‘ಕುರ್ಚಿ ಮಡತಪೆಟ್ಟಿ’ ವೈರಲ್ ತಾತನಿಗೆ ಖುಲಾಯಿಸಿದ ಅದೃಷ್ಟ, ಮಹೇಶ್ ಬಾಬು ಜೊತೆ ಸಿನಿಮಾ

|

Updated on: Jan 02, 2024 | 6:45 PM

Viral: ತೆಲುಗಿನಲ್ಲಿ ಇತ್ತೀಚೆಗೆ ತಮ್ಮ ರಸವತ್ತಾದ ಮಾತುಗಳು, ಡೈಲಾಗ್​ಗಳಿಂದಾಗ ವೃದ್ಧರೊಬ್ಬರು ಸಖತ್ ವೈರಲ್ ಆಗಿದ್ದರು. ತನ್ನ ಪತ್ನಿಯ ಸಹೋದರರಿಗೆ ತಾನು ಕಬ್ಬಿಣದ ಕುರ್ಚಿಯಲ್ಲಿ ಹೊಡೆದ ಘಟನೆಗಳನ್ನು ಆತ ವಿವರಿಸಿದ್ದ. ಇದೀಗ ಆ ತಾತನ ಅದೃಷ್ಟ ಖುಲಾಯಿಸಿದೆ.

‘ಕುರ್ಚಿ ಮಡತಪೆಟ್ಟಿ’ ವೈರಲ್ ತಾತನಿಗೆ ಖುಲಾಯಿಸಿದ ಅದೃಷ್ಟ, ಮಹೇಶ್ ಬಾಬು ಜೊತೆ ಸಿನಿಮಾ
ಮಹೇಶ್ ಬಾಬು
Follow us on

ಇಂಟರ್ನೆಟ್, ಸಾಮಾಜಿಕ ಜಾಲತಾಣ (Social Media) ಯುಗದಲ್ಲಿ ಯಾರು ಯಾವಾಗ ಜನಪ್ರಿಯಗೊಳ್ಳುತ್ತಾರೆ, ಯಾರ ಬದುಕು ಹೇಗೆ ಕೆಲವೇ ದಿನಗಳಲ್ಲಿ ಬದುಕು ಬದಲಾಗುತ್ತದೆ ಹೇಳಲಾಗದು. ಸಣ್ಣ ವಿಡಿಯೋ ವೈರಲ್ ಆಗಿ ರಾತ್ರೋ ರಾತ್ರಿ ಸ್ಟಾರ್ ಆದವರು ಸಾಕಷ್ಟು ಮಂದಿ ಇದ್ದಾರೆ. ಕಡಲೆ ಕಾಯಿ ಮಾರುವಾತ, ಟೀ ಮಾರುವಾತ, ಮೀನು ಮಾರುವ ಯುವತಿ, ಕಣ್ಣು ಹೊಡೆದ ಯುವತಿ, ಸಿಎಂ ಬೈದು ಜನಪ್ರಿಯವಾದ ಮಹಿಳೆ ಹೀಗೆ ಒಬ್ಬರಲ್ಲ ಒಬ್ಬರು ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಿಂದಾಗಿ ವೈರಲ್ ಆಗುತ್ತಿರುತ್ತಾರೆ. ಇತ್ತೀಚೆಗೆ ತೆಲುಗಿನಲ್ಲಿ ವೃದ್ಧರೊಬ್ಬರು ಹೀಗೆಯೇ ವೈರಲ್ ಆಗಿದ್ದರು. ಆದರೆ ಅವರ ಅದೃಷ್ಟ ಇದೀಗ ಖುಲಾಯಿಸಿದೆ.

ತಾನು ತನ್ನ ಪತ್ನಿಯನ್ನು ಕರೆದುಕೊಂಡು ಬರಲು ಹೋಗಿ ತನ್ನ ಭಾಮೈದರನ್ನು ಕಬ್ಬಿಣದ ಕುರ್ಚಿಯಲ್ಲಿ ಹೊಡೆದು ಉರುಳಿಸಿದ ಕತೆಯನ್ನು ವೃದ್ಧರೊಬ್ಬರು ಯೂಟ್ಯೂಬ್ ಚಾನೆಲ್ ಒಂದಕ್ಕೆ ಹೇಳಿಕೊಂಡಿದ್ದರು. ಆ ವೃದ್ಧ ಘಟನಾವಳಿಗಳನ್ನು ವಿವರಿಸಿದ ರೀತಿಗೆ ನೆಟ್ಟಿಗರು ಫಿದಾ ಆಗಿದ್ದರು, ಸಿನಿಮಾದ ಸೀನ್​ಗಳನ್ನು ವಿವರಿಸುವಂತೆ ರಸವತ್ತಾಗಿ ಆ ಘಟನೆಯನ್ನು ಆ ತಾತ ವಿವರಿಸಿದ್ದರು. ‘ಕುರ್ಚಿನಿ ಮಡತಪೆಟ್ಟಿ’ ಎಂದು ತನ್ನದೇ ಶೈಲಿಯಲ್ಲಿ ಮುದುಕ ಹೇಳಿದ್ದ ರೀತಿ ಸಖತ್ ಕ್ಯಾಚಿ ಆಗಿತ್ತು.

ವೃದ್ಧ ಶೇಕ್ ಅಹ್ಮದ್ ಪಾಷಾ ಕಮೆಂಟ್ರಿಯನ್ನು ಹಿನ್ನೆಯಾಗಿಟ್ಟುಕೊಂಡು ದೃಶ್ಯಗಳನ್ನು ಮರುಸೃಷ್ಟಿ ಮಾಡಿ ಇನ್​ಸ್ಟಾಗ್ರಾಂ, ಫೇಸ್​ಬುಕ್​ಗಳಲ್ಲಿ ಹಂಚಿಕೊಳ್ಳಲಾಗಿತ್ತು. ಹಲವಾರು ಮಂದಿ ಶೇಕ್ ಅಹ್ಮದ್ ಪಾಷಾ ಹೇಳಿದ್ದ ಕತೆಯ ವಿಡಿಯೋಗಳನ್ನು ಮಾಡಿ ಹಾಕಿದ್ದರು. ಆ ಮೂಲಕ ಸಖತ್ ವೈರಲ್ ಆಗಿದ್ದರು. ಇದೀಗ ಆ ಶೇಕ್ ಅಹ್ಮದ್ ಪಾಷಾರ ಅದೃಷ್ಟ ಖುಲಾಯಿಸಿದೆ. ಮಹೇಶ್ ಬಾಬು ನಟನೆಯ ಹೊಸ ಸಿನಿಮಾದಲ್ಲಿ ಪಾತ್ರವೊಂದನ್ನು ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮಹೇಶ್ ಬಾಬುಗೆ ಶ್ರೀಲೀಲಾ ಸಿಹಿ ಮುತ್ತು, ಇಬ್ಬರ ನಡುವೆ ವಯಸ್ಸಿನ ಅಂತರವೆಷ್ಟು ಗೊತ್ತೆ?

ಮಹೇಶ್ ಬಾಬು ನಟನೆಯ ‘ಗುಂಟೂರು ಖಾರಂ’ ಸಿನಿಮಾದ ಪಾತ್ರವೊಂದರಲ್ಲಿ ಶೇಕ್ ಅಹ್ಮದ್ ಪಾಷಾ ನಟಿಸಿದ್ದಾರೆ. ಆ ಪಾತ್ರ ಕೇವಲ ಹೀಗೆ ಬಂದು ಹಾಗೆ ಹೋಗುವ ಪಾತ್ರ ಅಲ್ಲ ಎನ್ನಲಾಗುತ್ತಿದೆ. ‘ಗುಂಟೂರು ಖಾರಂ’ ಸಿನಿಮಾದ ಒಂದು ಹಾಡನ್ನು ಸಹ ಶೇಕ್ ಅಹ್ಮದ್ ಪಾಷಾ ಹೇಳಿದ್ದ ‘ಕುರ್ವಿ ಪಡತಪೆಟ್ಟಿ’ ಡೈಲಾಗ್​ ಅನ್ನೇ ಬಳಸಿ ಮಾಡಲಾಗಿದ್ದು, ಹಾಡಿಗೆ ಮಹೇಶ್ ಬಾಬು ಹಾಗೂ ನಾಯಕಿ ಶ್ರೀಲೀಲಾ ಸಖತ್ ಸ್ಟೆಪ್ಪುಗಳನ್ನು ಹಾಕಿದ್ದಾರೆ.

ರೈತ ಬಜಾರ್​ನಲ್ಲಿ ಕೂಲಿ ಮಾಡುತ್ತಿದ್ದ ಶೇಕ್ ಅಹ್ಮದ್ ಪಾಷಾ ತನ್ನ ಒಂದು ಡೈಲಾಗ್​ನಿಂದ ವೈರಲ್ ಆಗಿದ್ದಾರೆ. ಕಷ್ಟದ ಜೀವನ ನಡೆಸುತ್ತಿದ್ದ ಶೇಕ್ ಅಹ್ಮದ್ ಪಾಷಾ ಅವರಿಗೆ ‘ಗುಂಟೂರು ಖಾರಂ’ ಸಿನಿಮಾ ತಂಡ ಆರ್ಥಿಕ ಸಹಾಯವನ್ನು ಸಹ ಮಾಡಿದೆ ಎನ್ನಲಾಗುತ್ತಿದೆ. ‘ಗುಂಟೂರು ಖಾರಂ’ ಸಿನಿಮಾವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡಿದ್ದು, ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ