ಕೊಟ್ಟ ಹಣ ಕೇಳಿದ್ದಕ್ಕೆ ಕೊಲೆ ಯತ್ನ; ಮಲಯಾಳಂ ನಟನ ಬಂಧನ

ವಿನೀತ್ ಅವರಿಗೆ ಈಗ 45 ವರ್ಷ ವಯಸ್ಸು. ಅವರು ಮಲಯಾಳಂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ಗುರುತಿಸಿಕೊಂಡಿದ್ದಾರೆ.

ಕೊಟ್ಟ ಹಣ ಕೇಳಿದ್ದಕ್ಕೆ ಕೊಲೆ ಯತ್ನ; ಮಲಯಾಳಂ ನಟನ ಬಂಧನ
ವಿನೀತ್
TV9kannada Web Team

| Edited By: Rajesh Duggumane

Jul 27, 2022 | 3:07 PM

ಮಲಯಾಳಂ ನಟ ವಿನೀತ್ ಥಟ್ಟಿಲ್ (Vineeth Thattil ) ಅವರು ಸುದ್ದಿಯಲ್ಲಿದ್ದಾರೆ. ಆಳಪ್ಪುಳದ ಅಲೆಕ್ಸ್​ ಹೆಸರಿನ ವ್ಯಕ್ತಿಯನ್ನು  ಕೊಲೆ ಮಾಡಲು ವಿನೀತ್ ಪ್ರಯತ್ನಿಸಿದ್ದರು. ಹೀಗಾಗಿ ಅವರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ವ್ಯಕ್ತಿಯು ವಿನೀತ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಪೃಥ್ವಿರಾಜ್​ ಸುಕುಮಾರನ್​ ನಟನೆಯ ‘ಅಯ್ಯಪ್ಪನುಂ ಕೋಶಿಯುಂ’ (Ayyappanum Koshiyum) ಚಿತ್ರದಲ್ಲಿ ವಿನೀತ್ ನಟಿಸಿದ್ದರು.

ವಿನೀತ್ ಅವರಿಗೆ ಈಗ 45 ವರ್ಷ ವಯಸ್ಸು. ಅವರು ಮಲಯಾಳಂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿ ಗುರುತಿಸಿಕೊಂಡಿದ್ದಾರೆ. ಅಲೆಕ್ಸ್ ಎಂಬ ವ್ಯಕ್ತಿಯ ಮೇಲೆ ಜುಲೈ 24ರಂದು ವಿನೀತ್ ಹಲ್ಲೆ ಮಾಡಿದ್ದರು. ಹಲ್ಲೆಯ ತೀವ್ರತೆಗೆ ವಿನೀತ್ ಆಸ್ಪತ್ರೆಗೆ ದಾಖಲಾಗಿದ್ದರು. ಭಾರತೀಯ ದಂಡ ಸಂಹಿತೆ 308ರ ಅಡಿಯಲ್ಲಿ ವಿನೀತ್ ವಿರುದ್ಧ ಕೇಸ್ ದಾಖಲಾಗಿದೆ.

‘ಅಲೆಕ್ಸ್ ಅವರು ದೂರು ದಾಖಲು ಮಾಡಿದ್ದಾರೆ. ಅವರ ದೂರನ್ನು ಆಧರಿಸಿ ವಿನೀತ್ ಅವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಬಂಧಿಸಿದ್ದೇವೆ. ವಿನೀತ್ ಅವರು ಅಲೆಕ್ಸ್​​ಗೆ ಸ್ವಲ್ಪ ಹಣ ನೀಡಬೇಕಿತ್ತು. ಈ ಹಣವನ್ನು ಕೊಡುವಂತೆ ಅಲೆಕ್ಸ್ ಅವರು ವಿನೀತ್​ಗೆ ಕೇಳಿದ್ದರು. ಈ ವೇಳೆ ವಿನೀತ್ ಹಲ್ಲೆ ನಡೆಸಿದ್ದಾರೆ. ವಿನೀತ್ ಅವರನ್ನು ಶೀಘ್ರವೇ ಕೋರ್ಟ್​ ಎದುರು ಹಾಜರುಪಡಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ‘ಭೀಮ್ಲಾ ನಾಯಕ್​’​ ಚಿತ್ರ ನೋಡಿ ಕುಣಿದು ಕುಪ್ಪಳಿಸಿದ ಪವನ್​ ಕಲ್ಯಾಣ್ ಫ್ಯಾನ್ಸ್​

ವಿನೀತ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಕೆಲವು ವರ್ಷಗಳು ಕಳೆದಿವೆ. ಅವರ ಮೊದಲ ಸಿನಿಮಾ ತೆರೆಗೆ ಬಂದಿದ್ದು 2017ರಲ್ಲಿ. ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರ 2020ರಲ್ಲಿ ತೆರೆಗೆ ಬಂತು. ಪೃಥ್ವಿರಾಜ್ ಸುಕುಮಾರನ್​ ಹಾಗೂ ಬಿಜು ಮೆನನ್ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ವಿನೀತ್ ಕೂಡ ನಟಿಸಿದ್ದರು. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಹೆಸರು ಬಂತು. ಆದರೆ, ಈಗ ಅವರು ಮಾಡಿಕೊಂಡಿರುವ ಎಡವಟ್ಟಿನಿಂದ ವೃತ್ತಿ ಜೀವನಕ್ಕೆ ಕಪ್ಪುಚುಕ್ಕೆ ಬಿದ್ದಿದೆ. ಹಲವು ಆಫರ್​ಗಳು ಅವರ ಕೈತಪ್ಪುವ ಸಾಧ್ಯತೆ ಇದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada