AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯಾಂಕಾಗೂ ಮುನ್ನ ನಿಕ್ ಜೋನಸ್ ಅದೆಷ್ಟು ಹುಡುಗಿಯರ ಜೊತೆ ಓಡಾಡಿದ್ದಾರೆ ಗೊತ್ತಾ?

ಪ್ರಿಯಾಂಕಾ ಚೋಪ್ರಾ ಅವರು ತುಂಬಾನೇ ಅರ್ಥಮಾಡಿಕೊಳ್ಳುವ ವ್ಯಕ್ತಿಯಲ್ಲಿ ಒಬ್ಬರು. ನಿಕ್ ಹಾಗೂ ಪ್ರಿಯಾಂಕಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗುತ್ತಿದ್ದಾರೆ. ಇವರ ಮಧ್ಯೆ ಸಾಕಷ್ಟು ವ್ಯತ್ಯಾಸಗಳು ಇವೆ. ಆದಾಗ್ಯೂ ಅದೆಲ್ಲ ಗೌಣ ಎನಿಸಿಕೊಂಡಿದೆ. ನಿಕ್ ಸುತ್ತಾಡಿದ ನಟಿಯರ ಪಟ್ಟಿ ಇಲ್ಲಿದೆ.

ಪ್ರಿಯಾಂಕಾಗೂ ಮುನ್ನ ನಿಕ್ ಜೋನಸ್ ಅದೆಷ್ಟು ಹುಡುಗಿಯರ ಜೊತೆ ಓಡಾಡಿದ್ದಾರೆ ಗೊತ್ತಾ?
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Sep 19, 2024 | 7:43 AM

Share

ನಿಕ್ ಜೋನಸ್ ಅವರು ಇಂಗ್ಲಿಷ್ ಸಂಗೀತ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಪ್ರಿಯಾಂಕಾ ಚೋಪ್ರಾನ ಮದುವೆ ಆಗುವ ಮೂಲಕ ಭಾರತದ ಅಳಿಯ ಎನಿಸಿಕೊಂಡಿದ್ದಾರೆ. ಪ್ರಿಯಾಂಕಾ ಹಾಗೂ ನಿಕ್ ಮಧ್ಯೆ ಸಾಕಷ್ಟು ವಯಸ್ಸಿನ ಅಂತರ ಇದೆ. ಪ್ರಿಯಾಂಕಾಗಿಂತ ನಿಕ್ ಸಣ್ಣವರು. ಆದರೆ, ಇವರ ಮಧ್ಯೆ ವಯಸ್ಸಿನ ಅಂತರ ಅಡ್ಡಿ ಉಂಟು ಮಾಡಿಲ್ಲ. ನಿಕ್ ಅವರು ಸಣ್ಣ ವಯಸ್ಸಿನಿಂದಲೇ ಡೇಟಿಂಗ್ ಆರಂಭಿಸಿದ್ದರು ಅನ್ನೋದು ಗೊತ್ತಾ?

ಪ್ರಿಯಾಂಕಾ ಚೋಪ್ರಾ ಅವರು ತುಂಬಾನೇ ಅರ್ಥಮಾಡಿಕೊಳ್ಳುವ ವ್ಯಕ್ತಿಯಲ್ಲಿ ಒಬ್ಬರು. ನಿಕ್ ಹಾಗೂ ಪ್ರಿಯಾಂಕಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸಾಗುತ್ತಿದ್ದಾರೆ. ಇವರ ಮಧ್ಯೆ ಸಾಕಷ್ಟು ವ್ಯತ್ಯಾಸಗಳು ಇವೆ. ಆದಾಗ್ಯೂ ಅದೆಲ್ಲ ಗೌಣ ಎನಿಸಿಕೊಂಡಿದೆ. ನಿಕ್ ಸುತ್ತಾಡಿದ ನಟಿಯರ ಪಟ್ಟಿ ಇಲ್ಲಿದೆ.

ಮೈಲೀ ಸೈರಸ್

ಆಗಿನ್ನೂ ನಿಕ್​ಗೆ 13 ವರ್ಷ. ಆಗಲೇ ಅವರು ಗಾಯಕಿ ಮೈಲೀ ಸೈರಸ್ ಜೊತೆ ಸುತ್ತಾಡಲು ಶುರು ಮಾಡಿದರು. 2006ರಲ್ಲಿ ಇವರ ಡೇಟಿಂಗ್ ಆರಂಭ ಆಯಿತು. 2007ರ ಅಂತ್ಯದ ವೇಳೆಗೆ ಇವರ ಸಂಬಂಧ ಕೊನೆ ಆಯಿತು.

ಸೆಲೆನಾ ಗೊಮೆಜ್

ಸೈರಸ್ ಜೊತೆಗಿನ ಬ್ರೇಕಪ್ ಬಳಿಕ ನಿಕ್ ಜೋನಸ್​ಗೆ ಸಿಕ್ಕಿದ್ದು ಗಾಯಕಿ ಸೆಲೆನಾ ಗೊಮೆಜ್. 2008ರಲ್ಲಿ ನಿಕ್ ಬಾಳಲ್ಲಿ ಅಮೆರಿಕದ ಗಾಯಕಿಯ ಆಗಮನ ಆಯಿತು. ಆಗ ನಿಕ್​ಗೆ 16 ವರ್ಷ. ಕೆಲವೇ ತಿಂಗಳಲ್ಲಿ ಇವರ ಸಂಬಂಧ ಕೊನೆ ಆಯಿತು.

ಡೆಲ್ಟಾ ಗುಡ್ರಮ್

ನಿಕ್ ಜೋನಾಸ್ ಅವರು ಆಸ್ಟ್ರೇಲಿಯಾ ಸಿಂಗರ್ ಡೆಲ್ಟಾ ಗುಡ್ರಮ್ ಜೊತೆ 10 ತಿಂಗಳು ಡೇಟ್ ಮಾಡಿದರು. 2012ರಲ್ಲಿ ಇವರ ಸಂಬಂಧ ಕೊನೆ ಆಯಿತು. ಆರಂಭ ಆದ ಸ್ಪೀಡ್​ನಲ್ಲೇ ಸಂಬಂಧ ಮುರಿದು ಬಿತ್ತು.

ಒಲಿವಿಯಾ ಕುಲ್ಪೋ

ನಿಕ್ ಜೋನಸ್ ಅವರ ಲಾಂಗೆಸ್ಟ್ ರಿಲೇಶನ್​ಶಿಪ್ ಎಂದರೆ ಅದು ಒಲಿವಿಯಾ ಜೊತೆಗೆ ಎನ್ನಲಾಗಿದೆ. 2013ರಲ್ಲಿ ಇವರ ಸಂಬಂಧ ಆರಂಭ ಆಯಿತು.  ಎರಡು ವರ್ಷದಲ್ಲಿ ಅಂದರೆ 2015ರ ಜೂನ್​ನಲ್ಲಿ ಇವರು ಬೇರೆ ಆದರು.

ಕೆಂಡಲ್ ಜೆನ್ನರ್

ಒಲಿವಿಯಾ ಬ್ರೇಕಪ್ ಬಳಿಕ ಎರಡೇ ತಿಂಗಳಲ್ಲಿ ಅಂದರೆ ಆಗಸ್ಟ್ 2015ರಲ್ಲಿ ಜೋನಸ್ ಹಾಗೂ ಮಾಡೆಲ್ ಕೆಂಡಲ್ ಜೆನ್ನರ್  ಒಟ್ಟಾಗಿ ಕಾಣಿಸಿಕೊಂಡರು. ಅವರು ಕೆಲವು ಸಮಯ ಸುತ್ತಾಡಿದ್ದರು.

ಇದನ್ನೂ ಓದಿ: 

ಕೇಟ್ ಹಡ್ಸನ್

ನಿಕ್ ಜೋನಸ್ ಅವರು ತಮಗಿಂತ 14 ವರ್ಷ ಹಿರಿಯವರಾದ ಕೇಟ್ ಹಡ್ಸನ್ ಜೊತೆ ಸುತ್ತಾಟ ನಡೆಸಿದರು. 2015ರ ಸೆಪ್ಟೆಂಬರ್​ನಲ್ಲಿ ಇವರು ರಾತ್ರಿಯನ್ನು ಒಟ್ಟಾಗಿ ಕಳೆದರು. ನಂತರ ಇವರ ಸಂಬಂಧ  ಕೊನೆ ಆಯಿತು.

ಲಿಲಿ ಕೊಲ್ಲಿನ್ಸ್

2016ರ ಫೆಬ್ರವರಿಯಲ್ಲಿ ಲಿಲಿ ಜೊತೆ ನಿಕ್ ಸಂಬಂಧ ಆರಂಭಿಸಿದರು. ನಂತರ ಇದು ಕೂಡ ಕೊನೆ ಆಯಿತು. ಆ ಬಳಿಕ ಇವರು ಗಾರ್ಜಿಯಾ ಫೊಲ್ವರ್ ಜೊತೆ ಇವರು 2017ರಲ್ಲಿ ಭೇಟಿ ಆದರು. ಇದು ಕೂಡ ಕೊನೆ ಆಯಿತು.

ಪ್ರಿಯಾಂಕಾ ಚೋಪ್ರಾ

2018ರ ಮೇ ತಿಂಗಳಲ್ಲಿ ನಿಕ್ ಬಾಳಲ್ಲಿ ಬಂದಿದ್ದೇ ಪ್ರಿಯಾಂಕಾ ಚೋಪ್ರಾ. ಆ ಬಳಿಕ ನಿಕ್ ಬೇರೆ ಹುಡುಗಿಯರ ಸುದ್ದಿಗೆ ಹೋಗಿಲ್ಲ. ವಯಸ್ಸಲ್ಲಿ ತಮಗಿಂತ ಹಿರಿಯರಾದ ಪ್ರಿಯಾಂಕಾನ ನಿಕ್ ಮದುವೆ ಆದರು. ಈ ದಂಪತಿಗೆ  ಮಾಲ್ತಿ ಹೆಸರಿನ ಹೆಣ್ಣು ಮಗು ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.