
ವಿವಿಧ ರೀತಿಯ ಉಡುಗೆ ಮೂಲಕ ಸೆಲೆಬ್ರಿಟಿಗಳು ಆಗಾಗ ಸುದ್ದಿಯಾಗುತ್ತಾರೆ. ಏರ್ಪೋರ್ಟ್ನಲ್ಲಿ, ಜಿಮ್ನಲ್ಲಿ ಹಾಕಿಕೊಳ್ಳುವ ಭಿನ್ನ ಡ್ರೆಸ್ಗಳು ನೋಡುಗರ ಕಣ್ಣು ಕುಕ್ಕುತ್ತವೆ. ಆದರೆ, ಈಗ ವಿಚಿತ್ರ ಎಂಬಂತೆ ಕಿರುತೆರೆ ನಟ ಬಾತ್ರೂಮ್ ಉಡುಗೆ ತೊಟ್ಟು ಏರ್ಪೋರ್ಟ್ಗೆ ತೆರಳಿದ್ದಾರೆ. ಅವರನ್ನು ಅಧಿಕಾರಿಗಳು ತಡೆದಿದ್ದಾರೆ. ಈ ಬಗ್ಗೆ ನಟ ಅಸಮಾಧಾನ ಹೊರ ಹಾಕಿದ್ದಾರೆ.
ಹಿಂದಿಯ ‘ಕುಂಕುಮ್ ಭಾಗ್ಯ’ ಧಾರಾವಾಹಿ ನಟ ಜೀಶನ್ ಖಾನ್ ಗೋವಾ ವಿಮಾನ ನಿಲ್ದಾಣದಿಂದ ಮುಂಬೈಗೆ ಬರುವವರಿದ್ದರು. ಈ ವೇಳೆ ಸ್ನಾನ ಮಾಡಲು ತೆರಳುವಾಗ ತೊಡುವ ಬಟ್ಟೆಯನ್ನು ಹಾಕಿಕೊಂಡಿದ್ದರು. ಆದರೆ, ವಿಮಾನ ನಿಲ್ದಾಣದ ಒಳಗೆ ಪ್ರವೇಶಿಸೋಕೆ ಅಲ್ಲಿನ ಸಿಬ್ಬಂದಿ ಅವಕಾಶ ನೀಡಿಲ್ಲ. ಈ ರೀತಿಯ ಉಡುಗೆಗೆ ಅನುಮತಿ ಇಲ್ಲ ಎಂದು ಅಧಿಕಾರಿಗಳು ಕಡ್ಡಿಮುರಿದಂತೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜೀಶನ್, ‘ನನಗೆ ಏನು ಉತ್ತಮ ಅನಿಸುತ್ತದೆಯೋ ಅದನ್ನು ನಾನು ಮಾಡುತ್ತೇನೆ. ನನ್ನ ಬಟ್ಟೆ ಬಗ್ಗೆ ಯಾರೂ ಪ್ರಶ್ನೆ ಮಾಡಬಾರದು. ಸ್ನಾನಗೃಹಕ್ಕೆ ತೆರಳುವ ಬಟ್ಟೆ ನನಗೆ ಉತ್ತಮ ಎನಿಸಿದೆ. ಹಾಗಾಗಿ ಅದನ್ನು ನಾನು ಧರಿಸಿದ್ದೆ. ಇದರಿಂದ ಬೇರೆಯವರಿಗೆ ಆಗುವ ತೊಂದರೆ ಏನು’ ಎಂದು ಪ್ರಶ್ನೆ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆದಿದೆ. ಕೆಲವರು, ಜೀಶನ್ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡುತ್ತಿದ್ದಾರೆ. ‘ಅವರಿಗೆ ಏನು ಬೇಕೋ ಅದನ್ನು ಹಾಕಿಕೊಳ್ಳುತ್ತಾರೆ. ಅದು ಅವರ ಕಂಫರ್ಟ್. ಇದಕ್ಕೆ ವಿರೋಧ ವ್ಯಕ್ತಪಡಿಸೋದೇಕೆ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, ನಿಯಮವನ್ನು ಪಾಲಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಬೆಂಬಲಿಸಿದ್ದಾರೆ.
ಜೀಶನ್ ಮಾಡೆಲಿಂಗ್ನಲ್ಲಿ ತೊಡಗಿಕೊಂಡಿದ್ದರು. 2019ರಲ್ಲಿ ‘ಕುಂಕುಮ್ ಭಾಗ್ಯ’ ಧಾರಾವಾಹಿಯಲ್ಲಿ ಆರ್ಯನ್ ಖನ್ನಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಅವರು ತಾವು ಇಂಡಸ್ಟ್ರಿಯಲ್ಲಿ ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದರು.
ಇದನ್ನೂ ಓದಿ: ಬಾಲಿವುಡ್ನಲ್ಲಿ ಸ್ಟಾರ್ ಆದಮೇಲೂ ಸುಶಾಂತ್ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?
ಖ್ಯಾತ ಧಾರಾವಾಹಿ ನಟಿ ಬಗ್ಗೆ ಮಂಜು ಪಾವಗಡ ಹೇಳಿದ ಒಗಟನ್ನು ನಿಮ್ಮಿಂದ ಬಿಡಿಸೋಕೆ ಸಾಧ್ಯವಾ?
Published On - 6:42 pm, Sun, 27 June 21