Kamal Haasan: ‘ಕಲ್ಕಿ 2898 ಎಡಿ’ ಚಿತ್ರದ ಫಸ್ಟ್​ ಗ್ಲಿಂಪ್ಸ್​ನಲ್ಲಿ ಕಾಣಿಸಿಕೊಂಡಿಲ್ಲ ಕಮಲ್​ ಹಾಸನ್​; ವಿಶೇಷ ದಿನದಂದು ಆಗುತ್ತಾ ವಿಲನ್​ ಎಂಟ್ರಿ?

Kalki 2898 AD: ಬಹಳ ಅದ್ದೂರಿಯಾಗಿ ‘ಕಲ್ಕಿ 2898 ಎಡಿ’ ಸಿನಿಮಾ ಮೂಡಿಬರುತ್ತಿದೆ. ವಿಲನ್ ಪಾತ್ರ ಮಾಡುತ್ತಿರುವ ಕಮಲ್​ ಹಾಸನ್​ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ.

Kamal Haasan: ‘ಕಲ್ಕಿ 2898 ಎಡಿ’ ಚಿತ್ರದ ಫಸ್ಟ್​ ಗ್ಲಿಂಪ್ಸ್​ನಲ್ಲಿ ಕಾಣಿಸಿಕೊಂಡಿಲ್ಲ ಕಮಲ್​ ಹಾಸನ್​; ವಿಶೇಷ ದಿನದಂದು ಆಗುತ್ತಾ ವಿಲನ್​ ಎಂಟ್ರಿ?
ಪ್ರಭಾಸ್​, ನಾಗ್​ ಅಶ್ವಿನ್​, ಕಮಲ್​ ಹಾಸನ್​
Follow us
ಮದನ್​ ಕುಮಾರ್​
| Updated By: ರಾಜೇಶ್ ದುಗ್ಗುಮನೆ

Updated on: Jul 24, 2023 | 7:10 AM

ನಟ ಕಮಲ್​ ಹಾಸನ್​ (Kamal Haasan) ಅವರು ರಾಜಕೀಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಅವರ ಅಭಿನಯದ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್​ ಇರುತ್ತದೆ. ವಿಶೇಷ ಏನೆಂದರೆ, ಪ್ರಭಾಸ್​ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಕಮಲ್​ ಹಾಸನ್​ ಅವರು ವಿಲನ್​ ಪಾತ್ರ ಮಾಡುತ್ತಿದ್ದಾರೆ. ಆದ್ದರಿಂದ ಈ ಸಿನಿಮಾದ ಮೇಲಿನ ಹೈಪ್​ ಹೆಚ್ಚಾಗಿದೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್​ ಗ್ಲಿಂಪ್ಸ್​ (Kalki 2898 AD First Glimpse) ಬಿಡುಗಡೆ ಆಯಿತು. ಆದರೆ ಅದರಲ್ಲಿ ಕಮಲ್​ ಹಾಸನ್​ ಕಾಣಿಸಿಕೊಂಡಿಲ್ಲ. ಹಾಗಾದರೆ ಕಮಲ್​ ಹಾಸನ್​ ಅವರ ಲುಕ್​ ಯಾವಾಗ ಬಹಿರಂಗ ಆಗಲಿದೆ ಎಂಬ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ‘ಕಲ್ಕಿ 2898 ಎಡಿ’ ಸಿನಿಮಾಗೆ ನಾಗ್​ ಅಶ್ವಿನ್​ ನಿರ್ದೇಶನ ಮಾಡುತ್ತಿದ್ದಾರೆ.

ಹೀರೋ ಆಗಿರುವ ಕಮಲ್​ ಹಾಸನ್​ ಅವರು ವಿಲನ್​ ಪಾತ್ರ ಒಪ್ಪಿಕೊಂಡಿದ್ದಾರೆ ಎಂದರೆ ಆ ಪಾತ್ರಕ್ಕೆ ಎಷ್ಟು ತೂಕ ಇರಬಹುದು ಎಂದು ಫ್ಯಾನ್ಸ್​ ಲೆಕ್ಕಾಚಾರ ಹಾಕುತ್ತಿದ್ದಾರೆ. ‘ವೈಜಯಂತಿ ಮೂವೀಸ್​’ ಬ್ಯಾನರ್​ನಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಅದ್ದೂರಿಯಾಗಿ ಮೂಡಿಬರುತ್ತಿದೆ. ಕಮಲ್​ ಹಾಸನ್​ ಅವರಿಗೆ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ. ಫಸ್ಟ್​ ಗ್ಲಿಂಪ್ಸ್​ನಲ್ಲಿ ಅವರ ಲುಕ್​ ಬಹಿರಂಗ ಆಗಿಲ್ಲ. ಆದರೆ ಯಾವುದಾದರೂ ವಿಶೇಷ ದಿನದಲ್ಲಿ ಅವರ ಪೋಸ್ಟರ್​ ಅಥವಾ ಟೀಸರ್​ ಹೊರಬರುವ ನಿರೀಕ್ಷೆ ಇದೆ.

ಸೈನ್ಸ್​ ಫಿಕ್ಷನ್​ ಪ್ರಕಾರದಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಮೂಡಿಬರುತ್ತಿದೆ. ಪ್ರಚಾರಕ್ಕೆ ಈ ಚಿತ್ರತಂಡ ಬಹಳ ಒತ್ತು ನೀಡುತ್ತಿದೆ. ನವೆಂಬರ್​ 7ರಂದು ಕಮಲ್​ ಹಾಸನ್​ ಅವರ ಬರ್ತ್​ಡೇ. ಆ ವಿಶೇಷ ದಿನದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇರುತ್ತದೆ. ಅಂದು ‘ಕಲ್ಕಿ 2898 ಎಡಿ’ ಚಿತ್ರದಲ್ಲಿನ ಕಮಲ್​ ಹಾಸನ್​ ಅವರ ಫಸ್ಟ್​ ಲುಕ್​ ರಿಲೀಸ್​ ಆಗಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಫ್ಯಾನ್ಸ್ ಆಸೆಯನ್ನು ಚಿತ್ರತಂಡದವರು ಈಡೇರಿಸುತ್ತಾರಾ ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: KH233: ಕಮಲ್​ ಹಾಸನ್​ ನಟನೆಯ 233ನೇ ಚಿತ್ರದ ಬಗ್ಗೆ ಸಿಕ್ತು ಬ್ರೇಕಿಂಗ್​ ನ್ಯೂಸ್​; ಕಥೆಗೆ ಇದೆ ರಾಜಕೀಯದ ನಂಟು?

‘ಕಲ್ಕಿ 2898 ಎಡಿ’ ಸಿನಿಮಾವನ್ನು ಈ ಮೊದಲು ‘ಪ್ರಾಜೆಕ್ಟ್​ ಕೆ’ ಎಂದು ಕರೆಯಲಾಗುತ್ತಿತ್ತು. ಅಮೆರಿಕದ ಸ್ಯಾನ್​ ಡಿಯಾಗೋದಲ್ಲಿ ಫಸ್ಟ್​ ಗ್ಲಿಂಪ್ಸ್​ ರಿಲೀಸ್​ ಮಾಡುವ ಮೂಲಕ ‘ಕಲ್ಕಿ 2898 ಎಡಿ’ ಎಂಬ ಶೀರ್ಷಿಕೆಯನ್ನು ಅನಾವರಣ ಮಾಡಲಾಯಿತು. ಈ ಸಿನಿಮಾದಲ್ಲಿ ಪ್ರಭಾಸ್​ ಮತ್ತು ಕಮಲ್​ ಹಾಸನ್​ ಜೊತೆ ಅಮಿತಾಭ್​ ಬಚ್ಚನ್, ದೀಪಿಕಾ ಪಡುಕೋಣೆ ಕೂಡ ನಟಿಸುತ್ತಿದ್ದಾರೆ. ಪ್ರಭಾಸ್​ ಅವರ ಫಸ್ಟ್​ ಲುಕ್​ಗೆ ಸಿನಿಪ್ರಿಯರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!