ಕಳೆದ ಅಕ್ಟೋಬರ್ ತಿಂಗಳಲ್ಲಿ ಉದ್ಯಮಿ ಗೌತಮ್ ಜತೆ ಕಾಜಲ್ ಮದುವೆ ಆಗಿದ್ದರು. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುವ ದಂಪತಿ, ಅಭಿಮಾನಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಈ ಮಧ್ಯೆ ಪತಿ ಗೌತಮ್ ಬಗ್ಗೆ ಕಾಜಲ್ ತಕರಾರು ತೆಗೆದಿದ್ದಾರೆ. ಹಾಗಂತ ಇದು ಗಂಭೀರ ದೂರು ಎಂದು ಪರಿಗಣಿಸಬೇಡಿ.
ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಕಾಜಲ್ಗೆ ಇದೆ. ಪ್ಯಾರಿಸ್ ಪ್ಯಾರಿಸ್ ಸೇರಿ ಐದಾರು ಪ್ರಾಜೆಕ್ಟ್ಗಳು ಅವರ ಕೈಯಲ್ಲಿವೆ. ಈ ಪೈಕಿ ಕೆಲ ಚಿತ್ರಗಳು ರಿಲೀಸ್ಗೆ ರೆಡಿ ಇದ್ದು, ಕೊರೊನಾದಿಂದ ಬಿಡುಗಡೆ ವಿಳಂಬವಾಗಿದೆ. ಈಗ ಕೊವಿಡ್ ಕೊಂಚ ಕಡಿಮೆ ಆಗಿದ್ದು, ಜನರು ನಿಧಾನವಾಗಿ ಸುತ್ತಾಡೋಕೆ ಆರಂಭಿಸಿದ್ದಾರೆ. ಅದೇ ರೀತಿ, ಕಾಜಲ್ ಕೂಡ ಇತ್ತೀಚೆಗೆ ಹೊರಗೆ ಹೋಗುವ ಪ್ಲ್ಯಾನ್ ಮಾಡಿದ್ದರು. ಮುಂದೇನಾಯ್ತು ಎನ್ನುವ ಬಗ್ಗೆ ಅವರು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಕಾಜಲ್ ಇನ್ಸ್ಟಾಗ್ರಾಂ ಸ್ಟೋರಿ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ, ನಾನು ಸಂಪೂರ್ಣವಾಗಿ ರೆಡಿ ಆಗಿರುತ್ತೇನೆ. ಆದರೆ ಗಂಡ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳ ಬಳಿ ಗಂಡನ ಬಗ್ಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳ ಜತೆ ಮಾತನಾಡಿದ್ದ ಕಾಜಲ್, ‘ನನ್ನ ಪತಿ ಚಿತ್ರರಂಗ ತೊರೆಯಲು ಹೇಳಿದರೆ ನಾನು ಹಾಗೆಯೇ ಮಾಡುತ್ತೇನೆ. ನಾನು ಇಂದು ಈ ಸ್ಥಾನದಲ್ಲಿ ಇರುವುದಕ್ಕೆ ಕಾರಣ ನನ್ನ ಪತಿ ಹಾಗೂ ನನ್ನ ಕುಟುಂಬ. ನಾನು ನನ್ನ ಪತಿಯ ಅನುಮತಿ ಪಡೆದೇ ನಟನೆ ಮುಂದುವರಿಸುತ್ತಿದ್ದೇನೆ’ ಎಂದಿದ್ದರು. ನಟಿ ಶಿಲ್ಪಾ ಶೆಟ್ಟಿ ಮದುವೆ ಆದ ನಂತರ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದುಕೊಂಡರು. ಸೋನಮ್ ಕಪೂರ್ ಕೂಡ ಮದುವೆ ನಂತರ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟಿವ್ ಇಲ್ಲ. ಈ ಸಾಲಿಗೆ ಈಗ ಕಾಜಲ್ ಕೂಡ ಸೇರಿಕೊಂಡರೂ ಅಚ್ಚರಿ ಇಲ್ಲ ಎಂದು ಚರ್ಚೆ ಆಗಿತ್ತು.
ಇದನ್ನೂ ಓದಿ: ನಟಿ ಕಾಜಲ್ ಅವರ ಹೃದಯ ವಿಶಾಲತೆ ಬಗ್ಗೆ ಎಲ್ಲರಿಂದ ಮೆಚ್ಚುಗೆ