AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಣ್ ಜೋಹರ್ ನಿಜ ಬಣ್ಣ ಬಯಲು ಮಾಡಿದ ನಟಿ ರೆಜಿನಾ

ಕರಣ್ ಜೋಹರ್, ತಾವು ಮಹಿಳಾಪರ ಅಥವಾ ನಟಿಯರಿಗೆ ಆಗುವ ಅನ್ಯಾಯದ ಪರ ಎಂಬಂತೆ ಇಮೇಜು ಸೃಷ್ಟಿಸಿಕೊಂಡಿದ್ದಾರೆ. ಜಾನ್ಹವಿಗೆ ‘ಪೆದ್ದಿ’ ಸಿನಿಮಾನಲ್ಲಿ ಅನ್ಯಾಯ ಆಗಿದೆ ಎಂಬರ್ಥ ಬರುವಂತೆ ಕರಣ್ ಮಾತನಾಡಿದ್ದರು. ಆದರೆ ದಕ್ಷಿಣದ ನಟಿ ರೆಜಿನಾ ಕೆಸಾಂಡ್ರಾ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಕರಣ್ ಜೋಹರ್ ಹೆಸರು ಹೇಳಿ, ಆರೋಪ ಮಾಡಿದ್ದಾರೆ.

ಕರಣ್ ಜೋಹರ್ ನಿಜ ಬಣ್ಣ ಬಯಲು ಮಾಡಿದ ನಟಿ ರೆಜಿನಾ
Karan Johar Regina
ಮಂಜುನಾಥ ಸಿ.
|

Updated on: Nov 05, 2026 | 6:47 PM

Share

ಕರಣ್ ಜೋಹರ್, ‘ಕಾಫಿ ವಿತ್ ಕರಣ್’ ಸೀಸನ್ 9ನ್ನು ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗಷ್ಟೆ ಶೋಗೆ ಜಾನ್ಹವಿ ಕಪೂರ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ‘ಪೆದ್ದಿ’ ಸಿನಿಮಾ ವಿವಾದದ ಬಗ್ಗೆ ಕರಣ್ ಮಾತನಾಡಿದರು. ಜಾನ್ಹವಿಗೆ ಅನ್ಯಾಯವಾಗಿದೆ ಎಂಬರ್ಥ ಬರುವಂತೆ ಅವರ ಪ್ರಶ್ನೆ ಇತ್ತು. ಜಾನ್ಹವಿ ಸಹ, ‘ನನಗೆ ಪ್ರತಿಭಟಿಸಲು ಆಗಲಿಲ್ಲ, ಆ ರೀತಿಯ ವಾತಾವರಣ ಇತ್ತು’ ಎಂಬಂತೆ ಮಾತನಾಡಿದ್ದರು. ಕರಣ್ ಸಹ, ತಾವು ಮಹಿಳಾಪರ ಅಥವಾ ನಟಿಯರಿಗೆ ಆಗುವ ಅನ್ಯಾಯದ ಪರ ಎಂಬಂತೆ ಇಮೇಜು ಸೃಷ್ಟಿಸಿಕೊಂಡಿದ್ದಾರೆ. ಆದರೆ ದಕ್ಷಿಣದ ನಟಿ ರೆಜಿನಾ ಕೆಸಾಂಡ್ರಾ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಕರಣ್ ಜೋಹರ್ ಹೆಸರು ಹೇಳಿ, ಆರೋಪ ಮಾಡಿದ್ದಾರೆ.

ದಕ್ಷಿಣದ ಖ್ಯಾತ ನಟಿ ರೆಜಿನಾ ಕೆಸಾಂಡ್ರಾ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ‘ಪೆದ್ದಿ’ ಚಿತ್ರದಲ್ಲಿ ತಮ್ಮ ಪಾತ್ರವನ್ನು ಗ್ಲಾಮರಸ್ ಆಗಿ ಬಿಂಬಿಸಲಾಗಿದೆ ಎಂಬ ಜಾನ್ವಿ ಕಪೂರ್ ಅವರ ಹೇಳಿಕೆ ಹಾಗೂ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ ತಮ್ಮ ಅನುಭವದ ಕುರಿತು ರಾಧಿಕಾ ಆಪ್ಟೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಅದೇ ಸಂದರ್ಶನದಲ್ಲಿ ಕರಣ್ ಜೋಹರ್, ತಮ್ಮೊಂದಿಗೆ ನಡೆದುಕೊಂಡ ರೀತಿಯ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.

‘ನಾನು ಕರಣ್ ಜೋಹರ್ ನಿರ್ಮಾಣದ ‘ಕೇಸರಿ 2’ ಹಿಂದಿ ಸಿನಿಮಾನಲ್ಲಿ ನಟಿಸಿದ್ದೆ ಆದರೆ ಸಿನಿಮಾದ ಪ್ರಚಾರ ಮತ್ತು ಬಿಡುಗಡೆ ವೇಳೆ ಸಂಪೂರ್ಣವಾಗಿ ನನ್ನನ್ನು ನಿರ್ಲಕ್ಷಿಸಿದರು. ನನ್ನನ್ನು ಪ್ರಮೋಷನ್​​ಗೆ ಸಹ ಕರೆಯಲಿಲ್ಲ. ನನ್ನ ಹೆಸರು ಸಹ ಎಲ್ಲೂ ಉಲ್ಲೇಖಿಸಲಿಲ್ಲ. ಧರ್ಮಾ ಪ್ರೊಡಕ್ಷನ್​​ನ ಇನ್​​ಸ್ಟಾಗ್ರಾಂನಲ್ಲಿ ಆ ಸಿನಿಮಾದ ಹಾಡೊಂದನ್ನು ಹಂಚಿಕೊಳ್ಳಲಾಗಿತ್ತು. ಆ ಹಾಡಿನಲ್ಲಿ ನಾನು ಮಾತ್ರವೇ ಇದ್ದೆ. ಆದರೆ ನನಗೆ ಟ್ಯಾಗ್ ಸಹ ಅವರು ಮಾಡಿರಲಿಲ್ಲ, ಇದೆಲ್ಲವನ್ನೂ ನಾನು ಮಾತನಾಡುವುದಿಲ್ಲ, ಆದರೆ ಈಗ ಅವರು ಹೀಗೆ ದಕ್ಷಿಣ ಭಾರತದ ಚಿತ್ರರಂಗದ ಬಗ್ಗೆ ಹೀಗಳೆಯಬೇಕಾದರೆ ನಾನು ಮಾತನಾಡದೇ ಇರುವುದು ಸರಿಯಲ್ಲ ಎನಿಸಿತು ಹಾಗಾಗಿ ಹೇಳುತ್ತಿದ್ದೀನಿ’ ಎಂದಿದ್ದಾರೆ ರೆಜಿನಾ.

ಇದನ್ನೂ ಓದಿ:‘ರಾ’ ಸಂಸ್ಥಾಪಕ ಆರ್.ಎನ್. ಕಾವ್ ಬಯೋಪಿಕ್ ಘೋಷಿಸಿದ ಕರಣ್ ಜೋಹರ್

ಜಾನ್ಹವಿ ಹಾಗೂ ರಾಧಿಕಾ ಆಪ್ಟೆ ಕುರಿತಾಗಿ ಸಹ ಮಾತನಾಡಿರುವ ರೆಜಿನಾ ಕೆಸಾಂಡ್ರಾ, ‘ನಿಮಗೆ (ನಾಯಕಿಯರಿಗೆ) ಅಸಹನೀಯ ಅನಿಸಿದರೆ, ದಯವಿಟ್ಟು ಆ ಚಿತ್ರದಿಂದ ಹೊರನಡೆಯಬೇಕು. ನಮಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೇಳುವ ಪರಿಸ್ಥಿತಿಯಲ್ಲಿ ನಾವಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಇದು ಗಂಡಸು ಅಥವಾ ಹೆಂಗಸಿನ ವಿರುದ್ಧದ ವಿಷಯವಲ್ಲ. ಒಬ್ಬ ಮಹಿಳೆಯಾಗಿ ನನಗೆ ಬೆಂಬಲ ನೀಡುವುದು ತುಂಬಾ ಸುಲಭ, ನಾನು ಸಹಜವಾಗಿ ಮಹಿಳೆಯ ಪರವಾಗಿಯೇ ನಿಲ್ಲುತ್ತೇನೆ. ಆದರೆ ಇಂದು, ವಿಶೇಷವಾಗಿ ನೀವು ನೀಡಿದ ಉದಾಹರಣೆಗಳಲ್ಲಿರುವ ಇಬ್ಬರೂ, ಅವರು ಯಾರೆಂಬುದನ್ನು ನೋಡಿದರೆ ಚಿತ್ರದಿಂದ ಹೊರನಡೆಯಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ ಎಂದು ನನಗನ್ನಿಸುವುದಿಲ್ಲ’ ಎಂದಿದ್ದಾರೆ.

‘ನಂದಮೂರಿ ಬಾಲಕೃಷ್ಣ ಅವರು ದಶಕಗಳಿಂದಲೂ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ, ಪ್ರೇಕ್ಷಕರನ್ನು ಮನರಂಜಿಸುತ್ತಿದ್ದಾರೆ. ನಿಮಗೆ ಅವರೊಟ್ಟಿಗೆ ನಟಿಸಲು ಇಷ್ಟವಿಲ್ಲ ಎಂದರೆ ಒಪ್ಪಿಕೊಂಡಿದ್ದು ಏಕೆ, ಬಳಿಕ ಈಗ ದೂರುತ್ತಿರುವುದು ಏಕೆ?’ ಎಂದು ರೆಜಿನಾ ಪ್ರಶ್ನೆ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಧಿಕಾ ಆಪ್ಟೆ, ಬಾಲಕೃಷ್ಣ ಅವರ ಹೆಸರು ಹೇಳದೆ, ‘ನಾನು ನಟಿಸಿದ್ದ ದಕ್ಷಿಣ ಭಾರತ ಸಿನಿಮಾನಲ್ಲಿ ನನಗಿಂತ ಬಹಳ ಹಿರಿಯ ನಟನೊಟ್ಟಿಗೆ ನಾನು ರೊಮ್ಯಾನ್ಸ್ ಮಾಡಬೇಕಿತ್ತು, ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಯರ ಮೈಬಣ್ಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ’ ಎಂದೆಲ್ಲ ಹೇಳಿದ್ದರು. ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
'ಎಸ್​​ಐಆರ್​​ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ'
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ತಮಿಳುನಾಡಿಗೆ ಹರಿಯುತ್ತಿರುವ ಕಾವೇರಿ ನೀರು: ಬರಿದಾಗುತ್ತಿರುವ KRS!
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಎಳೆದಾಡಿದ ಪೊಲೀಸ್ರು: ಅಂಗಿ ಬಿಚ್ಚಿ ಗಾಯ ತೋರಿಸಿದ ರವಿಕುಮಾರ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಅಣ್ಣನ ಆರೋಗ್ಯ ವಿಚಾರಿಸಲು ಬೆಂಗಳೂರಿಗೆ ಬಂದ ರಜನೀಕಾಂತ್
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
ಬಸ್ ದರ ಏರಿಕೆ ಖಂಡಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಿಜೆಪಿ ಪ್ರತಿಭಟನೆ
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
‘ಎಲ್ಲರೂ ನೋಡಲೇಬೇಕಾದ ಸಿನಿಮಾ’; ರಾಮಾಯಣ ನೋಡಿ ವಿಮರ್ಶೆ ಕೊಟ್ಟ ಫ್ಯಾನ್ಸ್
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಚನ್ನಪಟ್ಟಣ: ಸುಳ್ಳೇರಿ ಗ್ರಾಮದಲ್ಲಿ ಮನೆ ಬಳಿಗೇ ಬರುತ್ತಿದೆ ಚಿರತೆ!
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಹಣ ಹಾಕಿದ್ರೆ ದೀಪಾವಳಿ ಹಬ್ಬ ಜೋರಾಗಿ ಮಾಡುತ್ತೇವೆ: ಗೃಹಲಕ್ಷ್ಮೀಯರು
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಪ್ರಿಯಾಂಕ್​​ ಖರ್ಗೆ ಹೇಳಿಕೆ ಖಂಡಿಸಿ ಜೆಡಿಎಸ್​​ನಿಂದ ಫ್ಲೆಕ್ಸ್​​
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ
ಕಬ್ಬು ಬೆಳೆಗಾರರಿಂದ ಜೈಲ್ ಭರೋ ಚಳವಳಿ: ಬೆಳಗಾವಿಯಲ್ಲಿ ಹೈಡ್ರಾಮಾ