ದಾಳಿ ಆಗುತ್ತಿದ್ದಂತೆ ಮನೆ ಬಿಟ್ಟು ತೆರಳಿದ ಅಲ್ಲು ಅರ್ಜುನ್ ಮಕ್ಕಳು
ಪುಷ್ಪ 2 ಚಿತ್ರದ ಯಶಸ್ಸಿನ ನಂತರ, ಅಲ್ಲು ಅರ್ಜುನ್ ಅವರ ಮನೆ ಮೇಲೆ ದಾಳಿ ನಡೆದಿದೆ. ಹೈದರಾಬಾದ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಕ್ಕೆ ಅವರ ವಿರುದ್ಧ ಪ್ರತಿಭಟನೆ ನಡೆದಿದ್ದು, ಅದರ ಪರಿಣಾಮವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಅಲ್ಲು ಅರ್ಜುನ್ ಮಕ್ಕಳು ಕುಟುಂಬದೊಂದಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ.
ಅಲ್ಲು ಅರ್ಜುನ್ ಅವರಿಗೆ ಕಷ್ಟದ ಸಮಯ ಎದುರಾಗಿದೆ. ಅವರ ಮನೆಯ ಮೇಲೆ ದಾಳಿ ನಡೆದಿದೆ. ಹೈದರಾಬಾದ್ನಲ್ಲಿರುವ ನಿವಾಸದ ಹೊರ ಭಾಗವನ್ನು ಹಾಳು ಮಾಡಲಾಗಿದೆ. ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದರು. ಇದಕ್ಕೆ ಅಲ್ಲು ಅರ್ಜುನ್ ಪರೋಕ್ಷ ಕಾರಣ ಎನ್ನಲಾಗಿದೆ. ಅವರಿಗೆ ನ್ಯಾಯ ಸಿಗಬೇಕು ಎಂದು ಅಲ್ಲು ಅರ್ಜುನ್ ಮನೆ ಎದುರು ಪ್ರತಿಭಟನೆ ನಡೆಸಲಾಗುತ್ತಿತ್ತು. ಆ ಬಳಿಕ ಅವರು ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿ ಬಳಿಕ ಅಲ್ಲು ಅರ್ಜುನ್ ಮಕ್ಕಳು ಮನೆ ಬಿಟ್ಟು ಹೊರಟಿದ್ದಾರೆ.
‘ಇಸ್ಮಾನಿಯಾ ಯೂನಿವರ್ಸಿಟಿ ಜಾಯಿಂಟ್ ಆ್ಯಕ್ಷನ್ ಕಮಿಟಿಯವರು ಈ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಈ ದಾಳಿ ಬಳಿಕ ಅಲ್ಲು ಅರ್ಜುನ್ ಭಯಗೊಂಡಿದ್ದಾರೆ. ಅಲ್ಲು ಅರ್ಜುನ್ ಮಕ್ಕಳಾದ ಅಲ್ಲು ಅರ್ಹಾ, ಅಲ್ಲು ಅಯಾನ್ ಕಾರು ಹತ್ತಿ ವೇಗವಾಗಿ ಹೊರಟಿದ್ದಾರೆ. ಅವರು ಬೇರೆ ಕಡೆ ಹೋಗಿ ಉಳಿದುಕೊಂಡಿದ್ದಾರೆ.
ಅಲ್ಲು ಅರ್ಜುನ್ ಅವರಿಗೆ ಈ ವರ್ಷ ‘ಪುಷ್ಪ 2’ ಚಿತ್ರದ ಮೂಲಕ ದೊಡ್ಡ ಯಶಸ್ಸು ಸಿಕ್ಕಿತ್ತು. ಆದರೆ, ಈ ಯಶಸ್ಸನ್ನು ಎಂಜಾಯ್ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಮಹಿಳೆ ಮೃತಪಟ್ಟಿದ್ದಕ್ಕೆ ಅವರು ಅರೆಸ್ಟ್ ಆಗಿದ್ದರು. ಅವರು ಹೊರ ಬಂದು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ್ದರು. ಈ ಬೆನ್ನಲ್ಲೇ ಅಲ್ಲು ಅರ್ಜುನ್ ಮನೆಯ ಮೇಲೆ ದಾಳಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲು ಅರವಿಂದ್, ಈ ರೀತಿಯ ಘಟನೆಯನ್ನು ಬೆಂಬಲಿಸಬಾರದು ಎಂದಿದ್ದಾರೆ.
Allu Arjun’s kids (Arha & Ayaan) whisked away from the house after attacks today! pic.twitter.com/iu5N5UFZ3Q
— idlebrain.com (@idlebraindotcom) December 22, 2024
ಇದನ್ನೂ ಓದಿ: 1 ಕೋಟಿ ರೂ. ಪರಿಹಾರ ಕೊಡುವಂತೆ ಒತ್ತಾಯಿಸಿ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ
ಅಲ್ಲು ಅರ್ಜುನ್ ಮಕ್ಕಳು ಈಗ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ ಎನ್ನಲಾಗಿದೆ. ಅವರಿಗೆ ಈಗ ಸಿಕ್ಕಿರೋದು ಮಧ್ಯಂತರ ಜಾಮೀನು. ಅವರಿಗೆ ಮತ್ತೆ ಜೈಲು ಸೇರುವ ಭಯ ಕಾಡುತ್ತಿದೆ. ಈ ವಿಚಾರದಲ್ಲಿ ಅವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಅವರು ಹಲವು ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:34 am, Mon, 23 December 24