AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಿಷ್ಮಾ ಕಪೂರ್​ಗೆ ಎರಡನೇ ಮದುವೆ? ಉತ್ತರಿಸಿದ ನಟಿ

Karishma Kapoor: ಕರಿಶ್ಮಾ ಕಪೂರ್, 90 ಹಾಗೂ 2000 ದಶಕದ ಸ್ಟಾರ್ ನಟಿ ಆಗಿದ್ದರು. ಬಾಲಿವುಡ್​ನಲ್ಲಿ ಅತ್ಯಂತ ಬ್ಯುಸಿ ನಟಿ ಆಗಿದ್ದರು, ಆದರೆ ಮದುವೆಯ ಬಳಿಕ ಚಿತ್ರರಂಗದಿಂದ ದೂರಾದರು. ಆದರೆ ಅವರ ದಾಂಪತ್ಯ ಜೀವನ ಹಿಂಸಾತ್ಮಕವಾಗಿತ್ತು. ಈಗ ಕರಿಶ್ಮಾ ಇನ್ನೊಂದು ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ.

ಕರಿಷ್ಮಾ ಕಪೂರ್​ಗೆ ಎರಡನೇ ಮದುವೆ? ಉತ್ತರಿಸಿದ ನಟಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 08, 2024 | 8:06 PM

Share

ನಟಿ ಕರಿಷ್ಮಾ ಕಪೂರ್ ಹಲವು ಸಿನಿಮಾಗಳಲ್ಲಿ ಪವರ್ ಫುಲ್ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಒಂದು ಕಾಲದಲ್ಲಿ ಅವರಿಗೆ ಸಖತ್ ಬೇಡಿಕೆ ಇತ್ತು. ಆದರೆ, ಈಗ ಕರಿಷ್ಮಾ ಮೊದಲಿನಂತೆ ನಟನಾ ಜಗತ್ತಿನಲ್ಲಿ ಸಕ್ರಿಯವಾಗಿಲ್ಲ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ನಟಿ ತನ್ನ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕದಲ್ಲಿರಲು ಪ್ರಯತ್ನಿಸುತ್ತಾರೆ. ಕೆಲ ದಿನಗಳ ಹಿಂದೆ ಕರಿಷ್ಮಾ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದ್ದರು. ನಂತರ ನಟಿಗೆ ಎರಡನೇ ಮದುವೆಯ ಬಗ್ಗೆ ಕೇಳಲಾಯಿತು. ಈ ಬಗ್ಗೆ ನಟಿ ಸ್ಪಷ್ಟ ನಿಲುವು ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿ ಒಬ್ಬರು ‘ನೀವು ಮತ್ತೆ ಮದುವೆಯಾಗುತ್ತೀರಾ?’ ಎಂದು ಕರಿಷ್ಮಾಗೆ ಕೇಳಲಾಗಿದೆ. ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಅವರು ಉತ್ತರಿಸಿದ್ದಾರೆ. ‘ಇದು ಸಮಯ ಹಾಗೂ ವ್ಯಕ್ತಿಯನ್ನು ಅವಲಂಬಿಸಿತುತ್ತದೆ’ ಎಂದಿದ್ದಾರೆ. ನಿಜ ಹೇಳಬೇಕೆಂದರೆ, ಮೊದಲ ಪತಿಗೆ ವಿಚ್ಛೇದನ ನೀಡಿದ ನಂತರ, ಕರಿಷ್ಮಾ ಕಪೂರ್ ಎರಡನೇ ಮದುವೆಯ ಬಗ್ಗೆ ಯೋಚಿಸಲಿಲ್ಲ. ನಟಿ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ನಟಿ ತನ್ನ ಮಕ್ಕಳೊಂದಿಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.

ಕರಿಷ್ಮಾ ಕಪೂರ್ ಎರಡನೇ ಮದುವೆ ಬಗ್ಗೆ ತಂದೆಯ ಹೇಳಿಕೆ

ಕರಿಷ್ಮಾ ತಂದೆ ರಣಧೀರ್ ಕಪೂರ್ ಈ ಮೊದಲು ಮಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದರು. ಕರಿಷ್ಮಾ ಮತ್ತೆ ಮದುವೆಯಾಗಲು ಬಯಸಿದರೆ, ಅವರು ಆಗಬಹುದು. ಎರಡನೆ ಮದುವೆ ಕೆಟ್ಟದು ಎಂಬುದೇ ಇಲ್ಲ. ಆದರೆ ಕರಿಷ್ಮಾಗೆ ಮತ್ತೆ ಮದುವೆಯಾಗಲು ಇಷ್ಟವಿಲ್ಲ’ ಎಂದು ರಣಧೀರ್ ಕಪೂರ್ ಕೂಡ ಹೇಳಿದ್ದರು.

ಕರಿಷ್ಮಾ ಕಪೂರ್ ಅವರ ಮೊದಲ ಮದುವೆ

ಕರಿಷ್ಮಾ ಕಪೂರ್ ಅವರ ಮೊದಲ ಮದುವೆ 2003ರಲ್ಲಿ ದೆಹಲಿಯ ಉದ್ಯಮಿ ಸಂಜಯ್ ಕಪೂರ್ ಅವರೊಂದಿಗೆ ನಡೆಯಿತು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಕೊನೆಗೆ ಇಬ್ಬರೂ ಬೇರೆಯಾಗಲು ನಿರ್ಧರಿಸಿದರು. ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ 2016ರಲ್ಲಿ ವಿಚ್ಛೇದನ ಪಡೆದರು. ಈಗ ಕರಿಷ್ಮಾ 17 ವರ್ಷದ ಮಗಳು ಮತ್ತು 12 ವರ್ಷದ ಮಗನೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.

ಇದನ್ನೂ ಓದಿ:​ಮರು ಮದುವೆ ಬಗ್ಗೆ ಕರಿಷ್ಮಾ ಕಪೂರ್​ಗೆ ಗೊಂದಲ

ಕರಿಷ್ಮಾಳ ಗಂಡ ಆಕೆಗೆ ಥಳಿಸುತ್ತಿದ್ದ

ವಿಚ್ಛೇದನದ ನಂತರ, ಕರಿಷ್ಮಾ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ವಿಚಾರ ಬಹಿರಂಗಪಡಿಸಿದರು. ತಮ್ಮ ಅತ್ತೆಯ ಮೇಲೆ ಕಿರುಕುಳದ ಆರೋಪ ಮಾಡಿದ್ದಾರೆ. ಪತಿ ಕೂಡ ನಟಿಗೆ ಹಲವು ಬಾರಿ ಥಳಿಸಿದ್ದರು ಎನ್ನಲಾಗಿದೆ. ಕರಿಷ್ಮಾ ತನ್ನ ದೇಹದ ಮೇಲಿನ ಗಾಯದ ಗುರುತುಗಳನ್ನು ಮೇಕಪ್ ಮೂಲಕ ಮರೆಮಾಚುತ್ತಿದ್ದರು.

ಸಂದರ್ಶನವೊಂದರಲ್ಲಿ ಕರಿಷ್ಮಾ ಹನಿಮೂನ್ ದಿನದಂದು ನಡೆದ ಘಟನೆಯ ಬಗ್ಗೆ ಹೇಳಿದ್ದರು. ಮದುವೆಯಾದ ಮೊದಲ ರಾತ್ರಿಯೇ ಸಂಜಯ್ ಅವರು ಕರಿಷ್ಮಾ ಕಪೂರ್ಗೆ ಪ್ರಪೋಸ್ ಮಾಡಿದ್ದರು. ನಂತರ ಜೀವನ ಕಷ್ಟ ಆಯಿತು. ಈಗ ಕರಿಷ್ಮಾ ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ