ಅಬ್ಬಾ ಅದೆಷ್ಟು ಭಯಾನಕವಾಗಿದೆ ಬಾಬಿಯ ಹೊಸ ಲುಕ್; ಯಾವ ಚಿತ್ರದ್ದು?

ನೂರಾರು ಜನರ ಮಧ್ಯೆ ಬಾಬಿ ಡಿಯೋಲ್ ಅವರು ನಿಂತಿದ್ದಾರೆ. ಅವರ ಹಿಂಭಾಗದಲ್ಲಿ ಜಿಂಕೆಯ ಕೋಡುಗಳು ಇವೆ. ಉಧೀರನ್ ಅವರು ಮಾಡುತ್ತಿರುವ ಪಾತ್ರದ ಹೆಸರು.

ಅಬ್ಬಾ ಅದೆಷ್ಟು ಭಯಾನಕವಾಗಿದೆ ಬಾಬಿಯ ಹೊಸ ಲುಕ್; ಯಾವ ಚಿತ್ರದ್ದು?
ಕಂಗುವ

Updated on: Jan 27, 2024 | 2:28 PM

ಬಾಬಿ ಡಿಯೋಲ್ ಅವರಿಗೆ ‘ಅನಿಮಲ್’ ಸಿನಿಮಾ (Animal Movie) ಮರುಜನ್ಮ ನೀಡಿದೆ ಎಂದರೂ ತಪ್ಪಾಗಲಾರದು. ಹೊಸ ಹೊಸ ಆಫರ್​ಗಳು ಬಾಬಿಯನ್ನು ಹುಡುಕಿ ಬರುತ್ತಿವೆ. ಇಂದು (ಜನವರಿ 27) ಅವರಿಗೆ ಜನ್ಮದಿನದ ಸಂಭ್ರಮ. ಈ ಪ್ರಯುಕ್ತ ‘ಕಂಗುವ’ ಸಿನಿಮಾದ ಅವರ ಲುಕ್ ರಿವೀಲ್ ಆಗಿದೆ. ಈ ಸಿನಿಮಾದಲ್ಲಿನ ಅವರ ಲುಕ್ ಸಖತ್ ಭಯಾನಕವಾಗಿದೆ. ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಈ ಫೋಟೋಗೆ ನಾನಾ ಕಮೆಂಟ್​ಗಳು ಬರುತ್ತಿವೆ.

ಬಾಬಿ ಡಿಯೋಲ್ ಅವರು ‘ಅನಿಮಲ್’ ಚಿತ್ರದಲ್ಲಿ ಮಾಡಿದ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಒಂದೇ ಒಂದು ಡೈಲಾಗ್ ಇಲ್ಲದೆ ಇದ್ದರೂ ಅವರ ಪಾತ್ರ ಗಮನ ಸೆಳೆದಿತ್ತು. ಈಗ ಬಾಬಿ ಡಿಯೋಲ್ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ‘ಅನಿಮಲ್’ ಬಳಿಕ ಅವರು ‘ಕಂಗುವ’ ಚಿತ್ರದ ಮೂಲಕ ಮತ್ತೊಂದು ರಗಡ್ ಅವತಾರದಲ್ಲಿ ಬರೋಕೆ ರೆಡಿ ಆಗಿದ್ದಾರೆ.


ನೂರಾರು ಜನರ ಮಧ್ಯೆ ಬಾಬಿ ಡಿಯೋಲ್ ಅವರು ನಿಂತಿದ್ದಾರೆ. ಅವರ ಹಿಂಭಾಗದಲ್ಲಿ ಜಿಂಕೆಯ ಕೋಡುಗಳು ಇವೆ. ಉಧೀರನ್ ಅವರು ಮಾಡುತ್ತಿರುವ ಪಾತ್ರದ ಹೆಸರು. ಈ ಚಿತ್ರದಲ್ಲಿ ಅವರ ಪಾತ್ರ ಭಿನ್ನವಾಗಿರಲಿದೆ ಎಂಬುದು ಅಭಿಮಾನಿಗಳ ನಿರೀಕ್ಷೆ ಆಗಿತ್ತು. ಈಗ ರಿಲೀಸ್ ಆಗಿರುವ ಪೋಸ್ಟರ್ ಇದು ನಿಜವಾಗಿಸಿದೆ. ಪೋಸ್ಟರ್ ನೋಡಿದ ಅನೇಕರು ಅವರಿಗೆ ಜನ್ಮದಿನದ ಶುಭಾಶಯ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: Kanguva: ರೋಲೆಕ್ಸ್​ಗಿಂತಲೂ ಹೆಚ್ಚು ಭಯಾನಕ ‘ಕಂಗುವ’; ಹೊಸ ಅವತಾರದಲ್ಲಿ ಬಂದ ಸೂರ್ಯ

‘ಕಂಗುವ’ ಚಿತ್ರವನ್ನು ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸೂರ್ಯ, ದಿಶಾ ಪಟಾಣಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ತಮಿಳಿನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಲು ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇದೆ. ಈ ಸಿನಿಮಾದಲ್ಲಿ ಸೂರ್ಯ ಅವರು ಹಲವು ಗೆಟಪ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ