Kichcha Sudeep: ಸುದೀಪ್​ ಇಲ್ಲದೇ 3 ವಾರ ಮೈ ಮರೆತಿದ್ದ ಬಿಗ್​ ಬಾಸ್​ ಮಂದಿಗೆ ಛಾಟಿ ಬೀಸಿದ ಕಿಚ್ಚನ ವಾಯ್ಸ್​ ಮೆಸೇಜ್​

Bigg Boss Kannada: ಈ ವಾಯ್ಸ್​ ನೋಟ್​ ಮೂಲಕ ಎಲ್ಲರಿಗೂ ಒಂದೊಂದು ಕಿವಿಮಾತು ಹೇಳುತ್ತೇನೆ ಎಂದು ಸುದೀಪ್​ ಮಾತು ಆರಂಭಿಸಿದ್ದಾರೆ. ಇದರ ಪೂರ್ತಿ ಎಪಿಸೋಡ್​ ಮೇ 3ರ ಸಂಚಿಕೆಯಲ್ಲಿ ಪ್ರಸಾರ ಆಗಲಿದೆ.

Kichcha Sudeep: ಸುದೀಪ್​ ಇಲ್ಲದೇ 3 ವಾರ ಮೈ ಮರೆತಿದ್ದ ಬಿಗ್​ ಬಾಸ್​ ಮಂದಿಗೆ ಛಾಟಿ ಬೀಸಿದ ಕಿಚ್ಚನ ವಾಯ್ಸ್​ ಮೆಸೇಜ್​
ಕಿಚ್ಚ ಸುದೀಪ್
Edited By:

Updated on: May 03, 2021 | 3:40 PM

ಕಳೆದ ಮೂರು ವಾರಗಳಿಂದ ಬಿಗ್​ ಬಾಸ್​ ಮನೆಯಲ್ಲಿ ಏನೋ ಒಂದು ಮಿಸ್ಸಿಂಗ್​ ಎಂಬ ಅಭಿಪ್ರಾಯ ಪ್ರೇಕ್ಷಕರದ್ದು. ಅಂಥ ಕೊರತೆಯ ಭಾವ ಕಾಡಲು ಕಾರಣವೇ ಸುದೀಪ್ ಅನುಪಸ್ಥಿತಿ. ಹೌದು, ಕಿಚ್ಚ ಇಲ್ಲದೇ ಮೂರು ವೀಕೆಂಡ್​ಗಳು ಕಳೆದಿವೆ. ವಾರದ ಪಂಚಾಯಿತಿಯನ್ನು ಪ್ರೇಕ್ಷಕರು ಕೂಡ ಮಿಸ್​ ಮಾಡಿಕೊಂಡಿದ್ದಾರೆ. ಆದರೆ ಈಗ ಬಿಗ್​ ಬಾಸ್​ ಮನೆಯಲ್ಲಿ ಮತ್ತೆ ಕಿಚ್ಚನ ಧ್ವನಿ ಕೇಳಿಸಿದೆ. ಅದರಲ್ಲೂ ಒಂದು ಟ್ವಿಸ್ಟ್​ ಇದೆ.

ಮೇ 3ರಂದು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಈ ವಿಚಾರ ಗೊತ್ತಾಗಿದೆ. ಬಿಗ್​ ಬಾಸ್​ ಸ್ಪರ್ಧಿಗಳಿಗೆ ಎರಡು ಪತ್ರ ಬಂದಿದೆ. ಮೊದಲ ಪತ್ರದಲ್ಲಿ ‘ಕೇಳಿಸಿಕೊಳ್ಳಿ’ ಎಂಬ ಸಂದೇಶ ಇತ್ತು. ಎರಡನೇ ಪತ್ರದಲ್ಲಿ ‘ಚೆನ್ನಾಗಿ ಕೇಳಿಸಿಕೊಳ್ಳಿ’ ಎಂದು ಬರೆಯಲಾಗಿತ್ತು. ಅದರ ಅರ್ಥ ಏನು ಎಂದು ಸ್ಪರ್ಧಿಗಳೆಲ್ಲ ಆಲೋಚನೆ ಮಾಡುತ್ತಿರುವಾಗಲೇ ಸುದೀಪ್​ ಅವರ ಧ್ವನಿ ಕೇಳಿಸಿದೆ. ಆದು ಎಲ್ಲರಿಗೂ ಅಚ್ಚರಿ ನೀಡಿದೆ.

ಈ ವಾಯ್ಸ್​ ನೋಟ್​ ಮೂಲಕ ಎಲ್ಲರಿಗೂ ಒಂದೊಂದು ಕಿವಿ ಮಾತು ಹೇಳುತ್ತೇನೆ ಎಂದು ಸುದೀಪ್​ ಮಾತು ಆರಂಭಿಸಿದ್ದಾರೆ. ಇದರ ಪೂರ್ತಿ ಎಪಿಸೋಡ್​ ಮೇ 3ರ ಸಂಚಿಕೆಯಲ್ಲಿ ಪ್ರಸಾರ ಆಗಲಿದೆ. ಪ್ರತಿ ವೀಕೆಂಡ್​ನಲ್ಲಿ ಸುದೀಪ್​ ಬಂದಾಗ ಎಲ್ಲ ಸ್ಪರ್ಧಿಗಳ ಪ್ಲಸ್​ ಮತ್ತು ಮೈನಸ್​ಗಳನ್ನು ಅವರು ಎತ್ತಿ ಹೇಳುತ್ತಿದ್ದರು. ಆದರೆ ಮೂರು ವಾರಗಳಿಂದ ಕಿಚ್ಚ ವೀಕೆಂಡ್​ನಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ದೊಡ್ಮನೆ ಸದಸ್ಯರ ಕಿವಿ ಹಿಂಡಲು ಯಾರೂ ಇಲ್ಲದಂತಾಗಿತ್ತು. ಆದರೆ ಈಗ ಸುದೀಪ್​ ವಾಯ್ಸ್​ ನೋಟ್​ ಮೂಲಕ ಎಲ್ಲರಿಗೂ ಕಿವಿಮಾತು ಹೇಳಿದ್ದಾರೆ.

ಹಲವು ದಿನಗಳಿಂದ ಸುದೀಪ್​ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಆ ಕಾರಣದಿಂದ ಅವರ ವಿಶ್ರಾಂತಿ ಪಡೆಯುವುದು ಅನಿವಾರ್ಯ ಆಗಿತ್ತು. ಪರಿಣಾಮವಾಗಿ ಮೂರು ವಾರಗಳ ವೀಕೆಂಡ್​ ಎಪಿಸೋಡ್​ ಚಿತ್ರೀಕರಣದಲ್ಲಿ ಅವರು ಭಾಗಿಯಾಗಲು ಸಾಧ್ಯವಾಗಿಲ್ಲ. ಶೀಘ್ರದಲ್ಲೇ ನಿಮ್ಮೆಲ್ಲರ ಎದುರು ಬರುತ್ತೇನೆ ಎಂದು ಅವರು ಭರವಸೆ ನೀಡಿದ್ದರಾದರೂ ಕೊರೊನಾ ಕರ್ಫ್ಯೂ ಕಾರಣದಿಂದ ವೀಕೆಂಡ್​ ಎಪಿಸೋಡ್​ಗಳ ಶೂಟಿಂಗ್​ ಕ್ಯಾನ್ಸಲ್​ ಮಾಡಲಾಗಿದೆ.

ಇದನ್ನೂ ಓದಿ: ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ

Bigg Boss Kannada Elimination: ಬಿಗ್​ ಬಾಸ್​ ಒಂಬತ್ತನೇ ವಾರದ ಎಲಿಮಿನೇಷನ್​ಗೆ ಹೊಸ ಟ್ವಿಸ್ಟ್​!

Published On - 3:23 pm, Mon, 3 May 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us