
ನಿರ್ಮಾಪಕ, ನಿರ್ದೇಶಕ, ನಿರೂಪಕ, ಬಾಲಿವುಡ್ನ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿರುವ ಕರಣ್ ಜೋಹರ್ (Karan Johar) ಅವರಿಗೆ ಇಂದು (ಮೇ 24) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಹಲವು ಸೆಲೆಬ್ರಿಟಿ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗೆ ಇದೆ. ಅವರು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಬಾಲಿವುಡ್ನಲ್ಲಿ ಅವರ ಮಾತು ನಡೆಯುತ್ತದೆ. ಅತಿ ಹೆಚ್ಚು ಸಂಭಾವನೆ ಪಡೆಯುವಲ್ಲಿ ಅವರು ಕೂಡ ಒಬ್ಬರು. ಅವರ ಆಸ್ತಿ ಕೇಳಿದರೆ ಅನೇಕರಿಗೆ ಶಾಕ್ ಆಗೋದು ಗ್ಯಾರಂಟಿ.
ಹಲವು ವರದಿಗಳ ಪ್ರಕಾರ ಕರಣ್ ಜೋಹರ್ ಅವರು ಬರೋಬ್ಬರಿ 1700 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರ ಆಸ್ತಿ ಮೌಲ್ಯ ಹೆಚ್ಚುತ್ತಲೇ ಇದೆ. ಬಾಲಿವುಡ್ನ ಶ್ರೀಮಂತ ನಿರ್ಮಾಪಕರಲ್ಲಿ ಅವರು ಕೂಡ ಒಬ್ಬರು. ನಿರ್ದೇಶನಕ್ಕೆ ಅವರು 5 ಕೋಟಿ ರೂಪಾಯಿ ಪಡೆಯುತ್ತಾರೆ. ವರ್ಷಕ್ಕೆ ಅವರು 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡುತ್ತಾರೆ.
ಕರಣ್ ಜೋಹರ್ ಅವರು ಮಿಂತ್ರಾ, ವಿವೋ ಇಂಡಿಯಾ, ಲೆನ್ಸ್ಕಾರ್ಟ್ ಸೇರಿ ಅನೇಕ ಬ್ರ್ಯಾಂಡ್ಗಳ ಪ್ರಚಾರ ಮಾಡುತ್ತಾರೆ. ಇದಕ್ಕಾಗಿ ಅವರು 2 ಕೋಟಿ ರೂಪಾಯಿ ಪಡೆಯುತ್ತಾರೆ. ಈ ಒಪ್ಪಂದ ಕೆಲವು ವರ್ಷಗಳು ಮಾತ್ರ ಇರುತ್ತವೆ. ಆ ಬಳಿಕ ಅವರು ಹೊಸದಾಗಿ ಮತ್ತೆ ಚಾರ್ಜ್ ಮಾಡುತ್ತಾರೆ.
ಕರಣ್ ಜೋಹರ್ ಅವರು ಶ್ರೇಷ್ಠ ಉದ್ಯಮಿ ಕೂಡ ಹೌದು. ಅವರು ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರು ಧರ್ಮ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ನಿರ್ಮಾಣ ಸಂಸ್ಥೆ ಮೂಲಕ ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರು ಇದರ ಅಡಿಯಲ್ಲಿ ಕಮರ್ಷಿಯಲ್ ಅಡ್ವಟೈಸ್ಮೆಂಟ್ ಕೂಡ ಮಾಡುತ್ತಾರೆ. ಇನ್ನು ಅವರು ಸಿನಿಮಾ ಹಂಚಿಕೆ ಕೂಡ ಮಾಡುತ್ತಾರೆ. ಇದರಿಂದ ಅವರಿಗೆ ಸಾಕಷ್ಟು ಹಣ ಬರುತ್ತದೆ.
ಕರಣ್ ಜೋಹರ್ ಅವರು ಜ್ಯುವೆಲರಿ ಬಿಸ್ನೆಸ್ನಲ್ಲೂ ಇದ್ದಾರೆ. ಅವರು 2021ರಲ್ಲಿ ‘ತ್ಯಾನಿ ಜ್ಯುವೆಲರಿ’ ಆರಂಭಿಸಿದರು. ಮುಂಬೈನಲ್ಲಿ ಎರಡು ಶಾಪ್ಗಳಿವೆ, ಶೀಘ್ರವೇ ಭಾರತದಾದ್ಯಂತ ಉದ್ಯಮ ವಿಸ್ತರಿಸೋ ಆಸೆಯನ್ನು ಅವರು ಹೊಂದಿದ್ದಾರೆ. ರೆಸ್ಟೋರೆಂಟ್ ಬಿಸ್ನೆಸ್ನಲ್ಲಿ ಅನೇಕ ಸೆಲೆಬ್ರಿಟಿಗಳಿದ್ದಾರೆ. ಇದಕ್ಕೆ ಕರಣ್ ಜೋಹರ್ ಕೂಡ ಹೊರತಾಗಿಲ್ಲ. ಅವರು ದಕ್ಷಿಣ ಮುಂಬೈನಲ್ಲಿ ರೆಸ್ಟೋರೆಂಟ್ ಹೊಂದಿದ್ದಾರೆ.
ಇದನ್ನೂ ಓದಿ: ರಿಯಾಲಿಟಿ ಶೋನಲ್ಲಿ ಅಪಹಾಸ್ಯ; ಅಸಮಾಧಾನಗೊಂಡ ಕರಣ್ ಜೋಹರ್ ಏನು ಮಾಡಿದ್ರು ನೋಡಿ
ಕರಣ್ ಜೋಹರ್ ಅವರು ರಿಯಲ್ ಎಸ್ಟೇಟ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಮಂಬೈನಲ್ಲಿ 32 ಕೋಟಿ ರೂಪಾಯಿಯ ಮ್ಯಾನ್ಷನ್ ಇದೆ. ಇದು ಸಮುದ್ರ ತೀರದಲ್ಲಿದೆ. ಮುಂಬೈನ ಮಲ್ಬಾರ್ ಹಿಲ್ಸ್ನಲ್ಲಿ 20 ಕೋಟಿ ರೂಪಾಯಿ ಮನೆ ಹೊಂದಿದ್ದಾರೆ. ಇದಲ್ಲದೆ ಹಲವು ಕಡೆಗಳಲ್ಲಿ ಅವರು ಆಸ್ತಿ ಹೊಂದಿದ್ದಾರೆ.
ಕರಣ್ ಜೋಹರ್ ಅವರು ದುಬಾರಿ ಕಾರ್ ಕಲೆಕ್ಷನ್ ಹೊಂದಿದ್ದಾರೆ. ಬಿಎಂಡಬ್ಲ್ಯೂ, ಮರ್ಸಿಡೀಸ್, ಆಡಿ, ಜಾಗ್ವಾರ್, ರೋಲ್ಸ್ ರಾಯ್ಸ್ ಕಾರುಗಳು ಇವೆ. ದುಬಾರಿ ವಸ್ತುಗಳು ಕೂಡ ಅವರ ಬಳಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.