ಮತ್ತೆ ಬಂದ ಡಿಲ್ಲಿ, ಈ ಬಾರಿ ಕೆವಿಎನ್ ನಿರ್ಮಾಣ
Kaithi 2 movie: ಎಲ್ಸಿಯು (ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ಗೆ ಕಾರಣವಾದ ಮೊದಲ ಸಿನಿಮಾ ‘ಕೈದಿ’ 2019 ರಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಈ ಸಿನಿಮಾದ ಎರಡನೇ ಭಾಗ ತೆರೆಗೆ ಬರುತ್ತಿದೆ. ಈ ಬಗ್ಗೆ ನಟ ಕಾರ್ತಿ ಸುದ್ದಿ ಹಂಚಿಕೊಂಡಿದ್ದು ‘ಡಿಲ್ಲಿ ರಿಟರ್ನ್ಸ್’ ಎಂದು ಬರೆದುಕೊಂಡಿದ್ದಾರೆ.

ಮತ್ತೆ ಬರ್ತಿದ್ದಾರೆ ‘ಡಿಲ್ಲಿ’. ಡಾನ್ಗಳಾದ ಸಂದಾನಂ, ರೋಲೆಕ್ಸ್ಗಳ ನಿದ್ದೆ ಕೆಡಿಸಿದ ಸಾಮಾನ್ಯ ಅಪರಾಧಿ ಡಿಲ್ಲಿ ಮತ್ತೆ ಬರುತ್ತಿದ್ದಾರೆ. ಎಲ್ಸಿಯು (ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್) ಬಗ್ಗೆ ಮಾಹಿತಿ ಇರುವವರಿಗೆ ಗೊತ್ತಿರುತ್ತದೆ, ಡಿಲ್ಲಿ ಯಾಕೆ ಅಷ್ಟು ಮಹತ್ವದ ವ್ಯಕ್ತಿ ಎಂಬುದು. ಏಕೆಂದರೆ ಎಲ್ಲವೂ ಪ್ರಾರಂಭ ಆಗಿದ್ದೆ ಡಿಲ್ಲಿ ಇಂದಾಗಿ. ವಿಕ್ರಂ ಮಗನ ಕಳೆದುಕೊಂಡಿದ್ದು, ಅಮರ್ ಪ್ರೇಯಸಿಯ ಕಳೆದುಕೊಂಡಿದ್ದು, ಸಂದಾನಂ ಜೀವ ಕಳೆದುಕೊಂಡಿದ್ದು, ರೋಲೆಕ್ಸ್ ಇರುವುದೆಲ್ಲವನ್ನೂ ಕಳೆದುಕೊಂಡು, ಶೂನ್ಯದಿಂದ ಎಲ್ಲವನ್ನೂ ಮತ್ತೆ ಶುರು ಮಾಡುವಂತಾಗಿರುವುದು ಡೆಲ್ಲಿ ಇಂದಾಗಿ. ಈಗ ಅದೇ ಡೆಲ್ಲಿ ಮತ್ತೆ ಬರುತ್ತಿದ್ದಾನೆ.
2019 ರಲ್ಲಿ ಬಿಡುಗಡೆ ಆದ ‘ಕೈದಿ’ ಸಿನಿಮಾದ ಮುಖ್ಯಪಾತ್ರದ ಹೆಸರು ಡೆಲ್ಲಿ. ನಶೆ ತುಂಬಿದ ಮದ್ಯ ಸೇವಿಸಿದ ಪೊಲೀಸರನ್ನು ತುಂಬಿದ ಲಾರಿಯನ್ನು ಒಂದು ಊರಿನಿಂದ ಮತ್ತೊಂದು ಊರಿಗೆ ಓಡಿಸಿಕೊಂಡು ಹೋಗುವ ಡ್ರೈವರ್ ಪಾತ್ರ ಡೆಲ್ಲಿಯದ್ದು. ಡೆಲ್ಲಿ ಸಹ ಆಗತಾನೆ ಜೈಲಿನಿಂದ ಪರೋಲ್ ಮೇಲಿಂದ ಬಂದವನು. ಅವನು ಸಹ ಸಾಮಾನ್ಯದವನಲ್ಲ. ಹೀಗೆ ಪೊಲೀಸರು ತುಂಬಿದ ಲಾರಿಯ ಹಿಂದೆ ಡ್ರಗ್ಸ್ ಲೋಕದ ಪಾತಕರು ಬಿದ್ದಿರುತ್ತಾರೆ. ಅವರನ್ನೆಲ್ಲ ಮಣಿಸಿ, ಪೊಲೀಸರನ್ನು ಹೇಗೆ ಅಪರಾಧಿಯೊಬ್ಬ ಕಾಪಾಡುತ್ತಾನೆ ಎಂಬುದೇ ‘ಕೈದಿ’ ಸಿನಿಮಾದ ಕತೆ.
2019 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದ ಮೂಲಕ ಲೋಕೇಶ್ ಕನಗರಾಜ್ ನಿರ್ದೇಶನದ ಪ್ರತಿಭೆ ದೇಶಕ್ಕೆ ಗೊತ್ತಾಗಿತ್ತು. ಕಾರ್ತಿಯ ನಟನೆಗೂ ಸಹ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ‘ಕೈದಿ’ ಸಿನಿಮಾದ ಬಳಿಕ ಅದರ ಮುಂದಿನ ಭಾಗದಂತೆ ವಿಕ್ರಂ ಸಿನಿಮಾ ಬಂದಿದೆ. ‘ಕೈದಿ’ ಸಿನಿಮಾದ ಕತೆಗೆ ‘ವಿಕ್ರಂ’ ಸಿನಿಮಾದ ಕತೆ ಸಂಬಂಧ ಹೊಂದಿದೆ. ಇದೀಗ ‘ಕೈದಿ’ ಸಿನಿಮಾದ ಮುಂದಿನ ಭಾಗ ತೆರೆಗೆ ಬರಲಿದೆ. ಈ ಬಗ್ಗೆ ಸಿನಿಮಾದ ನಾಯಕ ಕಾರ್ತಿ ಸುದ್ದಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ವಿಜಯ್ ದೇವರಕೊಂಡ ಸಿನಿಮಾದಿಂದ ಹೊರಬಂದಿದ್ದೇಕೆ ನಟಿ ರುಕ್ಮಿಣಿ ವಸಂತ್
ನಿರ್ದೇಶಕ ಲೋಕೇಶ್ ಕನಗರಾಜ್ ಜೊತೆಗೆ ಚಿತ್ರ ಹಂಚಿಕೊಂಡಿರುವ ನಟ ಕಾರ್ತಿ, ‘ಡಿಲ್ಲಿ ಮತ್ತೆ ಬರುತ್ತಿದ್ದಾನೆ’ ಈ ವರ್ಷ ಮತ್ತೊಂದು ಅದ್ಭುತ ವರ್ಷವಾಗಲಿ’ ಎಂದಿದ್ದಾರೆ ಕಾರ್ತಿ. ವಿಶೇಷವೆಂದರೆ ಈ ಬಾರಿ ‘ಕೈದಿ 2’ ಸಿನಿಮಾವನ್ನು ನಿರ್ಮಿಸುತ್ತಿರುವುದು ಕೆವಿಎನ್ ಪ್ರೊಡಕ್ಷನ್ಸ್. ಕನ್ನಡದ ‘ಟಾಕ್ಸಿಕ್’, ‘ಕೆಡಿ’, ತಮಿಳಿನ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾಗಳಿಗೆ ಬಂಡವಾಳ ತೊಡಗಿಸಿರುವ ಕೆವಿಎನ್ ಅವರೇ ಈಗ ‘ಕೈದಿ 2’ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ.
‘ಕೈದಿ 2’ ಸಿನಿಮಾ ಘೋಷಣೆ ಆದ ಬೆನ್ನಲ್ಲೆ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ‘ಕೈದಿ 2’ ಸಿನಿಮಾದಲ್ಲಿ ಡಿಲ್ಲಿಯ ಮುಂದಿನ ಕತೆ ತೋರಿಸಲಾಗುತ್ತದೆಯೋ ಅಥವಾ ಅವನು ಜೈಲಿಗೆ ಏಕೆ ಹೋಗಿದ್ದ, ಅದಕ್ಕೆ ಮುಂಚೆ ಏನು ಮಾಡುತ್ತಿದ್ದ ಎಂಬ ಕತೆಯನ್ನು ತೋರಿಸಲಾಗುತ್ತದೆಯೋ ಎಂಬ ಕುತೂಹಲ ಮೂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ