‘ರಾಜಮೌಳಿ ಕೈಗೆ ಸಿಗುತ್ತಿಲ್ಲ, ಫೋನ್ ಕೂಡ ಸ್ವಿಚ್ ಆಫ್’; ಎಂಎಂ ಕೀರವಾಣಿ
ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ರಾಜಮೌಳಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಕಾರಣಕ್ಕೆ ‘ನಾ ಸಾಮಿ ರಂಗ’ ಸುದ್ದಿಗೋಷ್ಠಿಯಲ್ಲಿ ಕೀರವಾಣಿಗೆ ಈ ಚಿತ್ರದ ಬಗ್ಗೆ ಪ್ರಶ್ನೆ ಮಾಡಲಾಗಿದೆ.
ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರ ಖ್ಯಾತಿ ಹೆಚ್ಚಿದೆ. 2022ರಲ್ಲಿ ರಿಲೀಸ್ ಆದ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಗೆದ್ದು ಅವರು ದಾಖಲೆ ಬರೆದಿದ್ದಾರೆ. ಈ ಹಾಡು ಯೂಟ್ಯೂಬ್ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಇದರಿಂದ ಕೀರವಾಣಿಗೆ ಬರುತ್ತಿರುವ ಆಫರ್ ಸಂಖ್ಯೆ ಕೂಡ ಹೆಚ್ಚಿದೆ. ಅವರಿಗೆ ಎಷ್ಟೇ ಆಫರ್ ಬಂದರೂ ರಾಜಮೌಳಿ ನಿರ್ದೇಶನದ ಸಿನಿಮಾ ಕೆಲಸಕ್ಕಾಗಿ ಬಿಡುವು ಮಾಡಿಕೊಳ್ಳುತ್ತಾರೆ. ಈ ಮಧ್ಯೆ ಅವರ ಕೈಗೆ ರಾಜಮೌಳಿ ಸಿಗುತ್ತಿಲ್ಲವಂತೆ. ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿದೆಯಂತೆ! ಈ ಬಗ್ಗೆ ಕೀರವಾಣಿ ಅವರು ಇತ್ತೀಚೆಗೆ ಮಾತನಾಡಿದ್ದಾರೆ.
‘ನಾ ಸಾಮಿ ರಂಗ’ ಸಿನಿಮಾಗೆ ಎಂಎಂ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರ ಸಂಕ್ರಾಂತಿ ಪ್ರಯುಕ್ತ ಜನವರಿ 14ರಂದು ರಿಲೀಸ್ ಆಗಲಿದೆ. ಅಕ್ಕಿನೇನಿ ನಾಗಾರ್ಜುನ, ಕನ್ನಡದ ಆಶಿಕಾ ರಂಗನಾಥ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಕೀರವಾಣಿ ಕೂಡ ಪಾಲ್ಗೊಂಡಿದ್ದಾರೆ. ಈ ವೇಳೆ ಅವರಿಗೆ SSMB29 ಬಗ್ಗೆ ಪ್ರಶ್ನೆ ಮಾಡಲಾಗಿದೆ. ಈ ವೇಳೆ ಫನ್ನಿ ಆಗಿ ಉತ್ತರಿಸಿದ್ದಾರೆ ಕೀರವಾಣಿ.
ಮಹೇಶ್ ಬಾಬು ಹಾಗೂ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ, ‘SSMB29’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಬಗ್ಗೆ ರಾಜಮೌಳಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ಕಾರಣಕ್ಕೆ ‘ನಾ ಸಾಮಿ ರಂಗ’ ಸುದ್ದಿಗೋಷ್ಠಿಯಲ್ಲಿ ಕೀರವಾಣಿಗೆ ಈ ಚಿತ್ರದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ‘ನಾನು ಉತ್ತರಿಸಲ್ಲ’ ಎಂದು ನೇರವಾಗಿ ಹೇಳಿ ಬೇಸರ ಮಾಡುವ ಬದಲು ಕೀರವಾಣಿ ನಗೆಚಟಾಕಿ ಹಾರಿಸಿದ್ದಾರೆ.
‘ನಾನು ಆ ಚಿತ್ರದ ಕೆಲಸ ಆರಂಭಿಸಿಲ್ಲ. ನಾನು ಈ ಸಿನಿಮಾ ಬಗ್ಗೆ ಕೇಳಲು ರಾಜಮೌಳಿಗೆ ಕರೆ ಮಾಡಿದೆ. ಆದರೆ, ಅವರ ಫೋನ್ ಸ್ವಿಚ್ ಆಫ್ ಆಗಿತ್ತು’ ಎಂದು ಕೀರವಾಣಿ ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರು ನಕ್ಕಿದ್ದಾರೆ.
ಇದನ್ನೂ ಓದಿ: ರಾಜಮೌಳಿ-ಮಹೇಶ್ ಬಾಬು ಸಿನಿಮಾದ ನಾಯಕಿ ಈ ವಿದೇಶಿ ನಟಿಯ ಹಿನ್ನೆಲೆ ಏನು?
ರಾಜಮೌಳಿ ನಿರ್ದೇಶನದ ಸಿನಿಮಾಗಳಿಗೆ ಕೀರವಾಣಿ ಅವರೇ ಸಂಗೀತ ಸಂಯೋಜನೆ ಮಾಡುತ್ತಾ ಬಂದಿದ್ದಾರೆ. ಇವರ ಕೆಮಿಸ್ಟ್ರಿ ಕೆಲಸ ಮಾಡಿದೆ. ಮಹೇಶ್ ಬಾಬು ಸದ್ಯ ‘ಗುಂಟೂರು ಖಾರಂ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರ ಜನವರಿ 12ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದ ಟ್ರೇಲರ್ ಜನರಿಗೆ ಇಷ್ಟ ಆಗಿದೆ. ಈ ಚಿತ್ರ ರಿಲೀಸ್ ಆದ ಬಳಿಕ ‘SSMB29’ ಕೆಲಸ ಆರಂಭ ಆಗಲಿದೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಚಿತ್ರಕ್ಕಾಗಿ ಮಹೇಶ್ ಬಾಬು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ