ಕಂಗನಾ ನಟನೆಯ ‘ಎಮರ್ಜೆನ್ಸಿ’ ಸಿನಿಮಾ (Emergency Movie) ಬಾಕ್ಸ್ ಆಫೀಸ್‌ನಲ್ಲಿ ಸೋತಿದೆ. ಈ ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಬರಲಿಲ್ಲ. ಈಗ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಅನೇಕರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾನ ಹೊಗಳಿ, ಕಂಗನಾ ನಿರ್ದೇಶನವನ್ನು ಮೆಚ್ಚಿ ಟ್ವೀಟ್ ಮಾಡುತ್ತಿದ್ದಾರೆ. ಈ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಪೂರ್ವ ನಿರ್ಧಾರಿತವಾಗಿ ತಮ್ಮ ಸಿನಿಮಾ ನೋಡದೇ ಇರಬೇಡಿ ಎಂದು ಅವರು ಕೋರಿದ್ದಾರೆ.
ಕಂಗನಾ ಮೊದಲಿನಿಂದಲೂ ಬಿಜೆಪಿ ಹಾಗೂ ಆ ಪಕ್ಷದ ಆಲೋಚನೆಗಳನ್ನು ಬೆಂಬಲಿಸುತ್ತಾ ಬಂದವರು. ಅವರು ‘ಎಮರ್ಜೆನ್ಸಿ’ ಸಿನಿಮಾ ಮಾಡುತ್ತಾರೆ ಎಂದಾಗ ಅನೇಕರು ಇದೊಂದು ಪ್ರೊಪೊಗಾಂಡ ಸಿನಿಮಾ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ರೀತಿ ಇಲ್ಲ ಎಂದು ಅನೇಕರಿಗೆ ಆ ಬಳಿಕ ಅನಿಸಿದೆ. ಈ ರೀತಿ ಪೂರ್ವ ನಿರ್ಧಾರಿತ ಆಗಬೇಡಿ ಎಂದು ಕಂಗನಾ ಕೋರಿಕೊಂಡಿದ್ದಾರೆ.
ಇತ್ತೀಚೆಗೆ ನಿರ್ದೇಶಕ ಸಂಜಯ್ ಗುಪ್ತಾ ಅವರು ‘ಎಮರ್ಜೆನ್ಸಿ’ ಚಿತ್ರವನ್ನು ಹೊಗಳಿದ್ದರು. ಈ ಬಗ್ಗೆ ಮಾತನಾಡಿರೋ ಕಂಗನಾ, ‘ಸಂಜಯ್ ಗುಪ್ತಾ ಅವರು ತಮಗೆ ಪೂರ್ವಾಗ್ರಹ ಪೀಡಿತ ಭಾವನೆಗಳು ಇವೆ ಎಂದು ಒಪ್ಪಿಕೊಂಡಿದ್ದಾರೆ. ನೀವು ವಿಫಲರಾಗುತ್ತಿರುವಾಗ ನನ್ನನ್ನು ಅರ್ಥಮಾಡಿಕೊಳ್ಳಲು ಏಕೆ ಪ್ರಯತ್ನಿಸುತ್ತಿದ್ದೀರಿ? ಅಚ್ಚರಿಯ ಸಂಗತಿ ಎಂದರೆ ಅವರು ತಾವು ವಿಫಲವಾಗಿದ್ದಾಗಿಯೂ ಅವರು ಒಪ್ಪಿಕೊಂಡಿದ್ದಾರೆ’ ಎಂದಿದ್ದಾರೆ ಕಂಗನಾ.
‘ನನ್ನ ಬಗ್ಗೆ ನಕಾರಾತ್ಮಕ ಚಿಂತನೆಗಳನ್ನು ಮಾತ್ರ ಇಟ್ಟುಕೊಂಡು, ನಕಾರಾತ್ಮಕವಾಗಿ ಮಾತ್ರ ಯೋಚನೆ ಮಾಡುವಾಗ ಮತ್ತು ನಾನು ಸೋಲು ಕಾಣಲಿ ಎಂದು ಬಯಸುವಾಗ ನಾನು ಏನು ಮಾಡುತ್ತಿದ್ದೇನೆ ಎಂದು ನಿಮಗೆ ಹೇಗೆ ಗೊತ್ತಾಗುತ್ತದೆ? ನನ್ನನ್ನು ಅರ್ಥಮಾಡಿಕೊಳ್ಳಲು ನಿಮಗೆ ಬುದ್ಧಿಶಕ್ತಿ ಇದೆಯೇ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
‘ನೀವು ಒಬ್ಬ ವ್ಯಕ್ತಿಯ ಬಗ್ಗೆ ವಿಶಾಲ ಹೃದಯಿ ಆಗಿ ತಿಳಿದುಕೊಳ್ಳಲು ಬಯಸುತ್ತೀರಿ ಎಂದರೆ ಆ ವಸ್ತು ಅಥವಾ ವಿಷಯದ ಬಗ್ಗೆ ನಿಮಗೆ ವಿಸ್ತೃತ ದೃಷ್ಟಿಕೋನವಿರಬೇಕು. ನೀವು ಯಾವ ರೀತಿಯ ಸಿನಿಮಾ ಮಾಡುತ್ತೀರಿ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಕಂಗನಾ ರಣಾವತ್, ಜಾವೇದ್ ಅಖ್ತರ್ ನಡುವಿನ ಸುದೀರ್ಘ ಕೋರ್ಟ್ ಕೇಸ್ ಅಂತ್ಯ
‘ಸಿನಿಮಾ ಇಂಡಸ್ಟ್ರಿ ದ್ವೇಷ ಮತ್ತು ಪೂರ್ವಾಗ್ರಹಗಳಿಂದ ಹೊರಬಂದು ಉತ್ತಮ ಕೆಲಸವನ್ನು ಒಪ್ಪಿಕೊಳ್ಳಬೇಕು. ಸಂಜಯ್ ಅವರೇ ಆ ತಡೆಗೋಡೆಯನ್ನು ಮುರಿದಿದ್ದಕ್ಕಾಗಿ ಧನ್ಯವಾದ. ಎಲ್ಲಾ ಸಿನಿಮಾ ಬುದ್ಧಿಜೀವಿಗಳಿಗೆ ನನ್ನ ಸಂದೇಶ. ನನ್ನ ಬಗ್ಗೆ ಯಾವುದೇ ಕಲ್ಪನೆಗಳನ್ನು ಎಂದಿಗೂ ಇಟ್ಟುಕೊಳ್ಳಬೇಡಿ. ನನ್ನನ್ನು ಕಂಡುಹಿಡಿಯಲು ಪ್ರಯತ್ನಿಸಬೇಡಿ, ನಾನು ನಿಮ್ಮ ವ್ಯಾಪ್ತಿಯಿಂದ ಹೊರಗಿದ್ದೇನೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.