Kanguva: ರೋಲೆಕ್ಸ್ಗಿಂತಲೂ ಹೆಚ್ಚು ಭಯಾನಕ ‘ಕಂಗುವ’; ಹೊಸ ಅವತಾರದಲ್ಲಿ ಬಂದ ಸೂರ್ಯ
Kanguva Glimpse: ‘ಕಂಗುವ’ ಗ್ಲಿಂಪ್ಸ್ ಮೂಲಕ ನಟ ಸೂರ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ಅದರಲ್ಲಿ ಕಥೆಯ ಎಳೆ ಮತ್ತು ಅದ್ದೂರಿತನದ ಝಲಕ್ ಕಾಣಿಸಿದೆ.
ನಟ ಸೂರ್ಯ (Suriya) ಅವರಿಗೆ ಇಂದು (ಜುಲೈ 23) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಈ ದಿನವನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಅವರ ಸಂಭ್ರಮವನ್ನು ಹೆಚ್ಚಿಸುವ ರೀತಿಯಲ್ಲಿ ‘ಕಂಗುವ’ ಸಿನಿಮಾದ ಗ್ಲಿಂಪ್ಸ್ (Kanguva Glimpse) ಬಿಡುಗಡೆ ಆಗಿದೆ. ಇದರಲ್ಲಿ ಸೂರ್ಯ ಅವರ ಪಾತ್ರ ಗಮನ ಸೆಳೆಯುತ್ತಿದೆ. ಕಳೆದ ವರ್ಷ ರಿಲೀಸ್ ಆದ ‘ವಿಕ್ರಂ’ ಸಿನಿಮಾದಲ್ಲಿ ಸೂರ್ಯ ಅವರು ರೋಲೆಕ್ಸ್ ಎಂಬ ಪಾತ್ರ ಮಾಡಿದ್ದರು. ನೆಗೆಟಿವ್ ಪಾತ್ರದಲ್ಲಿ ಅವರನ್ನು ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಆ ಪಾತ್ರಕ್ಕಿಂತಲೂ ಹೆಚ್ಚು ಭಯಾನಕವಾಗಿದೆ ‘ಕಂಗುವ’ (Kanguva) ಗೆಟಪ್. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಈ ಸಿನಿಮಾದ ಗ್ಲಿಂಪ್ಸ್ಗೆ ಮಿಲಿಯನ್ಗಟ್ಟಲೆ ವೀವ್ಸ್ ಬಂದಿದೆ. ಅಭಿಮಾನಿಗಳಿಗೆ ಇದು ಸಖತ್ ಇಷ್ಟ ಆಗಿದೆ.
‘ಕಂಗುವ’ ಗ್ಲಿಂಪ್ಸ್ ಮೂಲಕ ನಟ ಸೂರ್ಯ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲಾಗಿದೆ. ಕಾಲಿವುಡ್ನಲ್ಲಿ ಹಲವು ವರ್ಷಗಳಿಂದ ಗಮನಾರ್ಹ ಸಿನಿಮಾಗಳನ್ನು ನೀಡಿದ ಕೆ.ಇ. ಜ್ಞಾನವೇಲ್ ರಾಜ ಅವರು ಈಗ ‘ಕಂಗುವ’ ಚಿತ್ರವನ್ನು ನಿರ್ಮಿಸಿದ್ದಾರೆ. ಅವರ ‘ಸ್ಟುಡಿಯೋ ಗ್ರೀನ್’ ಸಂಸ್ಥೆ ಮೂಲಕ ಈ ಸಿನಿಮಾ ತಯಾರಾಗುತ್ತಿದೆ. ಶಿವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ‘ಕಂಗುವ’ ಸಿನಿಮಾ ಸಿದ್ಧವಾಗುತ್ತಿದೆ ಎಂಬುದು ವಿಶೇಷ. ದೇವಿ ಶ್ರೀ ಪ್ರಸಾದ್ ಸಂಗೀತ ನಿರ್ದೇಶನ, ವೆಟ್ರಿ ಪಳನಿಸ್ವಾಮಿ ಅವರ ಛಾಯಾಗ್ರಹಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿರುವ ಜಮಾನಾ ಇದು. ಈ ಟ್ರೆಂಡ್ನಲ್ಲಿ ‘ಕಂಗುವ’ ಚಿತ್ರ ಕೂಡ ಸೇರಿಕೊಳ್ಳುತ್ತಿದೆ. ಏಕಕಾಲಕ್ಕೆ ಬರೋಬ್ಬರಿ 10 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. 3ಡಿ ವರ್ಷನ್ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಈ ವಿಷಯ ಕೇಳಿ ಅಭಿಮಾನಿಗಳ ಥ್ರಿಲ್ ಹೆಚ್ಚಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ‘ಕಂಗುವ’ ಗ್ಲಿಂಪ್ಸ್ ವೈರಲ್ ಆಗಿದೆ. ಈ ಸಿನಿಮಾದಲ್ಲಿ ದಿಶಾ ಪಟಾಣಿ ಅವರು ನಾಯಕಿಯಾಗಿ ನಟಿಸುವ ಮೂಲಕ ಕಾಲಿವುಡ್ಗೆ ಎಂಟ್ರಿ ನೀಡುತ್ತಿದ್ದಾರೆ.
Kanguva: 80 ಕೋಟಿ ರೂಪಾಯಿಗೆ ಮಾರಾಟ ಆಯ್ತು ‘ಕಂಗುವ’ ಒಟಿಟಿ ಹಕ್ಕು; ಹೇಗಿದೆ ನೋಡಿ ಸೂರ್ಯ ಹವಾ
ಮಾನವೀಯ ಸಂಬಂಧಗಳ ಕಥೆ ‘ಕಂಗುವ’ ಚಿತ್ರದಲ್ಲಿ ಇರಲಿದೆ. ಜೊತೆಗೆ ಭರ್ಜರಿ ಸಾಹಸ ದೃಶ್ಯಗಳನ್ನೂ ಈ ಚಿತ್ರ ಹೊಂದಿರಲಿದೆ. ಸದ್ಯಕ್ಕೆ ಬಿಡುಗಡೆ ಆಗಿರುವ 2 ನಿಮಿಷ ಅವಧಿಯ ಫಸ್ಟ್ ಗ್ಲಿಂಪ್ಸ್ ವಿಡಿಯೋದಲ್ಲಿ ಸಿನಿಮಾದ ಅದ್ದೂರಿತನದ ಝಲಕ್ ಕಾಣಿಸಿದೆ. ವಿಡಿಯೋ ಕೊನೆಯಲ್ಲಿ ಸೂರ್ಯ ಕಾಣಿಸಿಕೊಂಡ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಎಲ್ಲರೂ ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಸದ್ಯಕ್ಕೆ ‘ಕಂಗುವ’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. 2024ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.