ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಲಿರುವ ಕಮಲ್ ಹಾಸನ್

Kamal Haasan movie: ಕಮಲ್ ನಟನೆಯ ಕೊನೆಯ ಸಿನಿಮಾ ‘ಥಗ್ ಲೈಫ್’ ಸಿನಿಮಾ ದೊಡ್ಡ ಫ್ಲಾಪ್ ಆಗಿದೆ. ಆದರೆ ಇದೀಗ ಬಲು ಚರ್ಚಿತ, ಸ್ಟಾರ್ ನಿರ್ದೇಶಕರ ಸಿನಿಮಾನಲ್ಲಿ ನಟಿಸಲು ಕಮಲ್ ಹಾಸನ್ ಸಜ್ಜಾಗುತ್ತಿದ್ದಾರೆ. ಕಮಲ್ ಅಭಿಮಾನಿಗಳ ಜೊತೆಗೆ ಸಿನಿಮಾ ಪ್ರೇಮಿಗಳಿಗೂ ಸಹ ಈ ಸುದ್ದಿ ಕುತೂಹಲ ಮೂಡಿಸಿದೆ. ಈಗ ಸ್ಟಾರ್ ನಿರ್ದೇಶಕನ ಜೊತೆಗೆ ಕಮಲ್ ಹಾಸನ್ ಕೈಜೋಡಿಸಿದ್ದಾರೆ.

ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಲಿರುವ ಕಮಲ್ ಹಾಸನ್
Kamal Haasan

Updated on: Jan 13, 2026 | 6:53 PM

ಕಮಲ್ ಹಾಸನ್ (Kamal Haasan), ಭಾರತ ಚಿತ್ರರಂಗದ ಸೂಪರ್ ಸ್ಟಾರ್ ನಟ. ಕಮರ್ಶಿಯಲ್ ಸಿನಿಮಾಗಳ ಜೊತೆಗೆ ಪ್ರಯೋಗಾತ್ಮಕ ಸಿನಿಮಾಗಳು, ಸಂದೇಶ ಹೊಂದಿದ ಸಿನಿಮಾಗಳು ಹೀಗೆ ಅನೇಕ ಮಾದರಿಯ ಸಿನಿಮಾಗಳಲ್ಲಿ ನಟಿಸಿ ಎಲ್ಲರದಲ್ಲೂ ಟಾಪ್ ಎನಿಸಿಕೊಂಡಿದ್ದಾರೆ. ಆದರೆ ಕಮಲ್ ನಟನೆಯ ಕೊನೆಯ ಸಿನಿಮಾ ‘ಥಗ್ ಲೈಫ್’ ಸಿನಿಮಾ ದೊಡ್ಡ ಫ್ಲಾಪ್ ಆಗಿದೆ. ಆದರೆ ಇದೀಗ ಬಲು ಚರ್ಚಿತ, ಸ್ಟಾರ್ ನಿರ್ದೇಶಕರ ಸಿನಿಮಾನಲ್ಲಿ ನಟಿಸಲು ಕಮಲ್ ಹಾಸನ್ ಸಜ್ಜಾಗುತ್ತಿದ್ದಾರೆ. ಕಮಲ್ ಅಭಿಮಾನಿಗಳ ಜೊತೆಗೆ ಸಿನಿಮಾ ಪ್ರೇಮಿಗಳಿಗೂ ಸಹ ಈ ಸುದ್ದಿ ಕುತೂಹಲ ಮೂಡಿಸಿದೆ.

ಹಲವು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ, ಭಾರತದ ಅತ್ಯುತ್ತಮ ಸಿನಿಮಾ ನಿರ್ದೇಶಕರುಗಳಲ್ಲಿ ಒಬ್ಬರೆನಿಸಿಕೊಂಡಿರುವ ವೆಟ್ರಿಮಾರನ್ ನಿರ್ದೇಶಿಸಲಿರುವ ಹೊಸ ಸಿನಿಮಾನಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ‘ಆಡುಕುಲಂ’, ‘ವಿಸಾರನೈ’, ‘ವಿಡುದಲೈ’, ‘ವಡ ಚೆನ್ನೈ’, ‘ಅಸುರನ್’ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿರುವ ವೆಟ್ರಿಮಾರನ್ ಇದೀಗ ಕಮಲ್ ಹಾಸನ್ ಅವರ ಸಿನಿಮಾ ನಿರ್ದೇಶಿಸಲಿದ್ದಾರೆ. ಇಬ್ಬರು ಅದ್ಭುತ ಪ್ರತಿಭಾವಂತರು ಒಟ್ಟಿಗೆ ಸೇರಿದಾಗ ಅದ್ಭುತ ಸಿನಿಮಾವೇ ಹೊರಹೊಮ್ಮಲಿದೆ ಎಂಬುದು ಸಿನಿಮಾ ಪ್ರೇಮಿಗಳ ನಿರೀಕ್ಷೆ.

ವೆಟ್ರಿಮಾರನ್ ಮತ್ತು ಕಮಲ್ ಹಾಸನ್ ಅವರುಗಳು ಈಗಾಗಲೇ ಸಿನಿಮಾದ ಕತೆಯ ಬಗ್ಗೆ ಚರ್ಚೆ ನಡೆಸಿದ್ದು ಇಬ್ಬರೂ ಸಹ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ವೆಟ್ರಿಮಾರನ್ ಅವರ ಮುಂದಿನ ಸಿನಿಮಾ ಕಮಲ್ ಹಾಸನ್ ಜೊತೆಗೇ ಆಗಿರಲಿದೆ ಎನ್ನಲಾಗುತ್ತಿದೆ. ಕಮಲ್ ಹಾಸನ್ ಅವರ ಕೆಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು ಅವುಗಳ ಮುಗಿದ ಬಳಿಕ ವೆಟ್ರಿಮಾರನ್ ಜೊತೆಗೆ ಸಿನಿಮಾ ಶುರು ಮಾಡಲಿದ್ದಾರಂತೆ. ಸಿನಿಮಾದ ಇತರೆ ಪಾತ್ರಗಳ ಆಯ್ಕೆ ಚಾಲ್ತಿಯಲ್ಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ನಿವೃತ್ತಿ ಬಗ್ಗೆ ಕಮಲ್ ಹಾಸನ್ ಮಾತು: ಕೊನೆ ಸಿನಿಮಾ ಯಾವಾಗ?

ವೆಟ್ರಿಮಾರನ್ ಪ್ರಸ್ತುತ ಸಿಂಭು ನಟನೆಯ ‘ಅರಸನ್’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದು ಸಹ ಅವರ ‘ವಡ ಚೆನ್ನೈ’ ಸಿನಿಮಾದ ಭಾಗವೇ ಆಗಿದೆ. ಸಿಂಭು ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಈಗಾಗಲೇ ಸಿನಿಮಾದ ಟೀಸರ್ ಸಹ ಬಿಡುಗಡೆ ಆಗಿದೆ. ಒಂದೇ ರಾತ್ರಿ ಮೂರು ಕೊಲೆ ಮಾಡಿದ ವ್ಯಕ್ತಿಯೊಬ್ಬನ ಕತೆ ಸಿನಿಮಾನಲ್ಲಿದೆ. ನಿಜ ಘಟನೆ ಆಧರಿಸಿದ ಸಿನಿಮಾ ಇದಾಗಿದ್ದು, ಸಿನಿಮಾ ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ಆಗಲಿದೆ.

ಇನ್ನು ಕಮಲ್ ಹಾಸನ್ ಅವರು ಕೆಲವೇ ತಿಂಗಳಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ಅವರು ತಮ್ಮ ಗೆಳೆಯ, ಸ್ಟಾರ್ ನಟ ರಜನೀಕಾಂತ್ ನಟಿಸುತ್ತಿರುವ ಸಿನಿಮಾದ ನಿರ್ಮಾಣ ಮಾಡುತ್ತಿದ್ದು, ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಇಂಡಿಯನ್ 3’ ಸಹ ಘೋಷಿಸಲಾಗಿದ್ದು, ಆದರೆ ಆ ಸಿನಿಮಾ ಶುರುವಾಗುವುದು ಅನುಮಾನವೇ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ