AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhushan Master: ‘ಚುಟು ಚುಟು..’ ಡ್ಯಾನ್ಸ್​ ಮಾಸ್ಟರ್​ ಭೂಷಣ್​ ಈಗ ಸಿನಿಮಾ ನಿರ್ದೇಶಕ; ಕೋರ್ಸ್​ ಬೇಡ, ಫೋರ್ಸ್​ ಬೇಕು ಅಂತಾವ್ರೆ ಹುಡುಗರು

Choreographer Bhushan: ಭೂಷಣ್​ ಅವರ ನಿರ್ದೇಶನದ ಪ್ರಯತ್ನ ಡಿಫರೆಂಟ್​ ಆಗಿರಲಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ನೀಡುತ್ತಿದೆ. ಸದ್ಯಕ್ಕೆ ಅವರು ಕಥೆ ಬರೆಯುವುದರಲ್ಲಿ ಬ್ಯುಸಿ ಆಗಿದ್ದಾರೆ.

Bhushan Master: ‘ಚುಟು ಚುಟು..’ ಡ್ಯಾನ್ಸ್​ ಮಾಸ್ಟರ್​ ಭೂಷಣ್​ ಈಗ ಸಿನಿಮಾ ನಿರ್ದೇಶಕ; ಕೋರ್ಸ್​ ಬೇಡ, ಫೋರ್ಸ್​ ಬೇಕು ಅಂತಾವ್ರೆ ಹುಡುಗರು
ಭೂಷಣ್​
ಮದನ್​ ಕುಮಾರ್​
|

Updated on:Jul 23, 2023 | 12:30 PM

Share

ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕ ಭೂಷಣ್​ (Choreographer Bhushan) ಅವರು ಫೇಮಸ್​ ಆಗಿದ್ದಾರೆ. ‘ರ‍್ಯಾಂಬೊ 2’ ಸಿನಿಮಾದ ‘ಚುಟು ಚುಟು ಅಂತೈತಿ..’, ‘ಕಾಂತಾರ’ ಚಿತ್ರದ ‘ಸಿಂಗಾರ ಸಿರಿಯೇ..’ ಮುಂತಾದ ಜನಪ್ರಿಯ ಹಾಡುಗಳಿಗೆ ಕೊರಿಯೋಗ್ರಫಿ ಮಾಡಿದ ಭೂಷಣ್​ ಮಾಸ್ಟರ್ (Bhushan Master)​ ಅವರಿಗೆ ಸಖತ್​ ಬೇಡಿಕೆ ಇದೆ. ಪುನೀತ್​ ರಾಜ್​ಕುಮಾರ್ ಅಭಿನಯದ ‘ನಟ ಸಾರ್ವಭೌಮ’, ರಿಷಬ್​ ಶೆಟ್ಟಿ ನಟನೆಯ ‘ಬೆಲ್​ ಬಾಟಂ’ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾದ ಹಾಡುಗಳಿಗೆ ಅವರು ಕೊರಿಯೋಗ್ರಫಿ ಮಾಡಿದ್ದಾರೆ. ನೃತ್ಯ ನಿರ್ದೇಶನ ಮಾತ್ರವಲ್ಲದೇ, ‘ರಾಜ ರಾಣಿ ರೋರರ್ ರಾಕೆಟ್’ ಚಿತ್ರದ ಮೂಲಕ ಅವರು ಹೀರೋ ಆದರು. ಈಗ ಅವರು ನಿರ್ದೇಶಕನ (Movie Director) ಕ್ಯಾಪ್​ ಧರಿಸುತ್ತಿದ್ದಾರೆ ಎಂಬುದು ವಿಶೇಷ.

ಇಂದು (ಜುಲೈ 23) ಭೂಷಣ್​ ಅವರ ಹುಟ್ಟುಹಬ್ಬ. ಈ ಸ್ಪೆಷಲ್​ ದಿನವೇ ಅವರು ತಮ್ಮ ನಿರ್ದೇಶನದ ಪ್ಲ್ಯಾನ್​ ಬಗ್ಗೆ ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ. ಒಂದು ಫನ್ನಿ ಆದಂತಹ ವಿಡಿಯೋ ಮೂಲಕ ಅವರು ತಮ್ಮ ನಿರ್ದೇಶನದ ಕನಸಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕಥೆ ಬರೆಯಲು ಶುರುಮಾಡುವ ಭೂಷನ್​ಗೆ ‘ನಾನು ಯಾವುದೇ ಕೋರ್ಸ್​ ಮಾಡಿಲ್ಲವಲ್ಲ’ ಎಂಬ ಚಿಂತೆ ಶುರುವಾಗುತ್ತದೆ. ‘ಡಾಕ್ಟರ್​, ಇಂಜಿನಿಯರ್​, ಟೀಚರ್​ ಆಗಲು ಕೋರ್ಸ್​ ಬೇಕು. ಆದ್ರೆ ಡೈರೆಕ್ಟರ್​ ಆಗಲು ಫೋರ್ಸ್​ ಬೇಕು’ ಎಂದು ಪಕ್ಕದಲ್ಲಿದ್ದ ಹುಡುಗರು ಜೋಶ್​ ತುಂಬುತ್ತಾರೆ. ಈ ವಿಡಿಯೋ ವೈರಲ್​ ಆಗಿದೆ.

ಭೂಷಣ್​ ಅವರ ನಿರ್ದೇಶನದ ಪ್ರಯತ್ನ ಡಿಫರೆಂಟ್​ ಆಗಿರಲಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ನೀಡುತ್ತಿದೆ. ಆದರೆ ಈ ವಿಡಿಯೋದಲ್ಲಿ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಿನಿಮಾದ ಹೆಸರು ಏನು? ಇದು ಯಾವ ಪ್ರಕಾರದ ಸಿನಿಮಾ ಎಂಬಿತ್ಯಾದಿ ವಿಷಯಗಳನ್ನು ಅವರು ನಂತರ ದಿನಗಳಲ್ಲಿ ತಿಳಿಸಲಿದ್ದಾರೆ. ಸದ್ಯಕ್ಕೆ ಅವರು ಕಥೆ ಬರೆಯುವುದರಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ಅಪ್ಪ ಮಾಡಿದ ಒಂದು ಸಣ್ಣ ಕಾರ್ಯ ಪ್ರಭುದೇವ ಜೀವನವನ್ನೇ ಬದಲಿಸಿಬಿಟ್ಟಿತು

ಈ ವಿಡಿಯೋದಲ್ಲಿ ಪ್ರಭುದೇವ ಅವರ ಫೋಟೋ ಕಾಣಿಸಿಕೊಂಡಿದೆ. ಅವರು ಕೂಡ ಮೊದಲು ಡ್ಯಾನ್ಸ್​ ಮಾಸ್ಟರ್​ ಆಗಿದ್ದು, ನಂತರ ನಟನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡರು. ಅವರನ್ನೇ ಸ್ಫೂರ್ತಿಯಾಗಿ ಇಟ್ಟುಕೊಂಡು ಭೂಷಣ್​ ಅವರು ಡೈರೆಕ್ಟರ್​ ಕ್ಯಾಪ್​ ತೊಡಲು ಸಜ್ಜಾಗಿದ್ದಾರೆ. ಹೊಸ ಹೆಜ್ಜೆ ಇಡುತ್ತಿರುವ ಅವರಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:29 pm, Sun, 23 July 23

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು