Mani Ratnam: ಮಣಿರತ್ನಂ ಹುಟ್ಟುಹಬ್ಬಕ್ಕೆ ವಿಶೇಷ ಮಾತುಗಳಿಂದ ಶುಭ ಕೋರಿದ ನಟ ಕಮಲ್​ ಹಾಸನ್​

Mani Ratnam Birthday: ಬಣ್ಣದ ಲೋಕದಲ್ಲಿ ಮಣಿರತ್ನಂ ಅವರಿಗೆ ಇರುವ ಅನುಭವ ಅಪಾರ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಕೂಡ ಬೇಡಿಕೆ ಉಳಿಸಿಕೊಂಡಿದ್ದಾರೆ.

Mani Ratnam: ಮಣಿರತ್ನಂ ಹುಟ್ಟುಹಬ್ಬಕ್ಕೆ ವಿಶೇಷ ಮಾತುಗಳಿಂದ ಶುಭ ಕೋರಿದ ನಟ ಕಮಲ್​ ಹಾಸನ್​
ಮಣಿರತ್ನಂ, ಕಮಲ್​ ಹಾಸನ್​
Follow us
ಮದನ್​ ಕುಮಾರ್​
|

Updated on: Jun 02, 2023 | 1:08 PM

ಖ್ಯಾತ ನಿರ್ದೇಶಕ ಮಣಿರತ್ನಂ ಅವರಿಗೆ ಇಂದು (ಜೂನ್ 2) ಹುಟ್ಟುಹಬ್ಬದ (Mani Ratnam Birthday) ಸಂಭ್ರಮ. ಈ ಪ್ರಯುಕ್ತ ಅನೇಕ ಸೆಲೆಬ್ರಿಟಿಗಳು ಅವರಿಗೆ ವಿಶ್​ ಮಾಡುತ್ತಿದ್ದಾರೆ. ಕಮಲ್​ ಹಾಸನ್ (Kamal Haasan)​ ಕೂಡ ವಿಶೇಷ ಮಾತುಗಳ ಮೂಲಕ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಮಣಿರತ್ನಂ (Mani Ratnam) ಮಾಡಿದ ಸಾಧನೆಯನ್ನು ಅವರು ಕೊಂಡಾಡಿದ್ದಾರೆ. ಬಣ್ಣದ ಲೋಕದಲ್ಲಿ ಮಣಿರತ್ನಂ ಅವರಿಗೆ ಇರುವ ಅನುಭವ ಅಪಾರ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇಂದಿಗೂ ಕೂಡ ಬೇಡಿಕೆ ಉಳಿಸಿಕೊಂಡಿದ್ದಾರೆ. ಅನೇಕ ಸ್ಟಾರ್​ ಕಲಾವಿದರ ಜೊತೆ ಅವರು ಕೆಲಸ ಮಾಡಿದ್ದಾರೆ. ಈ ವರ್ಷ ಅವರು ‘ಪೊನ್ನಿಯಿನ್​ ಸೆಲ್ವನ್ 2’ ಸಿನಿಮಾ ಮೂಲಕ ಗೆಲುವು ಕಂಡರು. ಈ ಎಲ್ಲ ಕಾರಣಗಳಿಂದಾಗಿ ಮಣಿರತ್ನಂ ಅವರು ಅನೇಕರಿಗೆ ಮಾದರಿ ಆಗಿದ್ದಾರೆ. ಅಭಿಮಾನಿಗಳು, ಆಪ್ತರು ಅವರಿಗೆ ವಿಶ್​ ಮಾಡುತ್ತಿದ್ದಾರೆ.

‘ಸುತ್ತಲೂ ನೀವು ಸೃಷ್ಟಿಸಿದ ಖುಷಿಯಿಂದ ಜೀವನವನ್ನು ಎಣಿಸುವುದಾದರೆ, ನಿಮ್ಮ ಸುತ್ತ ಇರುವ ಸ್ನೇಹಿತರ ಸಂಖ್ಯೆಯಿಂದ ವಯಸ್ಸನ್ನು ಎಣಿಸುವುದಾದರೆ ನೀವು ಈಗಿರುವುದಕ್ಕಿಂತಲೂ ಹಿರಿಯ ವ್ಯಕ್ತಿ ಆಗುತ್ತೀರಿ. ಕಲೆಯ ಮೂಲಕ ಲಕ್ಷಾಂತರ ಹೃದಯಗಳನ್ನು ಮುಟ್ಟಿದ ಭಾರತೀಯ ಚಿತ್ರರಂಗದ ದೊರೆ ನೀವು. ಸಂಭಾಷಣೆಗಳಿಗೆ ಸುಂದರವಾದ ದೃಶ್ಯರೂಪ ನೀಡಿದವರು ನೀವು’ ಎಂದು ಮಣಿರತ್ನಂ ಅವರನ್ನು ಕಮಲ್​ ಹಾಸನ್​ ಹೊಗಳಿದ್ದಾರೆ.

‘ನೀವು ನಿರಂತರವಾಗಿ ಕಲಿಯುವ ಮೂಲಕ ಸವಾಲಿನ ಪ್ರಮಾಣವನ್ನು ಲೆಕ್ಕಿಸದೆ ಸಿನಿಮಾದ ಗಡಿಗಳನ್ನು ನಿರಂತರವಾಗಿ ಮೀರಿದ್ದೀರಿ. ಇಂದು ನೀವು ಮುಂದಿನ ಪೀಳಿಗೆಯ ಸಿನಿಮಾ ನಿರ್ದೇಶಕರನ್ನು ಪ್ರೇರೇಪಿಸುವ ಮಾಸ್ಟರ್ ಆಗಿದ್ದೀರಿ. ಅವರ ಮೂಲಕ ನಿಮ್ಮ ಪರಂಪರೆ ಶಾಶ್ವತವಾಗಿ ಮುಂದುವರಿಯುತ್ತದೆ. ‘ನಾಯಕನ್​’ ಸಿನಿಮಾದಿಂದ ‘ಕೆಎಚ್​234’ ಚಿತ್ರದವರೆಗೆ ನಿಮ್ಮೊಂದಿಗಿನ ನನ್ನ ಪಯಣ ಲಾಭದಾಯಕ ಮತ್ತು ಸಮೃದ್ಧಯುತವಾಗಿದೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಕಮಲ್​ ಹಾಸನ್​ ಅವರು ವಿಶ್​ ಮಾಡಿದ್ದಾರೆ.

ಇದನ್ನೂ ಓದಿ: ಮಣಿರತ್ನಂ ಜನ್ಮದಿನ: ನಿರ್ದೇಶಕನ ಪ್ರೇಮ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದ ಸುಹಾಸಿನಿ

‘ಪೊನ್ನಿಯಿನ್​ ಸೆಲ್ವನ್​ 2’ ಚಿತ್ರದ ಬಗ್ಗೆ ಕಮಲ್​ ಹಾಸನ್​ ಅವರು ಈ ಹಿಂದೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ‘ಮಣಿರತ್ನಂ ಅವರು ಇಂಥ ದೊಡ್ಡ ಚಿತ್ರವನ್ನು ಮಾಡಲು ಸಾಕಷ್ಟು ಧೈರ್ಯ ತೋರಿಸಿದ್ದಾರೆ. ಮಣಿರತ್ನಂ ಮತ್ತು ಅವರ ಛಾಯಾಗ್ರಾಹಕರು, ಸಂಗೀತಗಾರರು ಹಾಗೂ ಇಡೀ ತಂಡದವರು ಒಟ್ಟಾಗಿ ತಮಿಳು ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ’ ಎಂದು ಕಮಲ್​ ಹಾಸನ್​ ಹೊಗಳಿದ್ದರು.

ಇದನ್ನೂ ಓದಿ: ಮಣಿರತ್ನಂ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ; ನಿರ್ದೇಶಕನ ಬಗ್ಗೆ ನಟಿಗೆ ಇದೆ ವಿಶೇಷ ಗೌರವ

ಕಮಲ್​ ಹಾಸನ್​ ಅವರು ಅಭಿನಯದ ಜೊತೆಗೆ ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅವರ ಒಡೆತನದ ‘ರಾಜ್​ ಕಮಲ್​ ಫಿಲ್ಮ್ಸ್​ ಇಂಟರ್​ನ್ಯಾಷನಲ್​’ ಮೂಲಕ ಸಾಕಷ್ಟು ಅತ್ಯುತ್ತಮ ಸಿನಿಮಾಗಳು ಮೂಡಿಬಂದಿವೆ. ಈಗ ಆ ಬ್ಯಾನರ್​ನಿಂದ ಹೊಸದೊಂದು ಚಿತ್ರ ನಿರ್ಮಾಣ ಆಗಲಿದ್ದು, ಅದಕ್ಕೆ 100 ಕೋಟಿ ರೂಪಾಯಿ ಬಂಡವಾಳ ಹೂಡಲು​ ಕಮಲ್​ ಹಾಸನ್​ ಸಜ್ಜಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ