ರಾಜಮೌಳಿ ನಿರ್ದೇಶನದ ಚಿತ್ರಕ್ಕೆ ಮಹೇಶ್ ಬಾಬು ನಿರ್ಮಾಣ; ಹಾಗಾದ್ರೆ ನಟನೆ?
ರಾಜಮೌಳಿ ಅವರು ಈ ಸಿನಿಮಾಗೆ ನಿರ್ಮಾಪಕ ಅಲ್ಲ. ಹಾಗಿದ್ದರೂ ಕೂಡ ಅವರು ನಿರ್ಮಾಣದ ವಿಚಾರದಲ್ಲಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಕಾರಣದಿಂದಲೇ ಅವರು ಮಹೇಶ್ ಬಾಬುಗೆ ಈ ಸಲಹೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ನಟ ಮಹೇಶ್ ಬಾಬು (Mahesh Babu) ಅವರು ‘ಗುಂಟೂರು ಖಾರಂ’ ಸಿನಿಮಾದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ವರ್ಷ ಸಂಕ್ರಾಂತಿ ಪ್ರಯುಕ್ತ ಬಿಡುಗಡೆ ಆದ ಆ ಸಿನಿಮಾ ಸೂಪರ್ ಹಿಟ್ ಆಗಿದೆ. ಈಗ ಮಹೇಶ್ ಬಾಬು ಅವರು ನಿರ್ದೇಶಕ ರಾಜಮೌಳಿ (SS Rajamouli) ಜೊತೆ ಕೈ ಜೋಡಿಸುತ್ತಿದ್ದಾರೆ. ಅವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಹೊಸ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ಭಾರಿ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಮಹೇಶ್ ಬಾಬು ಬಂಡವಾಳ ಹೂಡಲಿ ಎಂದು ರಾಜಮೌಳಿ ಸಲಹೆ ನೀಡಿದ್ದಾರೆ ಎಂದು ಸುದ್ದಿ ಆಗಿದೆ. ಹಾಗಾದ್ರೆ ಮಹೇಶ್ ಬಾಬು ನಟಿಸುವುದಿಲ್ಲವೇ ಎಂಬ ಪ್ರಶ್ನೆ ಮೂಡುವುದು ಸಹಜ. ಆ ಬಗ್ಗೆ ಇಲ್ಲಿದೆ ಮಾಹಿತಿ..
ಮಹೇಶ್ ಬಾಬು ಅವರು ವರ್ಷಕ್ಕೊಂದು ಸಿನಿಮಾ ಮಾಡುತ್ತಾರೆ. ಆದರೆ ರಾಜಮೌಳಿ ಅವರು ಇಷ್ಟು ವೇಗವಾಗಿ ಸಿನಿಮಾದ ಕೆಲಸ ಮುಗಿಸಲ್ಲ. ಅವರು 2-3 ವರ್ಷಕ್ಕೆ ಒಂದು ಸಿನಿಮಾ ಮಾಡುತ್ತಾರೆ. ರಾಜಮೌಳಿ ಜೊತೆಗಿನ ಸಿನಿಮಾಗಾಗಿ ಮಹೇಶ್ ಬಾಬು ಕೂಡ 2ರಿಂದ 3 ವರ್ಷ ಸಮಯ ಮೀಸಲಿಡಬೇಕಿದೆ. 3 ವರ್ಷಗಳ ಕಾಲ್ಶೀಟ್ಗೆ ಸಂಭಾವನೆ ಪಡೆಯುವ ಬದಲು ನಟನೆಯ ಜೊತೆಗೆ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದುವುದು ಉತ್ತಮ ಎಂದು ಮಹೇಶ್ ಬಾಬುಗೆ ರಾಜಮೌಳಿ ಸಲಹೆ ನೀಡಿದ್ದಾರೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಮಾಡಿವೆ.
ಇದನ್ನೂ ಓದಿ: Guntur Kaaram: ಮಹೇಶ್ ಬಾಬು ಮನೆಯಲ್ಲಿ ಪಾರ್ಟಿ ಮಾಡಿದ ನಟಿ ಶ್ರೀಲೀಲಾ
ರಾಜಮೌಳಿ ಅವರು ಈ ಸಿನಿಮಾಗೆ ನಿರ್ಮಾಪಕ ಅಲ್ಲ. ಹಾಗಿದ್ದರೂ ಕೂಡ ಅವರು ನಿರ್ಮಾಣದ ವಿಚಾರದಲ್ಲಿ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಕಾರಣದಿಂದಲೇ ಅವರು ಮಹೇಶ್ ಬಾಬುಗೆ ಈ ಸಲಹೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಇದನ್ನೂ ಓದಿ: ‘ರಾಜಮೌಳಿ ಕೈಗೆ ಸಿಗುತ್ತಿಲ್ಲ, ಫೋನ್ ಕೂಡ ಸ್ವಿಚ್ ಆಫ್’; ಎಂಎಂ ಕೀರವಾಣಿ
‘ಗಂಟೂರು ಖಾರಂ’ ಬಿಡುಗಡೆ ಆದ ಬಳಿಕ ಮಹೇಶ್ ಬಾಬು ಅವರು ವಿದೇಶಕ್ಕೆ ತೆರಳಿದ್ದಾರೆ. ರಾಜಮೌಳಿ ಜೊತೆಗಿನ ಸಿನಿಮಾಗಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುವ ಸಲುವಾಗಿಯೇ ಅವರು ಜರ್ಮನಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ತಮ್ಮ ವೃತ್ತಿ ಜೀವನದ ದಿ ಬೆಸ್ಟ್ ಸಿನಿಮಾವಾಗಿ ಇದು ಮೂಡಿಬರಬೇಕು ಎಂಬ ಆಸೆ ಅವರಿಗೆ ಇದೆ. ಹಾಗಾಗಿ ಅವರು ಇಷ್ಟೆಲ್ಲ ಡೆಡಿಕೇಷನ್ ತೋರಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ