ಕರಿಷ್ಮಾ ಮಾಜಿ ಪತಿ ನಿಧನ; ಹನಿಮೂನ್​ನಲ್ಲಿ ನಟಿಗೆ ಗೆಳೆಯರ ಜೊತೆ ಮಲಗಲು ಹೇಳಿದ್ದ ಸಂಜಯ್

Sunjay Kapur Death: ಕರಿಷ್ಮಾ ಕಪೂರ್ ಅವರು ತಮ್ಮ ಮಾಜಿ ಪತಿ ಸಂಜಯ್ ಕಪೂರ್ ಅವರೊಂದಿಗಿನ ಕಷ್ಟದ ವಿವಾಹ ಮತ್ತು ವಿಚ್ಛೇದನದ ಬಗ್ಗೆ ಮಾತನಾಡಿದ್ದರು. ಸಂಜಯ್ ಅವರ ನಿಧನದ ನಂತರ, ಕಿರುಕುಳ ಮತ್ತು ಅವರ ವಿಚ್ಛೇದನಕ್ಕೆ ಕಾರಣಗಳ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ.

ಕರಿಷ್ಮಾ ಮಾಜಿ ಪತಿ ನಿಧನ; ಹನಿಮೂನ್​ನಲ್ಲಿ ನಟಿಗೆ ಗೆಳೆಯರ ಜೊತೆ ಮಲಗಲು ಹೇಳಿದ್ದ ಸಂಜಯ್
ಕರಿಷ್ಮಾ-ಸಂಜಯ್
Updated By: ರಾಜೇಶ್ ದುಗ್ಗುಮನೆ

Updated on: Jun 13, 2025 | 8:30 AM

ನಟಿ ಕರಿಷ್ಮಾ ಕಪೂರ್ (Karishma Kapoor) ಹಲವು ಸಿನಿಮಾಗಳಲ್ಲಿ ಪವರ್ ಫುಲ್ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಒಂದು ಸಮಯದಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇತ್ತು ಮತ್ತು ಆ ಬೇಡಿಕೆ ಈಗ ಕಡಿಮೆ ಆಗಿದೆ. ಅವರು ಮೊದಲಿನಷ್ಟು ನಟನಾ ಜಗತ್ತಿನಲ್ಲಿ ಸಕ್ರಿಯವಾಗಿಲ್ಲ. ಈಗ ಅವರ ಮಾಜಿ ಪತಿ ಸಂಜಯ್ ಕಪೂರ್ ಅವರು ಕೇವಲ 53ನೇ ವಯಸ್ಸಿಗೆ ನಿಧನ ಹೊಂದಿದರು. ಆ ಬಳಿಕ ಇವರ ವಿಚ್ಛೇದನಕ್ಕೆ ಕಾರಣಗಳ ಬಗ್ಗೆ ಚರ್ಚೆಗಳು ನಡೆದಿವೆ.

ಕರಿಷ್ಮಾ ಕಪೂರ್ ಅವರು ಕರೀನಾ ಕಪೂರ್ ಸಹೋದರಿ. ಕರಿಷ್ಮಾ 2003ರಲ್ಲಿ ಮೊದಲ ಮದುವೆ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರೊಂದಿಗೆ ನಡೆದಿತ್ತು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. 2005ರಲ್ಲೇ ಇವರು ಬೇರೆ ಆಗುವ ನಿರ್ಧಾರ ತೆಗೆದುಕೊಂಡರು. ಆ ಬಳಿಕ 11 ವರ್ಷಗಳ ಕಾಲ ಇದನ್ನು ಮುಂದಕ್ಕೆ ಹಾಕಿದರು. ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ 2016ರಲ್ಲಿ ವಿಚ್ಛೇದನ ಪಡೆದರು. ಈಗ ಕರಿಷ್ಮಾ ಮಗಳು ಮತ್ತು ಮಗನೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಸಂಜಯ್ ಕಿರುಕುಳ

ಕರಿಷ್ಮಾ ಕಪೂರ್ ಅವರು ವಿಚ್ಛೇದನದ ಬಳಿಕ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿದ್ದರು. ಅತ್ತೆ ಮತ್ತು ಗಂಡನ ವಿರುದ್ಧ ಅವರು ಕಿರುಕುಳದ ಆರೋಪ ಮಾಡಿದ್ದರು. ಪತಿ ಕೂಡ ನಟಿಗೆ ಹಲವು ಬಾರಿ ಥಳಿಸಿದ್ದ ಎಂದು ದೂರಿದ್ದರು. ಕರಿಷ್ಮಾ ತನ್ನ ದೇಹದ ಮೇಲಿನ ಗಾಯದ ಗುರುತುಗಳನ್ನು ಮೇಕಪ್ ಮೂಲಕ ಮರೆಮಾಚುತ್ತಿದ್ದರು.

ಇದನ್ನೂ ಓದಿ
ವಿಮಾನ ದುರಂತದಲ್ಲಿ ಮೃತಪಟ್ಟ ಪೈಲಟ್ ನನ್ನ ಸಂಬಂಧಿ ಅಲ್ಲ; ವಿಕ್ರಾಂತ್ ಮಾಸಿ
ವಿಮಾನ ದುರಂತದ ಟ್ವೀಟ್ ಮಾಡಿದ ಬಳಿಕ ಹೃದಯಾಘಾತದಿಂದ ನಟಿಯ ಮಾಜಿ ಪತಿ ನಿಧನ
ವಿಮಾನ ದುರಂತ: ‘12th ಫೇಲ್’ ನಟನ ಸಂಬಂಧಿ, ಕರ್ನಾಟಕದ ಕ್ಲೈವ್ ಕುಂದರ್ ಸಾವು
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ

ಇದನ್ನೂ ಓದಿ: ಕರಿಷ್ಮಾ ಕಪೂರ್​ಗೆ ಎರಡನೇ ಮದುವೆ? ಉತ್ತರಿಸಿದ ನಟಿ

2017ರಲ್ಲಿ ಸಂಜಯ್ ಮೂರನೇ ಬಾರಿಗೆ ಮದುವೆಯಾದರು. ಅವರನ್ನು ವರಿಸಿದ್ದೇ ಪ್ರಿಯಾ ಸಚ್‌ದೇವ್. ಪ್ರಿಯಾ ಮತ್ತು ಸಂಜಯ್ 2010 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಆದರೆ ಇಬ್ಬರೂ ಅದನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಕರಿಷ್ಮಾ ಕಪೂರ್ ಅವರಿಂದ ವಿಚ್ಛೇದನ ಪಡೆದ ನಂತರ ಸಂಜಯ್ ಮತ್ತು ಪ್ರಿಯಾ ವಿವಾಹವಾದರು.

ವಿಚ್ಛೇದನ ಕೋರಿದ್ದರಲ್ಲಿ ಏನಿತ್ತು?

ಕರಿಷ್ಮಾ ಕಪೂರ್ ಅವರು ವಿಚ್ಛೇದನ ಪತ್ರದಲ್ಲಿ ಹಲವು ರೀತಿಯ ಆರೋಪ ಮಾಡಿದ್ದರು. ಹನಿಮೂನ್ ಸಂದರ್ಭದಲ್ಲಿ ಗೆಳೆಯರ ಜೊತೆ ಮಲಗುವಂತೆ ಆತ ಕೇಳುತ್ತಿದ್ದ ಎಂದಿದ್ದರು. ತಾಯಿಯಿಂದ ಹೊಡೆಸುತ್ತಿದ್ದ ಎಂದೆಲ್ಲ ಆರೋಪಿಸಿದ್ದರು. ಈಗ ಸಂಜಯ್ ಅವರು ಹೃದಯಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಏರ್ ಇಂಡಿಯಾ ಟ್ರ್ಯಾಜಿಡಿ ಬಗ್ಗೆ ಅವರು ಟ್ವೀಟ್ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.