ಕಾಜಲ್​ ಅಗರ್​ವಾಲ್​ ನಟನೆಯ ‘ಸತ್ಯಭಾಮಾ’ ಸಿನಿಮಾ ಮೇ 17ಕ್ಕೆ ಬಿಡುಗಡೆ

ಹೊಸದೊಂದು ಟೀಸರ್ ಅನಾವರಣ ಮಾಡುವ​ ಮೂಲಕ ‘ಸತ್ಯಭಾಮಾ’ ಸಿನಿಮಾದ ರಿಲೀಸ್​ ದಿನಾಂಕ ತಿಳಿಸಲಾಗಿದೆ. ಈ ಚಿತ್ರ ಮೇ 17ರಂದು ತೆರೆಕಾಣಲಿದೆ. ವಿದೇಶದಲ್ಲೂ ಏಕಕಾಲಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಎಸಿಪಿ ಸತ್ಯಭಾಮಾ ಎಂಬ ಪಾತ್ರವನ್ನು ಕಾಜಲ್​​ ಅಗರ್​ವಾಲ್​ ನಿಭಾಯಿಸಿದ್ದಾರೆ. ಟೀಸರ್​ನಲ್ಲಿ ಅವರ ಲುಕ್​ ಗಮನ ಸೆಳೆದಿದೆ.

ಕಾಜಲ್​ ಅಗರ್​ವಾಲ್​ ನಟನೆಯ ‘ಸತ್ಯಭಾಮಾ’ ಸಿನಿಮಾ ಮೇ 17ಕ್ಕೆ ಬಿಡುಗಡೆ
ಕಾಜಲ್​ ಅಗರ್​ವಾಲ್​
Follow us
ಮದನ್​ ಕುಮಾರ್​
|

Updated on: Apr 22, 2024 | 8:54 PM

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಕಾಜಲ್​ ಅಗರ್​ವಾಲ್​ (Kajal Aggarwal) ಅವರು ಈಗಲೂ ಅಷ್ಟೇ ಡಿಮ್ಯಾಂಡ್​ ಉಳಿಸಿಕೊಂಡಿದ್ದಾರೆ. ಮದುವೆ ಬಳಿಕ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ನಿಲ್ಲಿಸಬಹುದು ಎಂದು ಕೆಲವರು ಊಹಿಸಿದ್ದರು. ಆದರೆ ಹಾಗೆ ಆಗಲಿಲ್ಲ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಕಾಜಲ್​ ನಟಿಸುತ್ತಿದ್ದಾರೆ. ಈಗ ಅವರು ನಟಿಸಿರುವ ‘ಸತ್ಯಭಾಮಾ’ ಸಿನಿಮಾ (Sathyabhama Movie) ತಂಡದಿಂದ ಒಂದು ಅಪ್​ಡೇಟ್​ ಸಿಕ್ಕಿದೆ. ಈ ಚಿತ್ರದ ರಿಲೀಸ್​ ಡೇಟ್​ ಅನೌನ್ಸ್​ ಮಾಡಲಾಗಿದೆ. ಅದರ ಜೊತೆಗೆ ಒಂದು ಮಾಸ್​ ಟೀಸರ್​ (Sathyabhama Teaser) ಕೂಡ ಬಿಡುಗಡೆ ಆಗಿದೆ.

‘ಸತ್ಯಭಾಮಾ’ ಸಿನಿಮಾದಲ್ಲಿ ಕಾಜಲ್​ ಅಗರ್​ವಾಲ್​ ಅವರು ಹಿಂದೆಂದಿಗಿಂತಲೂ ಡಿಫರೆಂಟ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರಿಗೆ ಪೊಲೀಸ್​ ಅಧಿಕಾರಿಯ ಪಾತ್ರ ಇದೆ. ಈಗ ಬಿಡುಗಡೆ ಆಗಿರುವ ಟೀಸರ್​ನಲ್ಲಿ ಅವರು ಗನ್​ ಹಿಡಿದು ಅಬ್ಬರಿಸಿದ್ದಾರೆ. ಅವರ ಗತ್ತು ನೋಡಿ ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ. ಈ ಸಿನಿಮಾಗಾಗಿ ಅವರ ಅಭಿಮಾನಿಗಳು ಕಾದಿದ್ದಾರೆ.

ಟೀಸರ್​ ಮೂಲಕ ‘ಸತ್ಯಭಾಮಾ’ ಚಿತ್ರದ ಬಿಡುಗಡೆ ದಿನಾಂಕವನ್ನು ತಿಳಿಸಲಾಗಿದೆ. ಈ ಸಿನಿಮಾ ಮೇ 17ರಂದು ಬಿಡುಗಡೆ ಆಗಲಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಸಿನಿಮಾದಲ್ಲಿ ಎಸಿಪಿ ಸತ್ಯಭಾಮಾ ಎಂಬ ಪಾತ್ರಕ್ಕೆ ಕಾಜಲ್​ ಅಗರ್​ವಾಲ್​ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​ ನಟನೆಯ 171ನೇ ಚಿತ್ರದ ಹೆಸರು ‘ಕೂಲಿ’; ಬಂತು ಭರ್ಜರಿ ಟೀಸರ್​

ವಿಶೇಷ ಏನೆಂದರೆ, ಈ ಟೀಸರ್ ಹಂಚಿಕೊಂಡಿರುವ ನಿರ್ಮಾಪಕರು ಕಾಜಲ್​ಗೆ ಒಂದು ಬಿರುದು ನೀಡಿದ್ದಾರೆ. ಕಾಜಲ್​ ಅವರನ್ನು ‘ಕ್ವೀನ್​ ಆಫ್​ ಮಾಸಸ್​’ ಎಂದು ಕರೆಯಲಾಗಿದೆ. ಈ ಬಿರುದು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಇದಲ್ಲದೇ ಕಾಜಲ್​ ಅಗರ್​ವಾಲ್​ ಅವರು ‘ಇಂಡಿಯನ್​ 2’ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಒಟ್ಟಿನಲ್ಲಿ, ‘ಸತ್ಯಭಾಮಾ’, ‘ಇಂಡಿಯನ್​ 2’ ಸಿನಿಮಾಗಳ ಮೂಲಕ ಅವರ ಅಭಿಮಾನಿಗಳಿಗೆ ಬ್ಯಾಕ್​ ಟು ಬ್ಯಾಕ್​ ಮನರಂಜನೆ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.