Keerthy Suresh: ಗುರುತೇ ಸಿಗದಷ್ಟು ಬದಲಾದ ಕೀರ್ತಿ ಸುರೇಶ್; ಡಿಗ್ಲಾಮ್ ಲುಕ್ನಲ್ಲಿ ಗಮನ ಸೆಳೆದ ನಟಿ
‘ದಸರಾ’ ಚಿತ್ರದಲ್ಲಿ ತೆಲುಗಿನ ನಾನಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ಡಿಗ್ಲಾಮ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆಟ್ನಲ್ಲಿ ಅವರು ಕೋಳಿ ಮರಿ ಹಿಡಿದು ಕುಳಿತಿದ್ದು, ಗಮನ ಸೆಳೆದಿದೆ.
Updated on: Mar 02, 2023 | 8:38 AM

ನಟಿ ಕೀರ್ತಿ ಸುರೇಶ್ ಅವರು ಗ್ಲಾಮರ್ ಹಾಗೂ ಡಿಗ್ಲಾಮ್ ಪಾತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಮಾರುಕಟ್ಟೆ ದಿನಕಳೆದಂತೆ ವಿಸ್ತಾರ ಆಗುತ್ತಿದೆ. ಈಗ ಅವರು ‘ದಸರಾ’ ಚಿತ್ರದಲ್ಲಿ ನಟಿಸುತ್ತಿದ್ದು, ಸೆಟ್ನ ಫೋಟೋ ಹಂಚಿಕೊಂಡಿದ್ದಾರೆ.

‘ದಸರಾ’ ಚಿತ್ರದಲ್ಲಿ ತೆಲುಗಿನ ನಾನಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೀರ್ತಿ ಸುರೇಶ್ ಅವರು ಡಿಗ್ಲಾಮ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೆಟ್ನಲ್ಲಿ ಅವರು ಕೋಳಿ ಮರಿ ಹಿಡಿದು ಕುಳಿತಿದ್ದು, ಗಮನ ಸೆಳೆದಿದೆ.

‘ದಸರಾ’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರದಿಂದ ಗೆಲುವು ಕಾಣುವ ನಿರೀಕ್ಷೆಯಲ್ಲಿ ಕೀರ್ತಿ ಸುರೇಶ್ ಇದ್ದಾರೆ.

2022ರಲ್ಲಿ ಅವರ ನಟನೆಯ ನಾಲ್ಕು ಚಿತ್ರಗಳು ರಿಲೀಸ್ ಆದವು. ಈ ಪೈಕಿ ‘ಸರ್ಕಾರು ವಾರಿ ಪಾಟ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಇದರಿಂದ ಅವರ ಬೇಡಿಕೆ ಹೆಚ್ಚಿತು.

ಸದ್ಯ ಅವರ ಕೈಯಲ್ಲಿ ಆರು ಚಿತ್ರಗಳಿವೆ. ‘ದಸರಾ’ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಮಾರ್ಚ್ 30ಕ್ಕೆ ಸಿನಿಮಾ ರಿಲೀಸ್ ಆಗಲಿದೆ.