ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಬಾಲಿವುಡ್​ನ ಈ ಸ್ಟಾರ್ ಜೋಡಿ

ಕರೀನಾ ಕಪೂರ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅವರು ಆಫರ್​ನ ನಿರಾಕರಿಸಿದ್ದರು. ಈಗ ‘ಸ್ಪಿರಿಟ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಲು ಸೈಫ್ ಅಲಿ ಖಾನ್ ಹಾಗೂ ಕರೀನಾಗೆ ಆಫರ್ ನೀಡಲಾಗಿದೆ. ಅವರು ಇದನ್ನು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಬಾಲಿವುಡ್​ನ ಈ ಸ್ಟಾರ್ ಜೋಡಿ
ಪ್ರಭಾಸ್

Updated on: Sep 19, 2024 | 6:54 AM

ಪ್ರಭಾಸ್ ನಟನೆಯ ಸಿನಿಮಾಗಳಿಗೆ ಇತ್ತೀಚೆಗೆ ಬಾಲಿವುಡ್​ನಿಂದ ಕಲಾವಿದರನ್ನು ಕರೆಸಲಾಗುತ್ತಿದೆ. ಈ ಮೊದಲು ರಿಲೀಸ್ ಆದ ‘ಸಾಹೋ’ ಚಿತ್ರಕ್ಕಾಗಿ ಶ್ರದ್ಧಾ ಕಪೂರ್ ಅವರ ಆಗಮನ ಆಗಿತ್ತು. ಆ ಬಳಿಕ ‘ಆದಿಪುರಷ್’ ಚಿತ್ರಕ್ಕೆ ಸೈಫ್ ಅಲಿ ಖಾನ್, ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಅಮಿತಾಭ್ ಬಚ್ಚನ್ ಅವರ ಆಗಮನ ಆಗಿತ್ತು. ಈಗ ಅವರು ‘ಸ್ಪಿರಿಟ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಬಾಲಿವುಡ್​ನಿಂದ ಸ್ಟಾರ್ ಜೋಡಿಯ ಆಗಮನ ಆಗುತ್ತಿದೆ. ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸಂದೀಪ್ ರೆಡ್ಡಿ ವಂಗ ಅವರು ಬಾಲಿವುಡ್​ನಲ್ಲಿ ‘ಅನಿಮಲ್’ ಸಿನಿಮಾ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಬಾಲಿವುಡ್​ ಕಲಾವಿದರಿಗೆ ಈ ನಿರ್ದೇಶಕ ಆಹ್ವಾನ ಕೊಟ್ಟರೆ ಅವರು ಬೇಡ ಎಂದು ಹೇಳುವುದಿಲ್ಲ. ಈಗ ‘ಸ್ಪಿರಿಟ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಲು ಸೈಫ್ ಅಲಿ ಖಾನ್ ಹಾಗೂ ಕರೀನಾಗೆ ಆಫರ್ ನೀಡಲಾಗಿದೆ. ಈ ಸ್ಟಾರ್ ದಂಪತಿಯನ್ನು ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ.

‘ಸ್ಪಿರಿಟ್’ ಸಿನಿಮಾದ ಕಥೆ ಪ್ರಭಾಸ್ ಮೇಲೆಯೇ ಸಾಗಲಿದೆ. ಇದರ ಜೊತೆಗೆ ಸೈಫ್ ಹಾಗೂ ಕರೀನಾ ಅವರು ವಿಲನ್ ಪಾತ್ರ ಮಾಡಲಿದ್ದು, ಇವರ ಪಾತ್ರಕ್ಕೂ ಪ್ರಾಮುಖ್ಯತೆ ಇರಲಿದೆ. ಬಾಲಿವುಡ್ ಸ್ಟಾರ್ ದಂಪತಿಗಳು ಒಟ್ಟಾಗಿ ನಟಿಸಿದ್ದು ಇದೆ. ಆದರೆ, ಇವರುಗಳು ವಿಲನ್ ಪಾತ್ರ ಮಾಡಿದ್ದು ಕಡಿಮೆ. ಅಂಥದ್ದೊಂದು ಅವಕಾಶ ಸಿಗುತ್ತಿದೆ.

ಇದನ್ನೂ ಓದಿ: ಯಶ್ ಸಿನಿಮಾ ನಿರಾಕರಿಸಿ ಪ್ರಭಾಸ್ ಸಿನಿಮಾಕ್ಕೆ ಯೆಸ್ ಎಂದರೇ ಕರೀನಾ

ಪ್ರಭಾಸ್ ಹಾಗೂ ಸೈಫ್ ಅಲಿ ಖಾನ್ ‘ಆದಿಪುರುಷ್’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಆದರೆ, ಸಿನಿಮಾ ಸೋತು ಹೋಯಿತು. ಸದ್ಯ ಸೈಫ್ ಅಲಿ ಖಾನ್​ಗೆ ಟಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿ ಆಗಿದೆ. ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಚಿತ್ರಕ್ಕೆ ಸೈಫ್ ಅವರೇ ವಿಲನ್. ಈ ಚಿತ್ರ ಸೆಪ್ಟೆಂಬರ್ 27ರಂದು ಬಿಡುಗಡೆ ಕಾಣುತ್ತಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದೊಮ್ಮೆ ಸಿನಿಮಾ ಹಿಟ್ ಆದರೆ  ಸೈಫ್ ಬೇಡಿಕೆ ಹೆಚ್ಚಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.