‘ಕಲ್ಕಿ 2898 ಎಡಿ’ ಹೆಸರಲ್ಲಿ ಮಹಾಮೋಸ; ನಿರ್ಮಾಪಕರಿಂದ ದೊಡ್ಡ ಎಚ್ಚರಿಕೆ

'ಕಲ್ಕಿ 2898 ಎಡಿ' ನಿರ್ಮಾಪಕ ವೈಜಯಂತಿ ಮೂವೀಸ್ ನಕಲಿ ಆಡಿಷನ್ ಕರೆಗಳ ಕುರಿತು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಯಾವುದೇ ಏಜೆನ್ಸಿಗೆ ಆಡಿಷನ್ ನಡೆಸಲು ಹಕ್ಕು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಆಸಕ್ತರು ಯಾರೊಂದಿಗೂ ವೈಯಕ್ತಿಕ ಮಾಹಿತಿ ಹಾಗೂ ಹಣ ಹಂಚಿಕೊಳ್ಳಬಾರದು ಎಂದು ಕೋರಿದ್ದು, ನಕಲಿ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.

‘ಕಲ್ಕಿ 2898 ಎಡಿ’ ಹೆಸರಲ್ಲಿ ಮಹಾಮೋಸ; ನಿರ್ಮಾಪಕರಿಂದ ದೊಡ್ಡ ಎಚ್ಚರಿಕೆ
ಕಲ್ಕಿ

Updated on: Sep 04, 2026 | 12:16 PM

ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ವಂಚಿಸುವ ಜಾಲ ಸದಾ ಸಕ್ರಿಯವಾಗಿರುತ್ತದೆ. ಪ್ರಸಿದ್ಧ ಸಿನಿಮಾಗಳ ಹೆಸರನ್ನು ಬಳಸಿ ಜನರನ್ನು ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಭಾರತೀಯ ಚಿತ್ರರಂಗದ ದೊಡ್ಡ ಸಿನಿಮಾ ‘ಕಲ್ಕಿ 2898 ಎಡಿ’ (Kalki 2898 AD) ತಂಡ ಕೂಡ ಇಂತಹದೇ ಒಂದು ವಂಚನೆಯ ವಿರುದ್ಧ ಧ್ವನಿ ಎತ್ತಿದೆ. ಸಾರ್ವಜನಿಕರು ನಕಲಿ ಕೌಂಟಿಂಗ್ ಕರೆಗಳಿಗೆ ಮರುಳಾಗಬಾರದು ಎಂದು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಎಚ್ಚರಿಸಿದೆ.

‘ಕಲ್ಕಿ 2898 ಎಡಿ’ ಚಿತ್ರವನ್ನು ನಿರ್ಮಿಸಿರುವ ವೈಜಯಂತಿ ಮೂವೀಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿದೆ. ತಮ್ಮ ಸಂಸ್ಥೆಯ ಹೆಸರಿನಲ್ಲಿ ನಡೆಯುತ್ತಿರುವ ನಕಲಿ ಆಡಿಷನ್ ಕರೆಗಳ ಬಗ್ಗೆ ಎಚ್ಚರದಿಂದಿರುವಂತೆ ಕೋರಿದೆ. ನಾವು ಯಾವುದೇ ಮೂರನೇ ವ್ಯಕ್ತಿ ಅಥವಾ ಏಜೆನ್ಸಿಗೆ ನಟರ ಆಯ್ಕೆ ಪ್ರಕ್ರಿಯೆಯ ಹಕ್ಕನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ.

‘ಸಿನಿಮಾ ಆಸಕ್ತರು ಯಾವುದೇ ಕಾರಣಕ್ಕೂ ನಕಲಿ ವ್ಯಕ್ತಿಗಳಿಗೆ ತಮ್ಮ ವೈಯಕ್ತಿಕ ಮಾಹಿತಿ ನೀಡಬಾರದು. ಆಡಿಷನ್ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ಕೊಡಬೇಡಿ. ನಮ್ಮ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದೆ. ಅಧಿಕೃತ ಮಾಹಿತಿಗಾಗಿ ವೈಜಯಂತಿ ಮೂವೀಸ್ ಸೋಶಿಯಲ್ ಮೀಡಿಯಾ ಗಮನಿಸಿ ಎಂದಿದೆ.

ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಭಾಸ್, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಪ್ರಕಟವಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಈ ಸಿನಿಮಾ ಎರಡು ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಇದನ್ನೂ ಓದಿ: ‘ಕಲ್ಕಿ 2’ ಚಿತ್ರದಲ್ಲಿ ಆಲಿಯಾ ಭಟ್, ಸಾಯಿ ಪಲ್ಲವಿ ನಟಿಸ್ತಾರಾ? ಉತ್ತರಿಸಿದ ನಿರ್ದೇಶಕ ನಾಗ್ ಅಶ್ವಿನ್

‘ಕಲ್ಕಿ 2’ ಸಿನಿಮಾ ಇನ್ನಷ್ಟೇ ಆರಂಭವಾಗಬೇಕಿದೆ. ದೀಪಿಕಾ ಪಡುಕೋಣೆ ಅವರು ಈಗಾಗಲೇ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಸಿನಿಮಾದ ಶೂಟ್ ಯಾವಾಗ ಶುರುವಾಗುತ್ತದೆ ಎಂಬ ಕುತೂಹಲ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Loading...
Unable to load recommendations.
Follow Us