ಮದುವೆ ಬಳಿಕ ಚಿತ್ರರಂಗ ತೊರೆದರಾ ನಟಿ ಕೀರ್ತಿ ಸುರೇಶ್? ಇಲ್ಲಿದೆ ಸ್ಪಷ್ಟನೆ
ಕೀರ್ತಿ ಸುರೇಶ್ ಅವರ ಮದುವೆಯ ನಂತರ ಅವರು ಚಿತ್ರರಂಗ ತೊರೆಯುತ್ತಾರೆ ಎಂಬ ವದಂತಿಗಳು ಹರಡುತ್ತಿವೆ. ಆದರೆ, 'ಬೇಬಿ ಜಾನ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿರುವ ಅವರು ಇನ್ನೂ 'ರಿವಾಲ್ವರ್ ರೀಟಾ' ಮತ್ತು 'ಕನ್ನಿವೇಡಿ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆಲಿಯಾ ಭಟ್ ಮತ್ತು ಐಶ್ವರ್ಯಾ ರೈ ಅವರಂತೆ ಮದುವೆಯ ನಂತರವೂ ಸಿನಿಮಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುಂದುವರಿದ ಅನೇಕ ನಟಿಯರ ಉದಾಹರಣೆಗಳಿವೆ.
ಕೀರ್ತಿ ಸುರೇಶ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರು ತಮ್ಮ ಬಾಲ್ಯದ ಗೆಳೆಯ ಆ್ಯಂಟನಿ ಅವರನ್ನು ಮದುವೆ ಆಗಿದ್ದಾರೆ. ಅವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಯಲ್ಲಿ ಇದೆ. ಈಗ ಅವರು ‘ಬೇಬಿ ಜಾನ್’ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈಗ ಅವರು ಚಿತ್ರರಂಗ ತೊರೆಯುತ್ತಾರೆ ಎನ್ನುವ ಸುದ್ದಿ ಹರಡಿದೆ.
ಮದುವೆ ಆದ ಬಳಿಕ ಚಿತ್ರರಂಗ ತೊರೆದ ಅನೇಕರು ಇದ್ದಾರೆ. ಈ ಸಾಲಿನಲ್ಲಿ ಕೀರ್ತಿ ಸುರೇಶ್ ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆ ಆದ ಬಳಿಕ ಕೆಲವರು ಚಿತ್ರರಂಗ ತೊರೆದರೆ ಇನ್ನೂ ಕೆಲವರು ಚಿತ್ರರಂಗದಲ್ಲೇ ಮುಂದುವರಿದ ಉದಾಹರಣೆ ಇದೆ. ಈ ಪೈಕಿ ಕೀರ್ತಿ ಸುರೇಶ್ ಯಾವ ಮಾರ್ಗ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ.
ಸದ್ಯ ಕೀರ್ತಿ ಸುರೇಶ್ ಅವರ ಬಳಿ ‘ರಿವಾಲ್ವರ್ ರೀಟಾ’ ಹಾಗೂ ‘ಕನ್ನಿವೇಡಿ’ ಚಿತ್ರಗಳು ಇವೆ. ಇದರ ಜೊತೆ ‘ಬೇಬಿ ಜಾನ್’ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಇದಾದ ಬಳಿಕ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಇದು ಅನುಮಾನ ಹುಟ್ಟುಹಾಕಿದೆ. ಅವರು ನಟನೆಯಿಂದ ಬ್ರೇಕ್ ಪಡೆಯುತ್ತಾರಾ ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ. ಆದರೆ, ಇದು ಕೇವಲ ವದಂತಿ ಎನ್ನುತ್ತಿವೆ ಮೂಲಗಳು.
ಕೀರ್ತಿ ಸುರೇಶ್ ಅವರು ಮದುವೆ ಮುಗಿದ ಕೆಲವೇ ದಿನಗಳಲ್ಲಿ ಸಿನಿಮಾ ಪ್ರಚಾರಕ್ಕೆ ತೆರಳಿದ್ದರು. ಇದು ಸಿನಿಮಾ ಮೇಲೆ ಅವರಿಗೆ ಇದ್ದ ಪ್ರೀತಿಯನ್ನು ತೋರಿಸುತ್ತದೆ. ಸದ್ಯಕ್ಕಂತೂ ಅವರು ಸಿನಿಮಾ ರಂಗ ತೊರೆಯುವ ಆಲೋಚನೆ ಇಲ್ಲ. ಆ್ಯಂಟೋನಿ ಕೀರ್ತಿ ಸುರೇಶ್ ಅವರ ವೃತ್ತಿ ಜೀವನಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ಎಲ್ಲ ಕಡೆಗಳಲ್ಲೂ ಮಾಂಗಲ್ಯ ಧರಿಸಿಯೇ ಓಡಾಡುತ್ತಿದ್ದಾರೆ ಕೀರ್ತಿ ಸುರೇಶ್
ಕೀರ್ತಿ ಸುರೇಶ್ ಅವರು ‘ಮಹಾನಟಿ’ ಅಂತಹ ಚಿತ್ರಗಳನ್ನು ನೀಡಿದವರು. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಹೀಗಿರುವಾಗಲೇ ಅವರು ಮದುವೆ ಆಗಿದ್ದಾರೆ. ಹಾಗಂದ ಮಾತ್ರಕ್ಕೆ ಅವರಿಗೆ ಬೇಡಿಕೆ ಕುಗ್ಗುತ್ತದೆ ಎಂದಲ್ಲ. ಆಲಿಯಾ ಭಟ್, ಐಶ್ವರ್ಯಾ ಸೇರಿದಂತೆ ಅನೇಕ ನಟಿಯರು ಮದುವೆ ಆದ ಬಳಿಕವೂ ಚಿತ್ರರಂಗದಲ್ಲಿ ಮುಂದುವರಿದಿದ್ದಾರೆ. ಕೀರ್ತಿ ಸುರೇಶ್ ಕೂಡ ಇದೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಊಹಿಸಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.