
ಪ್ರಭಾಸ್ ಭಾರತದ ಸ್ಟಾರ್ ಪ್ಯಾನ್ ಇಂಡಿಯಾ (Pan Inda) ನಟ. ಅವರೆಷ್ಟು ಬ್ಯುಸಿ ಎಂದರೆ ಮುಂದಿನ ಮೂರು ನಾಲ್ಕು ವರ್ಷಗಳಿಗೆ ಈಗಲೇ ಡೇಟ್ಸ್ ಕೊಟ್ಟು ಕೂತಿದ್ದಾರೆ. ಒಟ್ಟಿಗೆ ಎರಡೆರಡು ಸಿನಿಮಾಗಳಲ್ಲಿ ನಟಿಸಿದರೂ ಈಗಿರುವ ಕಮಿಟ್ಮೆಂಟ್ ಮುಗಿಸಲು ಎರಡು ವರ್ಷವಾದರೂ ಬೇಕು. ಪ್ರಭಾಸ್ ಎಷ್ಟು ಬ್ಯುಸಿ ಎಂದರೆ ಈಗಾಗಲೇ ಬಿಡುಗಡೆ ಆಗಿ ಹಿಟ್ ಆಗಿರುವ ಸಿನಿಮಾಗಳ ಸೀಕ್ವೆಲ್ಗಳ ಭವಿಷ್ಯವೂ ಅತಂತ್ರದಲ್ಲಿದೆ. ಪ್ರಭಾಸ್ ಕೈಯಲ್ಲಿ ಪ್ರಸ್ತುತ ಎರಡು ಸೀಕ್ವೆಲ್ ಸಿನಿಮಾಗಳಿವೆ. ಒಂದು ‘ಕಲ್ಕಿ 2898 ಎಡಿ’ ಮತ್ತು ‘ಸಲಾರ್’ ಈ ಎರಡರಲ್ಲಿ ಮೊದಲಿಗೆ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಪ್ರಭಾಸ್ ಪ್ರಾರಂಭಿಸುತ್ತಿದ್ದಾರೆ. ಆದರೆ ‘ಸಲಾರ್’ ಸೀಕ್ವೆಲ್ ಭವಿಷ್ಯ ಈಗಲೂ ಅತಂತ್ರದಲ್ಲಿಯೇ ಇದೆ.
ಪ್ರಶಾಂತ್ ನೀಲ್ ನಿರ್ದೇಶಿಸಿ, ಪ್ರಭಾಸ್ ನಟಿಸಿದ್ದ ‘ಸಲಾರ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿತ್ತು. ‘ಸಾಹೋ’, ‘ರಾಧೆ-ಶ್ಯಾಮ್’, ‘ಆದಿಪುರುಷ್’ ಸಿನಿಮಾಗಳ ಸತತ ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ ಅವರನ್ನು ಸೋಲಿನ ಸುಳಿಯಿಂದ ಹೊರತಂಡ ಸಿನಿಮಾ ಅದಾಗಿತ್ತು. ಆದರೆ ‘ಸಲಾರ್’ ಬಿಡುಗಡೆ ಆಗಿ ಎರಡು ವರ್ಷಕ್ಕೂ ಹೆಚ್ಚು ಸಮಯವಾಗಿದೆ ಆದರೆ ಸಿನಿಮಾದ ಸೀಕ್ವೆಲ್ ಬಗ್ಗೆ ಯಾವುದೇ ಸುದ್ದಿ ಇಲ್ಲ. ಆದರೆ ‘ಸಲಾರ್’ ಬಿಡುಗಡೆ ಆಗಿ ಆರು ತಿಂಗಳ ಬಳಿಕ ಬಿಡುಗಡೆ ಆದ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ನ ಚಿತ್ರೀಕರಣಕ್ಕೆ ಓಕೆ ಹೇಳಿದ್ದಾರೆ ಪ್ರಭಾಸ್.
ಇದನ್ನೂ ಓದಿ:ಪ್ರಭಾಸ್ ಸಿನಿಮಾ ನಿರ್ದೇಶಕನ ಸಂಭಾವನೆ ಎಷ್ಟು ಕೋಟಿ ಗೊತ್ತೆ?
‘ಕಲ್ಕಿ 2898 ಎಡಿ’ ಸಿನಿಮಾ 2024ರ ಜೂನ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಕಲೆಕ್ಷನ್ ಮಾಡಿತು. ಇದೀಗ ಈ ಸಿನಿಮಾದ ಸೀಕ್ವೆಲ್ ಚಿತ್ರೀಕರಣಕ್ಕೆ ಒಪ್ಪಿಗೆ ಸೂಚಿಸಿರುವ ಪ್ರಭಾಸ್, ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ. ಆದರೆ ಅದಕ್ಕೂ ಮುಂಚೆ ಬಿಡುಗಡೆ ಆಗಿದ್ದ ‘ಸಲಾರ್’ ಸಿನಿಮಾದ ಬಗ್ಗೆ ಯಾವುದೇ ಸದ್ದಿಲ್ಲ.
‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ ಸಹ ಮಹತ್ವದ ಪಾತ್ರದಲ್ಲಿ ನಟಿಸಿದ್ದರು. ಆದರೆ ಸೀಕ್ವೆಲ್ನಲ್ಲಿ ದೀಪಿಕಾ ಪಡುಕೋಣೆ ಬದಲಿಗೆ ಬೇರೆ ನಟಿಯೊಬ್ಬರು ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಜೊತೆಗೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಅವರನ್ನು ಸಿನಿಮಾದಿಂದ ಹೊರಗಿಡಲಾಗಿದೆ. ಫೆಬ್ರವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಿ ಬಹುಷಃ 2027ರ ಆರಂಭದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ ಬಿಡುಗಡೆ ಆಗಲಿದೆ. ಸೀಕ್ವೆಲ್ನಲ್ಲಿ ಕಮಲ್ ಹಾಸನ್ ಅವರು ಪ್ರಭಾಸ್ ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ