
ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರೋಕೆ ಪ್ರಯತ್ನಿಸುತ್ತಾರೆ. ವಿವಿಧ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಕೆಲವೊಮ್ಮೆ ಬಾಲ್ಯದ ಫೋಟೋಗಳನ್ನು ಅವರು ಪೋಸ್ಟ್ ಮಾಡುತ್ತಾರೆ. ನೆಚ್ಚಿನ ಸೆಲೆಬ್ರಿಟಿಯ ಬಾಲ್ಯದ ಚಿತ್ರ (Childhood Photo) ನೋಡೋಕೆ ಅಭಿಮಾನಿಗಳಿಗೂ ಕುತೂಹಲ ಇರುತ್ತದೆ. ಈಗ ದಕ್ಷಿಣ ಭಾರತದ ನಟಿಯ ಬಾಲ್ಯದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ. ಅವರ ಅಭಿಮಾನಿಗಳು ಇದನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದು ಯಾರ ಫೋಟೋ ಎಂದು ಗುರುತಿಸುವಂತೆ ಕೆಲವರು ಸವಾಲು ಹಾಕಿದ್ದಾರೆ.
ಹಾಗಾದರೆ ಫೋಟೋದಲ್ಲಿರುವ ನಟಿ ಯಾರು? ಅವರೇ ಕೀರ್ತಿ ಸುರೇಶ್. ಅವರ ಸಹೋದರಿ ರೇವತಿ ಸುರೇಶ್ಗೆ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂದು ಕೀರ್ತಿ ಅವರು ಬಾಲ್ಯದ ನೆನಪನ್ನು ತೆರೆದಿಟ್ಟಿದ್ದಾರೆ. ರೇವತಿ ಜೊತೆ ಕಳೆದ ಕ್ಷಣಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ಅದನ್ನು ಅವರು ಈಗ ಪೋಸ್ಟ್ ಮಾಡಿದ್ದಾರೆ. ಫೋಟೋ ಸ್ಟುಡಿಯೋ ಮೊದಲಾದ ಕಡೆಗಳಲ್ಲಿ ಕೀರ್ತಿ ಹಾಗೂ ರೇವತಿ ಒಟ್ಟಿಗೆ ನಿಂತಿರುವ ಫೋಟೋಗಳು ಇವೆ.
ಈ ಫೋಟೋಗಳನ್ನು ಅಭಿಮಾನಿಗಳು ಸಂಪೂರ್ಣವಾಗಿ ಇಷ್ಟಪಟ್ಟಿದ್ದಾರೆ. ‘ಬಾಲ್ಯದಲ್ಲಿಯೂ ನೀವು ಕ್ಯೂಟ್ ಆಗಿ ಕಾಣಿಸುತ್ತಿದ್ದಿರಿ. ಈಗಂತೂ ಕೇಳೋದೇ ಬೇಡ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಕೀರ್ತಿ ಅವರಂಥ ಸಹೋದರಿ ಪಡೆದ ರೇವತಿಯೇ ಧನ್ಯರು’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Keerthy Suresh: ಗುರುತೇ ಸಿಗದಷ್ಟು ಬದಲಾದ ಕೀರ್ತಿ ಸುರೇಶ್; ಡಿಗ್ಲಾಮ್ ಲುಕ್ನಲ್ಲಿ ಗಮನ ಸೆಳೆದ ನಟಿ
ಕೀರ್ತಿ ಸುರೇಶ್ ಅವರು ಬಾಲ ಕಲಾವಿದೆಯಾಗಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. ನಂತರ ನಾಯಕಿ ಆಗಿ ಮಿಂಚಿದರು. ‘ಮಹಾನಟಿ’ ಚಿತ್ರದಿಂದ ಅವರ ಖ್ಯಾತಿ ಹೆಚ್ಚಾಯಿತು. ಆ ಬಳಿಕ ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರೂ ಯಶಸ್ಸು ಕಾಣಲಿಲ್ಲ. 2022ರಲ್ಲಿ ರಿಲೀಸ್ ಆದ ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದಿಂದ ಕೀರ್ತಿ ಸುರೇಶ್ ಗೆಲುವಿನ ಟ್ತ್ಯಾಕ್ಗೆ ಮರಳಿದರು. ಸದ್ಯ ಅವರು ಆರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಪೈಕಿ ‘ದಸರಾ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ತೆಲುಗಿನಲ್ಲಿ ಸಿದ್ಧಗೊಳ್ಳುತ್ತಿರುವ ಈ ಚಿತ್ರಕ್ಕೆ ನಾನಿ ಹೀರೋ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಅವರು ಡಿಗ್ಲಾಮ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ