ಅಭಿಮಾನ ತಂದ ಆಪತ್ತು; ಸೂರ್ಯ ಬರ್ತ್ಡೇ ದಿನ ಇಬ್ಬರು ಅಭಿಮಾನಿಗಳ ಸಾವು
Suriya Birthday: ಸೂರ್ಯ ಜನ್ಮದಿನದ ಶುಭಾಶಯ ಕೋರುವ ಬ್ಯಾನರ್ ಹಾಕಲಾಗುತ್ತಿತ್ತು. ಬ್ಯಾನರ್ಗೆ ಹಾಕಲಾದ ರಾಡ್ ಹೈವೋಲ್ಟೇಜ್ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಟಾಲಿವುಡ್ ನಟ ಸೂರ್ಯ (Suriya) ಅವರು ಜುಲೈ 23ರಂದು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ತಮಿಳು ಹೀರೋ ಆದರೂ ಅವರಿಗೆ ಎಲ್ಲಾ ಕಡೆಗಳಲ್ಲಿ ಅಭಿಮಾನಿಳು ಇದ್ದಾರೆ. ಈಗ ಅವರ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದಾರೆ. ಅದೂ ಅವರ ಬರ್ತ್ಡೇ ದಿನವೇ ಅನ್ನೋದು ಬೇಸರದ ಸಂಗತಿ. ಸೂರ್ಯ ಅವರ ಬರ್ತ್ಡೇಗೆ ಸಂಬಂಧಸಿದ ಬ್ಯಾನರ್ ಹಾಕುವಾಗ ಅವಘಡ ಸಂಭವಿಸಿದೆ. ಬ್ಯಾನರ್ಗೆ ವಿದ್ಯುತ್ ತಂತಿ ಸ್ಪರ್ಶ ಆಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಪಾಲ್ನಾಡು ಜಿಲ್ಲೆಯ ನರಸರಾವ್ಪೇಟ್ನಲ್ಲಿ ಈ ಘಟನೆ ನಡೆದಿದೆ. ನಕ್ಕಾ ವೆಂಕಟೇಶ್ ಹಾಗೂ ಪೊಲುರಿ ಸಾಯಿ ಮೃತ ಯುವಕರು. ಇವರು ದ್ವಿತೀಯ ವರ್ಷದ ಪದವಿ ಓದುತ್ತಿದ್ದರು. ಇಬ್ಬರೂ ಸೂರ್ಯ ಅವರ ಕಟ್ಟಾಭಿಮಾನಿಗಳಾಗಿದ್ದರು. ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದ ಇವರಿಗೆ ಕಾಲೇಜಿನ ಸಮೀಪ ಸೂರ್ಯ ಅವರ ಬ್ಯಾನರ್ ಹಾಕಬೇಕು ಎಂಬ ಆಸೆ ಇತ್ತು. ಈ ಕಾರಣಕ್ಕೆ ಬ್ಯಾನರ್ ಸಿದ್ಧಮಾಡಿಕೊಂಡಿದ್ದರು.
ಸೂರ್ಯ ಜನ್ಮದಿನದ ಶುಭಾಶಯ ಕೋರುವ ಬ್ಯಾನರ್ ಹಾಕಲಾಗುತ್ತಿತ್ತು. ಬ್ಯಾನರ್ಗೆ ಹಾಕಲಾದ ರಾಡ್ ಹೈವೋಲ್ಟೇಜ್ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ರೋಲೆಕ್ಸ್ಗಿಂತಲೂ ಹೆಚ್ಚು ಭಯಾನಕ ‘ಕಂಗುವ’; ಹೊಸ ಅವತಾರದಲ್ಲಿ ಬಂದ ಸೂರ್ಯ
ಸಾಯಿ ಅವರ ಸಹೋದರಿ ಅನನ್ಯಾ ಅವರು ಕಾಲೇಜ್ನವರನ್ನು ದೂಷಿಸಿದ್ದಾರೆ. ‘ಅಣ್ಣನ ಸಾವಿಗೆ ಕಾಲೇಜಿನವರೇ ಕಾರಣ. ಕಾಲೇಜಿಗೆ ಸಾಕಷ್ಟು ಶುಲ್ಕ ಕಟ್ಟುತ್ತಿದ್ದೇವೆ. ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುವುದಾಗಿ ಕಾಲೇಜಿಗೆ ಸೇರುವ ಮುನ್ನ ಭರವಸೆ ನೀಡಿದ್ದರು. ವಿದ್ಯಾರ್ಥಿಗಳ ಬಗ್ಗೆ ಹಾಸ್ಟೆಲ್‌ನಲ್ಲಿರುವವರು ನಿಗಾ ಇಡುತ್ತಿಲ್ಲ. ನಾವು ದಿನಗೂಲಿ ನೌಕರರು. ಕಾಲೇಜು ಶುಲ್ಕ ಕಟ್ಟಲು ಕಷ್ಟಪಟ್ಟಿದ್ದೇವೆ’ ಎಂದು ಅನನ್ಯಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




