ಯಾಯಾಲಯದ ಎದುರು ಹಾಜರು ಪಡಿಸಿ, ತಮ್ಮ ಕಸ್ಟಡಿಗೆ ಪಡೆದಿದ್ದರು.

ಡ್ರಗ್​ ಕೇಸ್​ನಲ್ಲಿ ಅರೆಸ್ಟ್ ಆದ ನಿರ್ಮಾಪಕನಿಗೆ ಚಿತ್ರರಂಗದವರೇ ಗ್ರಾಹಕರು? ಬಿಗ್ ಬಾಸ್ ಸ್ಪರ್ಧಿಯ ಹೆಸರು ರಿವೀಲ್
ಚೌದರಿ-ಆಶು ರೆಡ್ಡಿ

Updated on: Jun 24, 2023 | 8:58 AM

ಟಾಲಿವುಡ್​​​ನಲ್ಲಿ ಮತ್ತೆ ಡ್ರಗ್ಸ್​ ವಾಸನೆ ಬಂದಿದೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ತೆಲುಗು ನಿರ್ಮಾಪಕ ಕೆ.ಪಿ.ಚೌದರಿಯನ್ನು (KP Chowdary) ಪೊಲೀಸರ ಇತ್ತೀಚೆಗೆ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಅವರು ನೀಡಿರುವ ಮಾಹಿತಿಗಳು ಟಾಲಿವುಡ್​​ನಲ್ಲಿ ಸಂಚಲನ ಮೂಡಿಸಿವೆ. ಸದ್ಯ ಬೆಳಕಿಗೆ ಬಂದಿರುವ ಮಾಹಿತಿಗಳು ಸಾಕಷ್ಟು ಆತಂಕ ಮೂಡಿಸಿದೆ. ಇವರ ಜೊತೆ ನಂಟು ಹೊಂದಿದ ಸುಮಾರು 12 ಹೆಸರುಗಳು 2 ದಿನಗಳ ತನಿಖೆಯಲ್ಲಿ ಬೆಳಕಿಗೆ ಬಂದಿವೆ.  ‘ಬಿಗ್ ಬಾಸ್ ತೆಲುಗು’ ಸೀಸನ್ ಒಂದರಲ್ಲಿ ಭಾಗವಹಿಸಿದ್ದ ಆಶು ರೆಡ್ಡಿ (Ashu Reddy) ಜೊತೆ ಕೆ.ಪಿ.ಚೌದರಿ ನೂರಾರು ಬಾರಿ ಫೋನ್​ನಲ್ಲಿ ಮಾತನಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಇತ್ತೀಚೆಗೆ ಚೌದರಿಯನ್ನು ಪೊಲೀಸರು ರೆಡ್​​ಹ್ಯಾಂಡ್​ ಆಗಿ ಹಿಡಿದಿದ್ದರು. ಅವರ ಬಳಿ ಡ್ರಗ್ಸ್ ಕೂಡ ಪತ್ತೆ ಆಗಿತ್ತು. ಈ ಕಾರಣದಿಂದ ಚೌದರಿಯನ್ನು ಪೊಲೀಸರು ನ್ಯಾಯಾಲಯದ ಎದುರು ಹಾಜರು ಪಡಿಸಿ, ತಮ್ಮ ಕಸ್ಟಡಿಗೆ ಪಡೆದಿದ್ದರು. ಕೆಪಿ ಬ್ಯಾಂಕ್ ವಹಿವಾಟುಗಳನ್ನು ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ 12 ವ್ಯಕ್ತಿಗಳ ಮೇಲೆ ಅನುಮಾನ ಮೂಡಿದೆ. ರಘು ತೇಜ, ಸುಶಾಂತ್ ರೆಡ್ಡಿ, ಸನಾ ಮಿಶ್ರಾ, ಶ್ವೇತಾ, ಟಾಗೋರ್ ಪ್ರಸಾದ್ ಸೇರಿದಂತೆ ಕೆಲವರ ಹೆಸರು ಕೆ.ಪಿ.ಚೌದರಿ ಅವರ ಡ್ರಗ್ಸ್ ಗ್ರಾಹಕರ ಪಟ್ಟಿಯಲ್ಲಿ ಇರುವುದು ಗೊತ್ತಾಗಿದೆ.

ಇದು ಒಂದು ಮಾಹಿತಿ ಆದರೆ, ಮತ್ತೊಂದು ಕಡೆ ಅವರು ತಾವು ಯಾವ ಸೆಲೆಬ್ರಿಟಿಗೂ ಡ್ರಗ್ ಸಪ್ಲೈ ಮಾಡಿಲ್ಲ ಎಂದು ಹೇಳಿದ್ದಾರಂತೆ. ‘ನಾನೇ ಡ್ರಗ್ಸ್ ತೆಗೆದುಕೊಳ್ಳುತ್ತೇನೆ. ಆ ಡ್ರಗ್ಸ್ ನನಗಾಗಿ ತಂದಿದ್ದು. ನಾನು ಯಾವ ಸೆಲೆಬ್ರಿಟಿಗಳಿಗೂ ಡ್ರಗ್ಸ್ ಮಾರಿಲ್ಲ’ ಎಂದು ಅವರು ಹೇಳಿದ್ದಾರೆ ಎನ್ನುತ್ತಿವೆ ಮೂಲಗಳು.

ಇದನ್ನೂ ಓದಿ: KP Chowdary: ಡ್ರಗ್ಸ್​ ಮಾರಾಟ ಮಾಡುತ್ತಿದ್ದ ‘ಕಬಾಲಿ’ ಸಿನಿಮಾ ನಿರ್ಮಾಪಕ ಕೆ.ಪಿ. ಚೌದರಿ ಬಂಧನ; 90 ಪಾಕೆಟ್​ ಮಾದಕ ವಸ್ತು ವಶ

ಸದ್ಯ ಈ ಬೆಳವಣಿಗೆ ಬಾಲಿವುಡ್​ನಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಈಗ ಪೊಲೀಸರು ಆಶು ರೆಡ್ಡಿ ಹಾಗೂ ಇತರರಿಗೆ ಶೀಘ್ರವೇ ನೋಟಿಸ್ ನೀಡುವ ಸಾಧ್ಯತೆ ಇದೆ. ಇವರ ವಿಚಾರಣೆ ವೇಳೆ ಮತ್ತಷ್ಟು ಮಾಹಿತಿಗಳು ಲೀಕ್ ಆಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:13 am, Sat, 24 June 23