‘ತಂಗಲಾನ್’ ಚಿತ್ರಕ್ಕೆ ಮೊದಲ ಆಫರ್ ಹೋಗಿದ್ದು ಕನ್ನಡದ ಈ ನಟಿಗೆ
Tangalaan: ವಿಕ್ರಂ ನಟಿಸಿ, ಪಾ ರಂಜಿತ್ ನಿರ್ದೇಶನ ಮಾಡಿರುವ ‘ತಂಗಲಾನ್’ ಸಿನಿಮಾದಲ್ಲಿ ನಾಯಕಿಯಾಗಿ ಪಾರ್ವತಿ ಮೆನನ್ ನಟಿಸಿದ್ದಾರೆ. ಅಸಲಿಗೆ ನಾಯಕಿ ಪಾತ್ರದ ಆಫರ್ ಮೊದಲಿಗೆ ಬಂದಿದ್ದು ಕನ್ನಡದ ಈ ನಟಿಗೆ.
ಇತ್ತೀಚೆಗೆ ರಿಲೀಸ್ ಆದ ವಿಕ್ರಮ್ ನಟನೆಯ ‘ತಂಗಲಾನ್’ ಸಿನಿಮಾ ಸಾಧಾರಣ ಎನಿಸಿಕೊಂಡಿತು. ಈ ಚಿತ್ರ ಈ ವಾರ ಒಟಿಟಿಗೆ ಕಾಲಿಡುತ್ತಿದೆ. ಈ ಸಿನಿಮಾದಲ್ಲಿ ಮಾಳವಿಕಾ ಮೋಹನ್ ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದರು. ಆರಂಭದಲ್ಲಿ ಈ ಸಿನಿಮಾ ಆಫರ್ ಹೋಗಿದ್ದು ಓರ್ವ ಕನ್ನಡತಿಗೆ. ಅವರು ಒಪ್ಪದ ಕಾರಣಕ್ಕೆ ಸಿನಿಮಾ ಮಾಳವಿಕಾ ಮೋಹನ್ ಅವರ ಪಾಲಾಯಿತು ಎಂಬ ವಿಚಾರ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ ಕೇಳಿ.
‘ತಂಗಲಾನ್’ ಸಿನಿಮಾ ಕರ್ನಾಟಕದ ಕಥೆ ಹೊಂದಿದೆ. ಹೌದು, ಕೋಲಾರದ ಚಿನ್ನದ ಗಣಿಯಲ್ಲಿ ಏನಾಯಿತು ಎಂಬ ವಿಚಾರದ ಕುರಿತು ಸಿನಿಮಾದಲ್ಲಿ ಹೇಳಲಾಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ನಿರೀಕ್ಷೆ ಮಟ್ಟವನ್ನು ತಲುಪಲು ಸಿನಿಮಾದ ಬಳಿ ಸಾಧ್ಯವಾಗಿಲ್ಲ. ಈ ಕಾರಣದಿಂದಲೇ ಚಿತ್ರ ಒಂದು ತಿಂಗಳಲ್ಲಿ ಒಟಿಟಿ ಕದ ತಟ್ಟಿದೆ. ರಶ್ಮಿಕಾ ಈ ಸಿನಿಮಾದ ಭಾಗವಾಗಬೇಕಿತ್ತು. ಅದೃಷ್ಟದಿಂದ ಅವರು ಇದರಲ್ಲಿ ನಟಿಸಿಲ್ಲ.
ಇದನ್ನೂ ಓದಿ:ತಮಿಳಿನ ‘ಕೆಜಿಎಫ್’ ಕತೆ ‘ತಂಗಲಾನ್’ ಒಟಿಟಿ ಬಿಡುಗಡೆ ಯಾವಾಗ?
ಮಾಳವಿಕಾ ಮೋಹನ್ ಅವರು ಆರತಿ ಹೆಸರಿನ ಪಾತ್ರ ಮಾಡಿದ್ದರು. ಈ ಪಾತ್ರದ ಆಫರ್ ಮೊದಲು ಹೋಗಿದ್ದು ರಶ್ಮಿಕಾಗೆ. ಆದರೆ, ಈಗಾಗಲೇ ಬೇರೆ ಸಿನಿಮಾಗಳನ್ನು ಒಪ್ಪಿಕೊಂಡಿರುವುದರಿಂದ ಅವರು ಈ ಚಿತ್ರದ ಭಾಗವಾಗಲು ನಿರಾಕರಿಸಿದರು ಎನ್ನಲಾಗಿದೆ. ಆ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಚಿತ್ರದ ಶೂಟ್ನಲ್ಲಿ ಬ್ಯುಸಿ ಇದ್ದರು. ಈ ಕಾರಣಕ್ಕೆ ಅವರಿಗೆ ಆಫರ್ ಒಪ್ಪಿಕೊಳ್ಳೋಕೆ ಆಗಲೇ ಇಲ್ಲ.
ಉಳಿದ ಭಾಷೆಗಳಿಗೆ ಹೋಲಿಕೆ ಮಾಡಿದರೆ ರಶ್ಮಿಕಾ ಮಂದಣ್ಣ ತಮಿಳಿನಲ್ಲಿ ಮಾಡಿದ ಸಿನಿಮಾಗಳು ಕಡಿಮೆ ಎಂದೇ ಹೇಳಬಹುದು. ಇತ್ತೀಚೆಗೆ ಅವರು ಅಲ್ಲೊಂದು ಇಲ್ಲೊಂದು ತಮಿಳು ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಅವರು ಧನುಷ್ ಸಿನಿಮಾದಲ್ಲಿ ನಾಯಕಿ ಆಗಿ ನಟಿಸುತ್ತಿದ್ದಾರೆ. ವಿಜಯ್ ಅವರ ಜೊತೆ ಈ ಮೊದಲು ‘ವಾರಿಸು’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು.
ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಯ ‘ಪುಷ್ಪ 2’ ಹಾಗೂ ಹಿಂದಿ ‘ಛಾವ್ವಾ’ ಸಿನಿಮಾ ಡಿಸೆಂಬರ್ 9ರಂದು ರಿಲೀಸ್ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ