ಕೆಎಲ್ ರಾಹುಲ್ಗಾಗಿ ‘ಕಾಂತಾರ 1’ ವಿಶೇಷ ಶೋ ಆಯೋಜಿಸಿದ್ದ ರಿಷಬ್, 2 ಬಾರಿ ಸಿನಿಮಾ ವೀಕ್ಷಿಸಿದ ಕ್ರಿಕೆಟಿಗ
Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾವನ್ನು ಸೆಲೆಬ್ರಿಟಿಗಳು ನೋಡಿ ಮೆಚ್ಚಿಕೊಂಡಿದ್ದಾರೆ. ಅಲ್ಲು ಅರ್ಜುನ್, ಸಂದೀಪ್ ರೆಡ್ಡಿ ವಂಗಾ, ಯಶ್ ಇನ್ನೂ ಹಲವರು ಸಿನಿಮಾ ನೋಡಿ ಕೊಂಡಾಡಿದ್ದಾರೆ. ಸಿನಿಮಾ ಮಂದಿ ಮಾತ್ರವಲ್ಲ ಕ್ರಿಕೆಟಿಗರು ಸಹ ಮುಗಿಬಿದ್ದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದ್ದಾರೆ. ರಿಷಬ್ ಅವರೇ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಅವರ ಕುಟುಂಬಕ್ಕೆ ವಿಶೇಷ ಶೋ ಆಯೋಜಿಸಿದ್ದರಂತೆ. ಈ ಬಗ್ಗೆ ಸ್ವತಃ ಕೆಎಲ್ ರಾಹುಲ್ ಮಾತನಾಡಿದ್ದಾರೆ.

‘ಕಾಂತಾರ: ಚಾಪ್ಟರ್ 1’ (Kantara Chapter 1) ಸಿನಿಮಾ ಭಾರಿ ದೊಡ್ಡ ಯಶಸ್ಸು ಗಳಿಸಿದೆ. ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ, ಸಾಮಾನ್ಯ ಪ್ರೇಕ್ಷಕರನ್ನು ಮಾತ್ರವಲ್ಲದೆ ಸಿನಿಮಾ ಮಂದಿಯನ್ನು ಸಹ ಬಹುವಾಗಿ ಸೆಳೆದಿದೆ. ಅಲ್ಲು ಅರ್ಜುನ್, ಸಂದೀಪ್ ರೆಡ್ಡಿ ವಂಗಾ, ಯಶ್ ಇನ್ನೂ ಹಲವರು ಸಿನಿಮಾ ನೋಡಿ ಕೊಂಡಾಡಿದ್ದಾರೆ. ಸಿನಿಮಾ ಮಂದಿ ಮಾತ್ರವಲ್ಲ ಕ್ರಿಕೆಟಿಗರು ಸಹ ಮುಗಿಬಿದ್ದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದ್ದಾರೆ. ರಿಷಬ್ ಅವರೇ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಅವರ ಕುಟುಂಬಕ್ಕೆ ವಿಶೇಷ ಶೋ ಆಯೋಜಿಸಿದ್ದರಂತೆ. ಈ ಬಗ್ಗೆ ಸ್ವತಃ ಕೆಎಲ್ ರಾಹುಲ್ ಮಾತನಾಡಿದ್ದಾರೆ.
ಇತ್ತೀಚೆಗೆ ಯೂಟ್ಯೂಬರ್ ಒಬ್ಬರಿಗೆ ನೀಡಿರುವ ಸಂದರ್ಶನದಲ್ಲಿ ‘ಕಾಂತಾರ’ ಸಿನಿಮಾ ನೋಡಿದ ಬಗ್ಗೆ ರಾಹುಲ್ ಮಾತನಾಡಿದ್ದಾರೆ. ಕೆಎಲ್ ರಾಹುಲ್ ಪ್ರಸ್ತುತ ಕುಟುಂಬದೊಡನೆ ಮುಂಬೈನಲ್ಲಿದ್ದಾರೆ. ಆದರೆ ಮುಂಬೈನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಹಿಂದಿ ಆವೃತ್ತಿಗಳು ಮಾತ್ರ ಇದ್ದವಂತೆ. ರಿಷಬ್ಗೆ ಈ ಬಗ್ಗೆ ಹೇಳಿದಾಗ ಕೆಎಲ್ ರಾಹುಲ್ಗಾಗಿ ಮುಂಬೈನಲ್ಲಿ ವಿಶೇಷವಾಗಿ ಕನ್ನಡ ಶೋ ಅನ್ನು ಆಯೋಜಿಸಿದರಂತೆ ರಿಷಬ್ ಶೆಟ್ಟಿ. ಇತ್ತೀಚೆಗಷ್ಟೆ ರಿಷಬ್ ಶೆಟ್ಟಿ, ಪ್ರಗತಿ ಅವರುಗಳು ಸುನಿಲ್ ಶೆಟ್ಟಿ ಹಾಗೂ ಇತತರೊಟ್ಟಿಗೆ ಫೋಟೊ ಹಂಚಿಕೊಂಡಿದ್ದರು. ಅಸಲಿಗೆ ಅದು ಸಿನಿಮಾದ ವಿಶೇಷ ಶೋ ಆಯೋಜಿಸಿದಾಗಿನ ಫೋಟೊವೇ ಆಗಿತ್ತು.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದ್ದರೂ ಒಟಿಟಿಗೆ ಬರುತ್ತಿರುವುದೇಕೆ?
ಅಂದಹಾಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆ ಆದಮೇಲೆ ಕೇವಲ ಒಂದೇ ವಾರದ ಅಂತರದಲ್ಲಿ ಎರಡು ಬಾರಿ ಸಿನಿಮಾ ನೋಡಿದರಂತೆ ಕೆಎಲ್ ರಾಹುಲ್. ಮುಂಬೈನಲ್ಲಿ ರಿಷಬ್ ಅವರು ಆಯೋಜಿಸಿದ್ದ ವಿಶೇಷ ಶೋನಲ್ಲಿ ಒಮ್ಮೆ ನೋಡಿದ ಅವರು ಬಳಿಕ ದೆಹಲಿಯಲ್ಲಿ ಕನ್ನಡಿಗ ದೇವದತ್ತ ಪಡಿಕ್ಕಲ್, ಪ್ರಸಿದ್ಧ ಕೃಷ್ಣ ಅವರುಗಳೊಂದಿಗೆ ಹೋಗಿ ಮತ್ತೊಮ್ಮೆ ನೋಡಿದರಂತೆ. ಸಿನಿಮಾ ನನಗೆ ಬಹಳ ಇಷ್ಟವಾಯ್ತು, ರಿಷಬ್ ಶೆಟ್ಟಿ, ನಾನು ಒಂದೇ ಜಿಲ್ಲೆಯವರು, ಹಾಗಾಗಿ ಅವರ ಬಗ್ಗೆ ವಿಶೇಷ ಪ್ರೀತಿ, ‘ಕಾಂತಾರ’ ಸಿನಿಮಾಕ್ಕೂ ಮುಂಚೆಯೇ ನನಗೆ ಅವರ ಸಿನಿಮಾಗಳು ಇಷ್ಟವಾಗುತ್ತಿದ್ದವು. ‘ಕಾಂತಾರ’ ಅಂತೂ ಅದ್ಭುತವಾಗಿತ್ತು. ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸಹ ಅದ್ಭುತವಾಗಿದೆ’ ಎಂದಿದ್ದಾರೆ.
ಕೆಎಲ್ ರಾಹುಲ್ ‘ಕಾಂತಾರ’ ಸಿನಿಮಾದ ಅಭಿಮಾನಿ. ಐಪಿಎಲ್ನಲ್ಲಿ ಬೆಂಗಳೂರಿನ ಎದುರು ಚಿನ್ನಸ್ವಾಮಿಯಲ್ಲಿ ಸೆಂಚುರಿ ಭಾರಿಸಿದಾಗ ‘ಕಾಂತಾರ’ ಸಿನಿಮಾದ ಸಂಜ್ಞೆಯೊಂದನ್ನು ಅವರು ಮಾಡಿದ್ದರು. ಆಗಲೂ ಸಹ ರಿಷಬ್ ಶೆಟ್ಟಿ ಅವರು ರಾಹುಲ್ಗೆ ಕಾಲ್ ಮಾಡಿ ಮಾತನಾಡಿದ್ದರಂತೆ. 2022 ರಲ್ಲಿ ‘ಕಾಂತಾರ’ ಸಿನಿಮಾ ಬಿಡುಗಡೆ ಆಗಿದ್ದಾಗಲೂ ಸಹ ರಾಹುಲ್ ಆರಂಭದಲ್ಲಿಯೇ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ಟೋರಿ ಸಹ ಅಪ್ಲೋಡ್ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




