AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟನ ಮೇಲೆ ಹೇರಿದ್ದ ನಿಷೇಧ ಹಿಂಪಡೆದ ಮಲಯಾಳಂ ಚಿತ್ರರಂಗ, ಇನ್ನೊಬ್ಬ ನಟನ ಭವಿಷ್ಯ ಶನಿವಾರ ನಿರ್ಧಾರ

Malayalam: ನಟ ಶೇನ್ ನಿಗಮ್ ಮೇಲೆ ಹೇರಿದ್ದ ನಿಷೇಧವನ್ನು ಮಲಯಾಳಂ ಚಿತ್ರರಂಗ ಹಿಂಪಡೆದಿದೆ. ಆದರೆ ನಟ ಶ್ರೀನಾಥ್ ಬಾಸಿ ಭವಿಷ್ಯ ಶನಿವಾರ ನಿರ್ಧಾರವಾಗಲಿದೆ.

ನಟನ ಮೇಲೆ ಹೇರಿದ್ದ ನಿಷೇಧ ಹಿಂಪಡೆದ ಮಲಯಾಳಂ ಚಿತ್ರರಂಗ, ಇನ್ನೊಬ್ಬ ನಟನ ಭವಿಷ್ಯ ಶನಿವಾರ ನಿರ್ಧಾರ
ಮಲಯಾಳಂ
Follow us
ಮಂಜುನಾಥ ಸಿ.
|

Updated on: Jun 23, 2023 | 10:53 PM

ಮಲಯಾಳಂ (Malayalam) ಚಿತ್ರರಂಗದ ಕಲಾವಿದರ ಸಂಘ (Artist) ಹಾಗೂ ನಿರ್ಮಾಪಕರ (Producer) ಸಂಘ ಇತ್ತೀಚೆಗೆ ನಟರಿಬ್ಬರ ಮೇಲೆ ನಿಷೇಧ ಹೇರಿತ್ತು. ಅಶಿಸ್ತಿನ ಕಾರಣ ನೀಡಿ ಮಲಯಾಳಂ ಚಿತ್ರರಂಗದ ಜನಪ್ರಿಯ ನಟರಾದ ಶೇನ್ ನಿಗಮ್ ಹಾಗೂ ಶ್ರೀನಾಥ್ ಬಾಸಿ ಅವರುಗಳ ಮೇಲೆ ನಿಷೇಧ ಹೇರಲಾಗಿತ್ತು. ಆದರೆ ಈಗ ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ (ಅಮ್ಮಾ) ಸದಸ್ಯರು ಚರ್ಚೆ ಮಾಡಿ ಶೇನ್ ನಿಗಮ್ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆದಿದೆ. ಆದರೆ ನಿಷೇಧಕ್ಕೆ ಗುರಿಯಾಗಿದ್ದ ಮತ್ತೊಬ್ಬ ನಟ ಶ್ರೀನಾಥ್ ಬಾಸಿ ಮೇಲಿನ ನಿಷೇಧ ಇನ್ನೂ ತೆರವಾಗಿಲ್ಲ.

ಶೇನ್ ನಿಗಮ್ ಹಾಗೂ ಶ್ರೀನಾಥ್ ಬಾಸಿ ಇಬ್ಬರೂ ಸಿನಿಮಾ ಸೆಟ್​ನಲ್ಲಿ ಅಶಿಸ್ತು ತೋರಿದ್ದಾರೆಂದು ಆರೋಪಿಸಿ ಇಬ್ಬರ ಮೇಲೂ ನಿಷೇಧ ಹೇರಲಾಗಿತ್ತು, ಒಂದೊಮ್ಮೆ ಅವರನ್ನು ಸಿನಿಮಾಕ್ಕೆ ಹಾಕಿಕೊಂಡರೆ ಆ ಸಿನಿಮಾಕ್ಕೆ ಅಸಹಕಾರ ತೋರುವುದಾಗಿ ಘೋಷಿಸಿತ್ತು. ಆದರೆ ಶೇನ್ ನಿಗಮ್ ಹಾಗೂ ಶ್ರೀನಾಥ್ ಬಾಸಿ ಇಬ್ಬರೂ ನಿಷೇಧ ತೆರವು ಮಾಡುವಂತೆ ಮನವಿ ಮಾಡಿದ ಕಾರಣ ಚರ್ಚೆ ಮಾಡಿ ಶೇನ್ ನಿಗಮ್ ಮೇಲಿನ ನಿಷೇಧ ತೆರವು ಮಾಡಲಾಗಿದೆ. ಆದರೆ ಶ್ರೀನಾಥ್ ಮೇಲೆ ಹೇರಿರುವ ನಿಷೇಧ ತೆರವು ಮಾಡುವ ಕುರಿತಾಗಿ ಚರ್ಚೆ ಜಾರಿಯಲ್ಲಿದ್ದು ಶನಿವಾರ ತೀರ್ಮಾನ ಪ್ರಕಟಿಸಲಾಗುತ್ತದೆ.

ಶ್ರೀನಾಥ್ ಬಾಸಿ ಮೇಲೆ ಕೆಲವು ನಿರ್ಮಾಪಕರು ಗುರುತರ ಆರೋಪವನ್ನು ಮಾಡಿದ್ದಾರೆ. ಶ್ರೀನಾಥ್, ಚಿತ್ರೀಕರಣ ಸೆಟ್​ನಲ್ಲಿ ಮಾದಕ ವಸ್ತು ಸೇವಿಸುತ್ತಾರೆಂದು. ಉದ್ದೇಶಪೂರ್ವಕವಾಗಿ ತಪ್ಪು ಡೇಟ್ಸ್ ನೀಡಿ ನಿರ್ಮಾಪಕರಿಗೆ ತೊಂದರೆ ಕೊಡುವುದು, ಸಮಯಕ್ಕೆ ಸರಿಯಾಗಿ ಶೂಟಿಂಗ್​ಗೆ ಬಾರದೆ ಹೋಗುವುದು, ಫೋನ್ ಕರೆಗಳನ್ನು ಸ್ವೀಕರಿಸದಿರುವುದು ಹೀಗೆ ಹಲವು ಆರೋಪಗಳನ್ನು ಶ್ರೀನಾಥ್ ಮೇಲೆ ಕೆಲ ನಿರ್ಮಾಪಕರು, ನಿರ್ದೇಶಕರು ಮಾಡಿದ್ದರು. ಹಾಗಾಗಿ ಅವರ ಮೇಲೆ ನಿಷೇಧ ಹೇರಲಾಗಿತ್ತು.

ಇದನ್ನೂ ಓದಿ:ಮಲಯಾಳಂ ಚಿತ್ರರಂಗದ ಮೇಲೆ ನಿಗಾ: ಚಿತ್ರೀಕರಣ ಸೆಟ್​ನಲ್ಲಿ ಮಾರುವೇಷದಲ್ಲಿ ಪೊಲೀಸರು

ಇನ್ನು ಈಗ ನಿಷೇಧ ತೆರವು ಮಾಡಲಾಗಿರುವ ಶೇನ್ ನಿಗಮ್ ಮೇಲೆಯೂ ಆರೋಪಗಳಿದ್ದವು. ಆರ್​ಡಿಎಕ್ಸ್ ಸಿನಿಮಾದ ಚಿತ್ರೀಕರಣದಿಂದ ಹೊರ ಹೋಗಿದ್ದನ್ನು ಆ ಸಿನಿಮಾದ ನಿರ್ಮಾಪಕರು ಪ್ರಶ್ನೆ ಮಾಡಿ ಅಮ್ಮಾಗೆ ದೂರುಗೆ ನೀಡಿದ್ದರು. ಆರ್​ಡಿಎಕ್ಸ್ ಸಿನಿಮಾದ ನಿರ್ದೇಶಕರೊಟ್ಟಿಗೆ ಭಿನ್ನಾಭಿಪ್ರಾಯದಿಂದಾಗಿ ಶೇನ್ ನಿಗಮ್ ಚಿತ್ರೀಕರಣ ಬಿಟ್ಟು ಹೊರಹೋಗಿದ್ದರು. ಇದರಿಂದಾಗಿ ಸಿನಿಮಾದ ಚಿತ್ರೀಕರಣ ನಿಂತು ಹೋಗಿ ನಿರ್ಮಾಪಕರಿಗೆ ನಷ್ಟವಾಗಿತ್ತು. ಆದರೆ ಈಗ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಲಾಗಿದ್ದು ಶೇನ್ ಮೇಲೆ ಹೇರಿದ್ದ ನಿಷೇಧ ಹಿಂಪಡೆಯಲಾಗಿದೆ.

ಏಪ್ರಿಲ್ ತಿಂಗಳಿನಲ್ಲಿ ಈ ಇಬ್ಬರು ನಟರ ಮೇಲೆ ನಿಷೇಧವನ್ನು ಮಲಯಾಳಂ ಚಿತ್ರತಂಡ ಹೇರಿತ್ತು. ಆ ಸಮಯದಲ್ಲಿ ಮಾತನಾಡಿದ್ದ ಮಲಯಾಳಂ ಚಿತ್ರರಂಗದ ನಿರ್ಮಾಪಕರ ಸಂಘದ ಕೆಲ ಮುಖಂಡರು, ಮಲಯಾಳಂ ಚಿತ್ರರಂಗದ ಕೆಲವು ನಟರು ಶೂಟಿಂಗ್ ಸೆಟ್​ನಲ್ಲಿ ಮಾದಕ ವಸ್ತು ಸೇವಿಸುತ್ತಾರೆಂದು ಅಂಥಹವರ ಪಟ್ಟಿ ತಮ್ಮ ಬಳಿ ಇದೆಯೆಂದು ಹೇಳಿದ್ದರು. ಈ ಹೇಳಿಕೆ ವಿವಾದ ಎಬ್ಬಿಸಿತ್ತು. ಕೇರಳ ಪೊಲೀಸರು ಸಹ ಈ ಬಗ್ಗೆ ಪ್ರತಿಕ್ರಿಯಿಸಿ ಇನ್ನು ಮುಂದೆ ಶೂಟಿಂಗ್ ಸೆಟ್​ಗಳ ಮೇಲೆ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ