ಮಹೇಶ್ ಬಾಬು (Mahesh Babu) ಸಿನಿಮಾಗಳು ದೊಡ್ಡ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತವೆ. ಈ ಕಾರಣಕ್ಕೆ ಅವರ ಚಿತ್ರಗಳು ತುಂಬಾನೇ ರಿಚ್ ಆಗಿ ಮೂಡಿ ಬರುತ್ತವೆ. ಅವರ ಪ್ರತಿ ಸಿನಿಮಾದಲ್ಲೂ ಹಾಡಿಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುತ್ತದೆ. ಈಗ ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದ (Sarkaru Vaari Paata Movie) ‘ಕಲಾವತಿ..’ (Kalaavathi Music Song) ಹಾಡು ರಿಲೀಸ್ ಆಗಿದೆ. ಈ ಸಾಂಗ್ನಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. ಈ ಹಾಡು ಈಗ ಕೋಟಿಕೋಟಿ ವೀಕ್ಷಣೆ ಕಾಣುತ್ತಿದೆ. ಅಭಿಮಾನಿಗಳು ವಿಡಿಯೋ ಸಾಂಗ್ ನೋಡಿ ಸಖತ್ ಖುಷಿಪಟ್ಟಿದ್ದಾರೆ.
ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಕಾರಣದಿಂದಲೂ ‘ಸರ್ಕಾರು ವಾರಿ ಪಾಟ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಅವರು ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರದ ‘ಕಲಾವತಿ..’ ಹಾಡು ಸಖತ್ ಟ್ರೆಂಡ್ ಆಗುತ್ತಿದೆ. ಯೂಟ್ಯೂಬ್ನ ಮ್ಯೂಸಿಕ್ ವಿಭಾಗದ ಟ್ರೆಂಡಿಂಗ್ನಲ್ಲಿ ಈ ಹಾಡು ನಂಬರ್ ಒನ್ ಸ್ಥಾನದಲ್ಲಿದೆ.
ಥಮನ್ ಎಸ್. ಅವರು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಸಂಗೀತ ಅನೇಕರಿಗೆ ಇಷ್ಟವಾಗಿದೆ. ಸಿದ್ ಶ್ರೀರಾಮ್ ಅವರು ಈ ಹಾಡನ್ನು ಹಾಡಿದ್ದಾರೆ. ಮಹೇಶ್ ಬಾಬು ಡ್ಯಾನ್ಸ್ ಸ್ಟೆಪ್ ಎಲ್ಲರಿಗೂ ಇಷ್ಟವಾಗಿದೆ. ಮಹೇಶ್ ಬಾಬು ಹಾಗೂ ಕೀರ್ತಿ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಚಿತ್ರದ ಹಾಡು ರಿಲೀಸ್ ಆದ ಒಂದೇ ದಿನಕ್ಕೆ 1.4 ಕೋಟಿ ಬಾರಿ ವೀಕ್ಷಣೆ ಕಂಡಿದೆ. 80 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ಲೈಕ್ ಮಾಡಿದ್ದಾರೆ. ಈ ಹಾಡಿಗೆ ಬರೋಬ್ಬರಿ 90 ಸಾವಿರ ಕಮೆಂಟ್ಗಳು ಬಂದಿರೋದು ವಿಶೇಷ. ಕೀರ್ತಿ ಸುರೇಶ್ ಅವರು ‘ಮಹಾನಟಿ’ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡವರು. ಆದರೆ, ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರೂ ಯಶಸ್ಸು ಸಿಗಲಿಲ್ಲ. ಈಗ ಈ ಸಿನಿಮಾ ಮೂಲಕ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಅವರಿದ್ದಾರೆ.
Super ? @urstrulyMahesh continues his supremacy?#KalaavathiMusicVideo is now the MOST VIEWED South Indian song and MOST LIKED Tollywood song in 24hrs❤️?
▶️ https://t.co/fVmmhK2hAC#SarkaruVaariPaata#SVPOnMay12@KeerthyOfficial @ParasuramPetla @MusicThaman @saregamasouth pic.twitter.com/jR3bu50j4G
— Mythri Movie Makers (@MythriOfficial) February 14, 2022
ಹಾಡಿನ ಮೂಲಕ ಸಿನಿಮಾ ಹಿಟ್ ಆದ ಉದಾಹರಣೆ ಸಾಕಷ್ಟಿದೆ. ಈಗ ‘ಕಲಾವತಿ..’ಹಾಡಿನಿಂದ ‘ಸರ್ಕಾರು ವಾರಿ ಪಾಟ’ ಚಿತ್ರದ ಮೈಲೇಜ್ ಹೆಚ್ಚಿದರೂ ಅಚ್ಚರಿ ಏನಿಲ್ಲ. ಮೇ 12ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಮಹೇಶ್ ಬಾಬು ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾದು ಕೂತಿದ್ದಾರೆ. ಇದರ ಜತೆಗೆ ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲೂ ಮಹೇಶ್ ಬಾಬು ನಟಿಸುತ್ತಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಸೆಟ್ಟೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಹೇಶ್ ಬಾಬು ಹಾಗೂ ‘ದಳಪತಿ’ ವಿಜಯ್ ಫ್ಯಾನ್ಸ್ ಮಧ್ಯೆ ವಾರ್; ಕಾರಣ ಕೇಳಿದ್ರೆ ನಗ್ತೀರಾ
ಮಹೇಶ್ ಬಾಬು ದಿನವನ್ನು ಹಾಳು ಮಾಡಿದ ಮಗಳು ಸಿತಾರಾ; ವೈರಲ್ ಆಯ್ತು ಫೋಟೋ