ಅಂದುಕೊಂಡಿದ್ದಕ್ಕಿಂತಲೂ ಮೊದಲೇ ರಿಲೀಸ್ ಆಗಲಿದೆ ‘ಕಲ್ಕಿ 2898 ಎಡಿ’ ಸೀಕ್ವೆಲ್
‘ಕಲ್ಕಿ 2898 ಎಡಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದೆ. ಈಗಾಗಲೇ ಸಿನಿಮಾದ ಗಳಿಕೆ 1200 ಕೋಟಿ ರೂಪಾಯಿ ಸಮೀಪಿಸಿದೆ. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಸೀಕ್ವೆಲ್ ಬಗ್ಗೆ ನಿರ್ದೇಶಕರು ಈಗ ಮಾಹಿತಿ ನೀಡಿದ್ದಾರೆ.

‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮೊದಲ ಭಾಗ ರಿಲೀಸ್ ಆಗಿ ಸೂಪರ್ ಹಿಟ್ ಆಗಿರುವುದೇ ಇದಕ್ಕೆ ಕಾರಣ. ಈಗಾಗಲೇ ಸೀಕ್ವೆಲ್ಗೆ ಕೆಲಸ ಶುರುವಾಗಿದೆ. ಇದಕ್ಕೆ ಹೆಚ್ಚು ವರ್ಷ ಕಾಯೋ ಅವಶ್ಯಕತೆ ಇಲ್ಲ ಎಂದು ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಎರಡನೇ ಭಾಗ ಬೇಗ ರಿಲೀಸ್ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
‘ಕಲ್ಕಿ 2898 ಎಡಿ’ ಚಿತ್ರವನ್ನು ನಾಗ್ ಅಶ್ವಿನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 1100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೊದಲ ಭಾಗಕ್ಕಾಗಿ ನಿರ್ದೇಶಕರು ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಆದರೆ, ಎರಡನೇ ಭಾಗಕ್ಕೆ ಅಷ್ಟೊಂದು ಸಮಯ ತೆಗೆದುಕೊಳ್ಳುವುದಿಲ್ಲ ಎನ್ನುವ ಮಾತನ್ನು ನಾಗ್ ಅಶ್ವಿನ್ ಅವರು ಹೇಳಿದ್ದಾರೆ.
‘ಎರಡನೇ ಪಾರ್ಟ್ಗೆ ಕೆಲಸಗಳು ನಡೆಯುತ್ತಿವೆ. ಮೊದಲ ಭಾಗದ ಶೂಟಿಂಗ್ ನಡೆಯುವಾಗಲೇ ಎರಡನೇ ಭಾಗದ ಕೆಲವು ದೃಶ್ಯಗಳ ಶೂಟಿಂಗ್ ಆಗಿದೆ. ಸುಮಾರು 20 ದಿನಗಳ ಶೂಟ್ ಪೂರ್ಣಗೊಂಡಿದೆ. ಇನ್ನೂ ಸಾಕಷ್ಟು ಯೋಚಿಸಿ ಕೆಲಸ ಮಾಡಬೇಕಿದೆ. ಮೊದಲ ಪಾರ್ಟ್ಗೆ ತೆಗೆದುಕೊಂಡಷ್ಟು ಸಮಯ ಈ ಚಿತ್ರಕ್ಕೆ ಹಿಡಿಯುವುದಿಲ್ಲ’ ಎಂದಿದ್ದಾರೆ ನಾಗ್ ಅಶ್ವಿನ್. ಈ ಮೂಲಕ ಅಂದುಕೊಂಡಿದ್ದಕ್ಕಿಂತ ಮೊದಲೇ ಸಿನಿಮಾ ರಿಲೀಸ್ ಆಗುವ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ‘ಕಲ್ಕಿ 2898 ಎಡಿ’ ಸಿನಿಮಾಗೆ ಭರ್ಜರಿ ಆಫರ್; ಅತೀ ಕಡಿಮೆ ಮೊತ್ತಕ್ಕೆ ಟಿಕೆಟ್ ಮಾರಾಟ
2020ರ ಫೆಬ್ರವರಿ ತಿಂಗಳಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಘೋಷಣೆ ಆಯಿತು. ನಾಲ್ಕು ವರ್ಷಗಳ ಸಮಯ ತೆಗೆದುಕೊಂಡು ನಿರ್ದೇಶಕರು ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಕೊವಿಡ್ ಬಂದಿದ್ದು ಸಿನಿಮಾ ಕೆಲಸಗಳ ವಿಳಂಬಕ್ಕೆ ಕಾರಣ ಇರಬಹುದು. ಈಗ ಇನ್ನೆರಡು ವರ್ಷಗಳಲ್ಲಾದರೂ ‘ಕಲ್ಕಿ’ ಸಿನಿಮಾ ರಿಲೀಸ್ ಆಗುತ್ತದೆಯೇ ಎನ್ನುವ ಪ್ರಶ್ನೆ ಕಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:30 am, Tue, 6 August 24




