ದ್ವಾರಕೀಶ್​ಗೆ ಅವಮಾನ ಮಾಡಿದ್ದ ಕಮಲ್ ಹಾಸನ್; ಏನಾಗಿತ್ತು ಆದಿನ?

ದ್ವಾರಕೀಶ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ಅವರಿಗೆ ತಮಿಳಿನಲ್ಲಿ ಸಿನಿಮಾ ಮಾಡಬೇಕು ಎಂದು ಅನಿಸಿತು. ಇದಕ್ಕಾಗಿ ಅವರು ಡೇಟ್ಸ್ ಕೇಳಲು ಹೋಗಿದ್ದು ಕಮಲ್ ಹಾಸನ್ ಬಳಿ. ಆದರೆ, ಕಮಲ್ ಹಾಸನ್ ಕಡೆಯಿಂದ ದ್ವಾರಕೀಶ್ ಅವರಿಗೆ ಅವಮಾನ ಆಗಿ ಬಿಟ್ಟಿತ್ತು.

ದ್ವಾರಕೀಶ್​ಗೆ ಅವಮಾನ ಮಾಡಿದ್ದ ಕಮಲ್ ಹಾಸನ್; ಏನಾಗಿತ್ತು ಆದಿನ?
ಕಮಲ್ ಹಾಸನ್-ದ್ವಾರಕೀಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Nov 07, 2024 | 7:34 AM

ಕಮಲ್ ಹಾಸನ್ ಅವರಿಗೆ ಇಂದು (ನವೆಂಬರ್ 7) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಕಮಲ್ ಹಾಸನ್ ತಮಿಳು ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಅವರಿಗೆ ಕನ್ನಡ, ತೆಲುಗು, ಹಿಂದಿ ಮೊದಲಾದ ಭಾಷೆಗಳು ಮಾತನಾಡಲು ಬರುತ್ತವೆ. ಕನ್ನಡದಲ್ಲೂ ಅವರು ನಟಿಸಿದ್ದಾರೆ. ಅವರಿಗೆ ಇಲ್ಲಿಯೂ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಈ ಮೊದಲು ದ್ವಾರಕೀಶ್ ಅವರಿಗೆ ಅವಮಾನ ಮಾಡಿದ್ದರು ಎಂಬ ವಿಚಾರ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ ಕೇಳಿ.

ದ್ವಾರಕೀಶ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದವರು. ಅವರಿಗೆ ತಮಿಳಿನಲ್ಲಿ ಸಿನಿಮಾ ಮಾಡಬೇಕು ಎಂದು ಅನಿಸಿತು. ಇದಕ್ಕಾಗಿ ಅವರು ಡೇಟ್ಸ್ ಕೇಳಲು ಹೋಗಿದ್ದು ಕಮಲ್ ಹಾಸನ್ ಬಳಿ. ಆದರೆ, ಕಮಲ್ ಹಾಸನ್ ಕಡೆಯಿಂದ ದ್ವಾರಕೀಶ್ ಅವರಿಗೆ ಅವಮಾನ ಆಗಿ ಬಿಟ್ಟಿತ್ತು.

ದ್ವಾರಕೀಶ್ ಅವರು ಡೇಟ್ಸ್ ಕೇಳಿಕೊಂಡು ಕಮಲ್ ಹಾಸನ್ ಮನೆಗೆ ಹೋಗಿದ್ದೇನೋ ನಿಜ. ಆದರೆ, ಅವರಿಗೆ ಅಲ್ಲಿ ಡೇಟ್ಸ್ ಸಿಗಲಿಲ್ಲ. ಅವಮಾನ ಆಯಿತು. ‘ನಿಮ್ಮದೇ ಹುಡುಗ ಮದ್ರಾಸ್​ಗೆ ಬಂದು ಫೇಮಸ್ ಆಗಿದ್ದಾರಲ್ಲ. ಅಲ್ಲಿಗೆ ಹೋಗೋದು ಬಿಟ್ಟು ಇಲ್ಲಿಗೆ ಏಕೆ ಬಂದ್ರಿ’ ಎಂದು ಕುಹಕದು ನಗು ಆಡಿದ್ದರು ಕಮಲ್ ಹಾಸನ್.

ನಿಮ್ಮದೇ ಹುಡುಗ ಎಂದರೆ ರಜನಿಕಾಂತ್. ಬೆಂಗಳೂರಿನಲ್ಲಿ ಬೆಳೆದ ರಜನಿ ನಂತರ ತಮಿಳು ನಾಡಿಗೆ ಹೋದರು. ಅಲ್ಲಿ ದೊಡ್ಡ ಹೀರೋ ಆದರು. ಈ ಕಾರಣಕ್ಕೆ ಕಮಲ್ ಹಾಸನ್ ಅವರು, ರಜನಿಕಾಂತ್ ಡೇಟ್ಸ್ ತೆಗೆದುಕೊಳ್ಳೋದು ಬಿಟ್ಟು ಇಲ್ಲೇಕೆ ಬಂದಿರಿ ಎಂದು ಕೇಳಿದ್ದರು. ಇದರಿಂದ ದ್ವಾರಕೀಶ್​ಗೆ ಅವಮಾನ ಆಯಿತು. ಆ ಬಳಿಕ ದ್ವಾರಕೀಶ್ ಅವರು ರಜನಿಕಾಂತ್ ಬಳಿ ಹೋಗಿ ಡೇಟ್ಸ್ ಕೇಳಿದರು ಮತ್ತು ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು ಅನ್ನೋದು ಇತಿಹಾಸ.

ಕಮಲ್ ಹಾಸನ್​ ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ಗೌರವ ಇದೆ. ಅವರಿಗೆ ರಾಜ್​ಕುಮಾರ್ ಎಂದರೆ ತುಂಬಾನೇ ಗೌರವ ಇತ್ತು. ಅನೇಕ ವೇದಿಕೆಗಳ ಮೇಲೆ ಅವರು ರಾಜ್​ಕುಮಾರ್ ಅವರನ್ನು ಹೊಗಳಿದ್ದರು. ಇತ್ತೀಚೆಗೆ ಅವರು ಕನ್ನಡ ಸಿನಿಮಾ ಮಾಡಿಲ್ಲ.

ಇದನ್ನೂ ಓದಿ: 70ರ ವಯಸ್ಸಲ್ಲೂ ಕಲಿಯುವ ಉತ್ಸಾಹ, ಅಮೆರಿಕದಲ್ಲಿ ಕೋರ್ಸ್ ಸೇರಿಕೊಂಡ ಕಮಲ್ ಹಾಸನ್

ಕಮಲ್ ಹಾಸನ್ ಅವರು ‘ಥಗ್​ ಲೈಫ್’ ಹೆಸರಿನ ತಮಿಳಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದನ್ನು ಮಣಿರತ್ನಂ ಅವರು ನಿರ್ದೇಶಣ ಮಾಡುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.