ಕೂಲ್ ಹೀರೋ ಪಾತ್ರ vs ವೈಲೆಂಟ್ ಲುಕ್; ಈ ವಿಡಿಯೋ ನಿಮಗೆ ಇಷ್ಟ ಆಗಿಯೇ ಆಗುತ್ತೆ

ಕನ್ನಡ ಚಿತ್ರರಂಗದಲ್ಲಿ ಅನೇಕ ನಟರು ತಮ್ಮ ವೃತ್ತಿಜೀವನವನ್ನು "ಚಾಕೋಲೇಟ್ ಬಾಯ್" ಪಾತ್ರಗಳ ಮೂಲಕ ಆರಂಭಿಸಿ, ನಂತರ ವೈಲೆಂಟ್ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ರಾಜ್‌ಕುಮಾರ್, ವಿಷ್ಣುವರ್ಧನ್, ಯಶ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಅವರಂತಹ ತಾರೆಯರ ಈ ಅದ್ಭುತ ರೂಪಾಂತರವನ್ನು ತೋರಿಸುವ ವಿಡಿಯೋವೊಂದು ಈಗ ವೈರಲ್ ಆಗಿದೆ.

ಕೂಲ್ ಹೀರೋ ಪಾತ್ರ vs ವೈಲೆಂಟ್ ಲುಕ್; ಈ ವಿಡಿಯೋ ನಿಮಗೆ ಇಷ್ಟ ಆಗಿಯೇ ಆಗುತ್ತೆ
Rajkumar (1)
Edited By:

Updated on: Oct 05, 2025 | 6:35 AM

ಹೀರೋ ಆಗಿ ಚಿತ್ರರಂಗಕ್ಕೆ ಬಂದಾಗ ಯಾವಾಗಲೂ ಮೊದಲು ವೈಲೆಂಟ್​ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳೋದಿಲ್ಲ. ಮೊದಲು ಚಾಕೋಲೇಟ್ ಬಾಯ್ ಆಗಿ ಕಾಣಿಸಿಕೊಳ್ಳುವ ಅವರು ನಂತರ ವೈಲೆಂಟ್ ಪಾತ್ರಗಳಿಗೆ ಹೊಗುತ್ತಾರೆ. ಈ ರೀತಿ ಕನ್ನಡದಲ್ಲಿ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಆರಂಭದಲ್ಲಿ ಕೂಲ್ ಆ್ಯಂಡ್ ಹ್ಯಾಂಡ್ಸಮ್ ಆಗಿ ಕಾಣುವ ಸೆಲೆಬ್ರಿಟಿಗಳು ನಂತರ ವೈಲೆಂಟ್ ಪಾತ್ರದ ಮೂಲಕ ಮಿಂಚುತ್ತಾರೆ. ಇದಕ್ಕೆ ಹೊಂದುವಂತಹ ಎಡಿಟಿಂಗ್ ಮಾಡಿದ ವಿಡಿಯೋ ಒಂದು ವೈರಲ್ ಆಗಿದೆ.

ಪ್ರಣವ್ ಜೋಶಿ ಹೆಸರಿನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರಕ್ಷಿತ್ ಶೆಟ್ಟಿ ಅವರ ‘ಕಿರಿಕ್ ಪಾರ್ಟಿ’ ಸಿನಿಮಾದ ದೃಶ್ಯವಿದೆ. ಆರಂಭದಲ್ಲಿ ಅವರು ಚಾಕೋಲೇಟ್ ಬಾಯ್ ಆಗಿ ಕಾಣಸಿಕೊಂಡಿರುತ್ತಾರೆ. ಅವರು ಸಖತ್ ಮುಗ್ಧರು. ಆದರೆ, ಮಧ್ಯಂತರದ ವೇಳೆ ಅವರು ವೈಲೆಂಟ್ ಆಗುತ್ತಾರೆ. ಇದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ರಾಜ್ ಬಿ ಶೆಟ್ಟಿ ಅವರು ‘ಒಂದು ಮೊಟ್ಟೆಯ ಕಥೆ’ ಸಿನಿಮಾದಲ್ಲಿ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಎಲ್ಲಿಯೂ ಅವರು ಫೈಟ್ ಮಾಡಿಲ್ಲ. ಆದರೆ, ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಅವರು ವೈಲೆಂಟ್ ಅವತಾರ ತಾಳಿದ್ದರು. ಇದನ್ನು ಕೂಡ ತೋರಿಸಲಾಗಿದೆ.

ರಿಷಬ್ ಶೆಟ್ಟಿ ಅವರು ‘ಬೆಲ್ ಬಾಟಂ’ ಚಿತ್ರದಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದರೆ, ‘ಕಾಂತಾರ’ ಹಾಗೂ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದರು. ಯಶ್ ಅವರು ‘ಗೂಗ್ಲಿ’ ಸಿನಿಮಾದಲ್ಲಿ ಚಾಕೋಲೇಟ್ ಬಾಯ್ ಲುಕ್ ಇತ್ತು. ಇದೇ ಪಾತ್ರ ಮಾಡಿದ ಯಶ್ ಅವರು ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ನಲ್ಲಿ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದರು.

ವಿಷ್ಣುವರ್ಧನ್ ಹಾಗೂ ರಾಜ್​ಕುಮಾರ್ ಕೂಡ ಸಿಂಪಲ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡು ನಂತರ ವೈಲೆಂಟ್ ಅವತಾರಕ್ಕೆ ತಿರುಗಿದ ಉದಾಹರಣೆ ಇದೆ. ಈ ವಿಡಿಯೋಗಳನ್ನು ಈಗ ವೈರಲ್ ಮಾಡಲಾಗುತ್ತಾ ಇದೆ.  ಈ ವಿಡಿಯೋನ ಅನೇಕರು ಇಷ್ಟಪಟ್ಟಿದ್ದಾರೆ. ಫ್ಯಾನ್ಸ್ ಇದಕ್ಕೆ ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.