ಸಿನಿಮಾ ಬಜೆಟ್ 275 ಕೋಟಿ ರೂಪಾಯಿ: ಆದರೆ ಅಜಿತ್ ಕುಮಾರ್ ಲುಕ್ ಹೇಗಿದೆ ನೋಡಿ..

ನಟ ಅಜಿತ್ ಕುಮಾರ್ ಅವರ ಹೊಸ ಸಿನಿಮಾದ ಬಗ್ಗೆ ಅಭಿಮಾನಿಗಳಿಗೆ ಸಖತ್ ಕುತೂಹಲ ಸೃಷ್ಟಿಯಾಗಿದೆ. ಬರೋಬ್ಬರಿ 275 ಕೋಟಿ ರೂಪಾಯಿ ಬಜೆಟ್​ನಲ್ಲಿ ಆ ಸಿನಿಮಾ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ. ಈಗ ಅಜಿತ್ ಕುಮಾರ್ ಅವರ ಹೊಸ ಗೆಟಪ್ ಗಮನ ಸೆಳೆಯುತ್ತಿದೆ. ಫೋಟೋ ವೈರಲ್ ಆಗಿದ್ದು, ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

ಸಿನಿಮಾ ಬಜೆಟ್ 275 ಕೋಟಿ ರೂಪಾಯಿ: ಆದರೆ ಅಜಿತ್ ಕುಮಾರ್ ಲುಕ್ ಹೇಗಿದೆ ನೋಡಿ..
Ajith Kumar

Updated on: Jun 24, 2025 | 6:38 PM

ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ಅವರು ಇತ್ತೀಚೆಗೆ ಸಾಕಷ್ಟು ಬದಲಾಗಿದ್ದಾರೆ. ಫಿಟ್ನೆಸ್ ಬಗ್ಗೆ ಅವರು ಸಖತ್ ಕಾಳಜಿ ವಹಿಸುತ್ತಿದ್ದಾರೆ. ದೇಹದ ತೂಕವನ್ನು ಅವರು ಗಣನೀಯವಾಗಿ ಕಡಿಮೆ ಮಾಡಿಕೊಂಡಿದ್ದಾರೆ. ಈ ಮೊದಲು ನಾವು ನೋಡಿದ ಅಜಿತ್ ಕುಮಾರ್ ಇವರೇನಾ ಎಂದು ಅನುಮಾನ ಬರುವ ರೀತಿಯಲ್ಲಿ ಅವರು ಬದಲಾಗಿದ್ದಾರೆ. ಈಗ ಅಜಿತ್ ಕುಮಾರ್ ಅವರ ಹೊಸ ಲುಕ್ (Ajith Kumar New Look) ಬಹಿರಂಗ ಆಗಿದೆ. ತಲೆ ಕೂದಲು ಟ್ರಿಮ್ ಮಾಡಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಇದು ಅವರ ಮುಂದಿನ ಸಿನಿಮಾ (Ajith Kumar Next Film) ಲುಕ್ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಅಜಿತ್ ಕುಮಾರ್ ಅವರಿಗೆ ಸಿನಿಮಾಗಳ ಜೊತೆಗೆ ಕಾರ್ ರೇಸ್ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಇದೆ. ಅದಕ್ಕಾಗಿ ಅವರು ಹಗಲಿರುಳು ಅಭ್ಯಾಸ ಮಾಡುತ್ತಿದ್ದಾರೆ. ಮುಂಬರುವ ರೇಸ್​ ಸಲುವಾಗಿ ಅವರು ತಯಾರಿ ಮಾಡುತ್ತಿದ್ದಾರೆ. ಪ್ರಸ್ತುತ ಬೆಲ್ಜಿಯಮ್​ನಲ್ಲಿ ಇರುವ ಅವರು ಹೊಸ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಕಂಡು ಅಭಿಮಾನಿಗಳಿಗೆ ಅಚ್ಚರಿ ಆಗಿದೆ.

ಈ ಮೊದಲು ದಪ್ಪಗಿದ್ದ ಅಜಿತ್ ಕುಮಾರ್ ಅವರು ಈಗ ಸಖತ್ ಸ್ಲಿಮ್ ಆಗಿದ್ದಾರೆ. ಜೊತೆಗೆ ಹೇರ್ ಸ್ಟೈಲ್ ಕೂಡ ಬದಲಾಯಿಸಿಕೊಂಡಿದ್ದಾರೆ. 2025ರಲ್ಲಿ ಅಜಿತ್ ನಟನೆಯ ‘ವಿದಾಮುಯರ್ಚಿ’ ಮತ್ತು ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾಗಳು ಬಿಡುಗಡೆ ಆಗಿವೆ. ಮುಂದಿನ ಸಿನಿಮಾದಲ್ಲಿ ಅವರಿಗೆ ನಿರ್ದೇಶಕ ಅಧಿಕ್ ರವಿಚಂದ್ರನ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ
ಅಜಿತ್ ಕಾರು ಮತ್ತೊಮ್ಮೆ ಪಲ್ಟಿ, ತಿಂಗಳಲ್ಲಿ ಎರಡನೇ ಅಪಘಾತ
ವಿದಾಮುಯರ್ಚಿ: ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದ ಅಜಿತ್ ಕುಮಾರ್ ಫ್ಯಾನ್ಸ್
ನಟನಾಗುವುದಕ್ಕೂ ಮೊದಲು ಗ್ಯಾರೆಜ್​ನಲ್ಲಿ ಕೆಲಸ ಮಾಡಿದ್ದ ಅಜಿತ್
180 ಕಿಮೀ ವೇಗದಲ್ಲಿ ಅಜಿತ್ ಕಾರು ಅಪಘಾತ; ವಿಡಿಯೋ ವೈರಲ್

ನಿರ್ದೇಶಕ ಅಧಿಕ್ ರವಿಚಂದ್ರನ್ ಮತ್ತು ಅಜಿತ್ ಕುಮಾರ್ ಕಾಂಬಿನೇಷನ್​ನ ಹೊಸ ಸಿನಿಮಾದ ಬಜೆಟ್ ಬರೋಬ್ಬರಿ 275 ಕೋಟಿ ರೂಪಾಯಿ ಎನ್ನಲಾಗಿದೆ. ಈ ಸಿನಿಮಾಗಾಗಿಯೇ ಅಜಿತ್ ಕುಮಾರ್ ಅವರು ಹೊಸ ಗೆಟಪ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅವರು ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಸದ್ಯಕ್ಕೆ ಅವರ ಗಮನವೆಲ್ಲ ಕಾರ್ ರೇಸಿಂಗ್ ಮೇಲಿದೆ.

ಇದನ್ನೂ ಓದಿ: ಕೇವಲ 8 ತಿಂಗಳಲ್ಲಿ 42 ಕೆಜಿ ತೂಕ ಕಡಿಮೆ ಮಾಡಿಕೊಂಡ ನಟ ಅಜಿತ್ ಕುಮಾರ್

ಕಾರುಗಳ ಬಗ್ಗೆ ಅಜಿತ್ ಕುಮಾರ್ ಅವರಿಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಇತ್ತೀಚೆಗೆ ಅವರು ದುಬಾರಿ ರೇಸ್ ಕಾರ್ ಖರೀಸಿದಿದ್ದರು. ಅಜಿತ್ ಕುಮಾರ್ ಅವರು ಮೆಕ್​ಲೆರೆನ್ ಸೆನ್ನಾ ಕಾರನ್ನು ಖರೀದಿಸಿದ್ದು, ಇದರ ಬೆಲೆ ಬರೋಬ್ಬರಿ 6.75 ಕೋಟಿ ರೂಪಾಯಿ ಎಂಬುದು ವಿಶೇಷ. ಕೆಲವೇ ದಿನಗಳ ಹಿಂದೆ ಈ ಕಾರಿನ ಜೊತೆ ಅಜಿತ್ ನಿಂತಿರುವ ಫೋಟೋ ವೈರಲ್ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.