ತಮಿಳು ಚಿತ್ರರಂಗದಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿದ ಕಮಲ್ ಹಾಸನ್ ಆಸ್ತಿ ಎಷ್ಟು ಕೋಟಿ?

| Updated By: ರಾಜೇಶ್ ದುಗ್ಗುಮನೆ

Updated on: Nov 07, 2024 | 7:48 AM

Kamal Haasan Birthday: ಕಮಲ್ ಹಾಸನ್ ಅವರು ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಖ್ಯಾತಿ ಪಡೆದ ಒಬ್ಬ ಸೂಪರ್ ಸ್ಟಾರ್. ನಟನೆ, ನಿರ್ಮಾಣ, ನಿರೂಪಣೆ ಮತ್ತು ರಾಜಕೀಯ ಎಲ್ಲ ಕ್ಷೇತ್ರಗಳಲ್ಲೂ ಅವರು ಸಾಧನೆ ಮಾಡಿದ್ದಾರೆ. 'ಇಂಡಿಯನ್ 2' ಚಿತ್ರದ ಸೋಲಿನ ಮಧ್ಯೆಯೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಅವರ ಒಟ್ಟು ಆಸ್ತಿ, ಐಷಾರಾಮಿ ಕಾರುಗಳು, ಮನೆಗಳು ಮತ್ತು ಹೂಡಿಕೆಗಳ ಬಗ್ಗೆ ಇಲ್ಲಿದೆ ವಿವರ.

ತಮಿಳು ಚಿತ್ರರಂಗದಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿದ ಕಮಲ್ ಹಾಸನ್ ಆಸ್ತಿ ಎಷ್ಟು ಕೋಟಿ?
ಕಮಲ್ ಹಾಸನ್
Follow us on

ನಟ ಕಮಲ್ ಹಾಸನ್ ಅವರು ತಮಿಳು ಚಿತ್ರರಂಗದಲ್ಲಿ ದೊಡ್ಡ ಸಾಮ್ರಾಜ್ಯವನ್ನೇ ನಿರ್ಮಾಣ ಮಾಡಿದ್ದಾರೆ. ಅವರ ನಟನೆಯ ‘ಇಂಡಿಯನ್ 2’ ಸಿನಿಮಾ ಸೋತಿದೆ. ಆದರೆ, ಅವರ ಜನಪ್ರಿಯತೆ ಕಡಿಮೆ ಆಗಿಲ್ಲ. ಅವರ ಆಸ್ತಿಯೂ ಕಡಿಮೆ ಆಗಿಲ್ಲ. ಅವರು ಸಿನಿಮಾ ನಟನೆಯ ಜೊತೆಗೆ ತಮ್ಮದೇ ಆದ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇತ್ತೀಚೆಗೆ ಅವರು ‘ಬಿಗ್ ಬಾಸ್​’ಗೆ ಗುಡ್​ಬೈ ಹೇಳಿದ್ದಾರೆ.

ಕಮಲ್ ಹಾಸನ್ ಅವರು ನಟ, ನಿರ್ಮಾಪಕ, ಟಿವಿ ನಿರೂಪಕ, ರಾಜಕಾರಣಿ. ಹೀಗೆ ಹಲವು ಜವಾಬ್ದಾರಿಗಳನ್ನು ಅವರು ನಿರ್ವಹಿಸುತ್ತಿದ್ದಾರೆ. ಅವರು ಹಲವು ಐಕಾನಿಕ್ ಪಾತ್ರಗಳನ್ನು ಮಾಡಿದ್ದಾರೆ. ಕಮಲ್ ಹಾಸನ್ ತಮಿಳು ಹೀರೋ ಆದರೂ ಅವರಿಗೆ ಕನ್ನಡದಲ್ಲಿ, ತೆಲುಗಿನಲ್ಲಿ ಬೇಡಿಕೆ ಇದೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿ ಅವರು ಗಮನ ಸೆಳೆದಿದ್ದಾರೆ. ಇದರ ಸೀಕ್ವೆಲ್​ಗೆ ಇವರೇ ಪ್ರಮುಖ ವಿಲನ್.

ಕಮಲ್ ಹಾಸನ್ ಅವರ ಆಸ್ತಿ 584 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಕಳೆದ ಕೆಲ ವರ್ಷಗಳಿಂದ ಅವರ ಆಸ್ತಿಯಲ್ಲಿ ಏರಿಕೆ ಕಾಣುತ್ತಲೇ ಇದೆ. ಕಮಲ್ ಹಾಸನ್ ಅವರು ಹಲವು ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ. ಅವರು ಹಲವು ದುಬಾರಿ ವಸ್ತುಗಳನ್ನು ಹೊಂದಿದ್ದಾರೆ.

ಕಮಲ್ ಹಾಸನ್ ಅವರು ರಿಯಲ್ ಎಸ್ಟೇಟ್​ ಮೇಲೆ ಹೂಡಿಕೆ ಮಾಡಿದ್ದಾರೆ. ಅವರು ಚೆನ್ನೈನಲ್ಲಿ ಮನೆ ಹೊಂದಿದ್ದಾರೆ. ಚೆನ್ನೈನಲ್ಲಿ ಫ್ಲ್ಯಾಟ್​ಗಳನ್ನು ಕೂಡ ಹೊಂದಿದ್ದಾರೆ. ಅವರು ಚೆನ್ನೈನಲ್ಲಿ ಹೊಂದಿರುವ ಪ್ರಾಪರ್ಟಿಗಳ ಒಟ್ಟೂ ಬೆಲೆ 92.5 ಕೋಟಿ ರೂಪಾಯಿ ಆಗಿದೆ. ಅವರು ಆಗಾಗ ಲಂಡನ್​ಗೆ ತೆರಳುತ್ತಾರೆ. ಅಲ್ಲಿಯೂ ಅವರು ಮನೆ ಹೊಂದಿದ್ದಾರೆ.

ಕಮಲ್ ಹಾಸನ್ ಬಳಿ ದುಬಾರಿ ಕಾರುಗಳು ಇವೆ. ಬಿಎಂಡಬ್ಲ್ಯೂ 730 ಎಲ್​ಟಿ ಮತ್ತು ಲೆಕ್ಸಸ್​ ಎಲ್​ಎಕ್ಸ್ 570 ಕಾರುಗಳು ಅವರ ಬಳಿ ಇವೆ. ಅವರ ಬಳಿ ಬೋಟ್ ಕೂಡ ಇದೆ. ಹಾಗಂತ ಇದು ಸಾಮಾನ್ಯ ಬೋಟ್ ಅಲ್ಲ. ಇದು ಐಷಾರಾಮಿ ಬೋಟ್ ಆಗಿದೆ. ಆಗಾಗ ಇದರಲ್ಲಿ ಅವರು ಪ್ರಯಾಣ ಬೆಳೆಸುತ್ತಾರೆ.

ಇದನ್ನೂ ಓದಿ: ದ್ವಾರಕೀಶ್​ಗೆ ಅವಮಾನ ಮಾಡಿದ್ದ ಕಮಲ್ ಹಾಸನ್; ಏನಾಗಿತ್ತು ಆದಿನ?

ಕಮಲ್ ಹಾಸನ್ ಅವರು ಪ್ರತಿ ಚಿತ್ರಕ್ಕೆ 25-30 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ‘ವಿಕ್ರಮ್’ ಚಿತ್ರಕ್ಕೆ ಅವರು 50 ಕೋಟಿ ರೂಪಾಯಿ ಪಡೆದಿದ್ದಾರೆ. ‘ಇಂಡಿಯನ್ 2’ ಚಿತ್ರಕ್ಕಾಗಿ ಅವರು 150 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ‘ವಿಕ್ರಮ್’ ಬಳಿಕ ಅವರ ಖ್ಯಾತಿ ಹೆಚ್ಚಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ ಕಮಲ್ ಹಾಸನ್ ಬಳಿ ‘ಥಗ್​ ಲೈಫ್’, ‘ಇಂಡಿಯನ್ 3’ ಹಾಗೂ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ಇದೆ. ‘ಇಂಡಿಯನ್ 2’ ಸೋತ ಹಿನ್ನೆಲೆಯಲ್ಲಿ ‘ಇಂಡಿಯನ್ 3’ ನೇರವಾಗಿ ನೆಟ್​ಫ್ಲಿಕ್ಸ್ ಮೂಲಕ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Thu, 7 November 24