AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕಪ್ಪು ಕೋಟು ಧರಿಸಲಿರುವ ಅಕ್ಷಯ್ ಕುಮಾರ್, ಈ ಬಾರಿ ಅರ್ಷದ್ ವಾರ್ಸಿ ಜೊತೆಗೆ

Akshay Kumar: ‘ಜಾಲಿ ಎಲ್​ಎಲ್​ಬಿ’ ಸರಣಿಯ ಹೊಸ ಸಿನಿಮಾ ಘೋಷಣೆ ಆಗಿದೆ. ಮೊದಲ ಸಿನಿಮಾದಲ್ಲಿ ಜಾಲಿ ಆಗಿದ್ದ ಅರ್ಷದ್ ವಾರ್ಸಿ, ಎರಡನೇ ಸಿನಿಮಾದಲ್ಲಿ ವಕೀಲರಾಗಿದ್ದ ಅಕ್ಷಯ್ ಕುಮಾರ್ ಇಬ್ಬರೂ ಒಟ್ಟಿಗೆ ಮೂರನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಮತ್ತೆ ಕಪ್ಪು ಕೋಟು ಧರಿಸಲಿರುವ ಅಕ್ಷಯ್ ಕುಮಾರ್, ಈ ಬಾರಿ ಅರ್ಷದ್ ವಾರ್ಸಿ ಜೊತೆಗೆ
ಜಾಲಿ ಎಲ್​ಎಲ್​ಬಿ 3
ಮಂಜುನಾಥ ಸಿ.
|

Updated on: Jan 02, 2024 | 6:13 PM

Share

ಬಾಲಿವುಡ್​ನಲ್ಲಿ (Bollywood) ಕೆಲವು ಜನಪ್ರಿಯ ಸಿನಿಮಾ ಸರಣಿಗಳಿವೆ. ‘ಧೂಮ್’, ‘ಟೈಗರ್’, ‘ರಾಜ್’, ‘ಸ್ಟುಡೆಂಟ್ ನಂಬರ್ 1’, ‘ಲವ್ ಆಜ್ ಕಲ್’, ‘ಹೇರಾ ಪೇರಿ’, ‘ಭೂಲ್ ಭುಲಯ್ಯ’, ‘ಗೋಲ್​ಮಾಲ್’, ‘ಸೂರ್ಯವಂಶಿ’, ‘ಸಿಂಗಂ’ ಹೀಗೆ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲಿ ಹಾಸ್ಯ ಪ್ರಧಾನ ಸಿನಿಮಾಗಳು ಕೆಲವಷ್ಟೆ. ಇದೇ ಪಟ್ಟಿಗೆ ಸೇರುತ್ತದೆ ‘ಜಾಲಿ ಎಲ್​ಎಲ್​ಬಿ’. ಕೋರ್ಟ್​ನಲ್ಲಿ ನಡೆಯುವ ತಮಾಷೆ ಪ್ರಸಂಗಗಳ ಜೊತೆಗೆ ಕ್ಲಿಷ್ಟವಾದ ಪ್ರಕರಣಗಳನ್ನು ನಾಯಕ ಬುದ್ಧಿವಂತಿಕೆಯಿಂದ ಬಗೆಹರಿಸುವ ಕತೆಗಳನ್ನು ಈ ಸಿನಿಮಾ ಸರಣಿ ಒಳಗೊಂಡಿದೆ.

ಮೊದಲಿಗೆ ‘ಜಾಲಿ ಎಲ್​ಎಲ್​ಬಿ’ ಸಿನಿಮಾದಲ್ಲಿ ಬೇಜವಾಬ್ದಾರಿಯುತ ವಕೀಲನ ಪಾತ್ರದಲ್ಲಿ ಅರ್ಷದ್ ವಾರ್ಸಿ ನಟಿಸಿದ್ದರು. ಅರ್ಷದ್ ಎದುರಾಗಿ ಬೊಮನ್ ಇರಾನಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದಾದ ಬಳಿಕ ‘ಜಾಲಿ ಎಲ್​ಲ್​ಬಿ 2’ ಸಿನಿಮಾನಲ್ಲಿ ಅರ್ಷದ್ ವಾರ್ಸಿಯನ್ನು ಪಕ್ಕಕ್ಕಿಟ್ಟು ಅಕ್ಷಯ್ ಕುಮಾರ್ ನಾಯಕರಾದರು. ಆ ಸಿನಿಮಾ ಸಹ ಸೂಪರ್-ಡೂಪರ್ ಹಿಟ್ ಆಯ್ತು. ಇದೀಗ ‘ಜಾಲಿ ಎಲ್​ಎಲ್​ಬಿ 3’ ಸಿನಿಮಾ ಸೆಟ್ಟೇರಲು ರೆಡಿಯಾಗಿದೆ.

ಇದನ್ನೂ ಓದಿ:ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಕೈಯಲ್ಲಿ ಎಷ್ಟು ಸಿನಿಮಾಗಳಿವೆ?

‘ಜಾಲಿ ಎಲ್​ಎಲ್​ಬಿ 3’ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮತ್ತೆ ವಕೀಲರಾಗಿ ಮಿಂಚಲಿದ್ದಾರೆ. ಆದರೆ ಸರಣಿಯ ಮೊದಲ ಸಿನಿಮಾದಲ್ಲಿ ಜಾಲಿ ಆಗಿ ನಟಿಸಿದ್ದ ಅರ್ಷದ್ ವಾರ್ಸಿ ‘ಜಾಲಿ ಎಲ್​ಎಲ್​ಬಿ ’ ಸಿನಿಮಾ ಸರಣಿಗೆ ಮತ್ತೆ ಮರಳಿದ್ದಾರೆ. ‘ಜಾಲಿ ಎಲ್​ಎಲ್​ಬಿ 3’ ಸಿನಿಮಾನಲ್ಲಿ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವಾರ್ಸಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರೂ ನಾಯಕ ನಟರಾಗಿ ನಟಿಸಲಿದ್ದಾರೆಯೇ ಅಥವಾ ಅರ್ಷದ್ ವಾರ್ಸಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆಯೇ ಕಾದು ನೋಡಬೇಕಿದೆ.

‘ಜಾಲಿ ಎಲ್​ಎಲ್​ಬಿ 3’ ಸಿನಿಮಾದ ಚಿತ್ರೀಕರಣ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಲಿದೆ. ಸಿನಿಮಾದ ನಿರ್ದೇಶವನ್ನು ಸುಭಾಷ್ ಕಪೂರ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾದ ಚಿತ್ರಕತೆಯನ್ನು ಅವರೇ ಬರೆದಿದ್ದಾರೆ. ಸಿನಿಮಾದ ನಾಯಕಿ ಹಾಗೂ ಇನ್ನಿತರೆ ಪಾತ್ರವರ್ಗಗಳ ಆಯ್ಕೆಯೂ ಪೂರ್ಣಗೊಂಡಿದ್ದು ಚಿತ್ರತಂಡವು ಮಾಹಿತಿಗಳನ್ನು ಹಂಚಿಕೊಳ್ಳಲಿದೆ. ಅಕ್ಷಯ್ ಕುಮಾರ್ ಇತ್ತೀಚೆಗಷ್ಟೆ ‘ಬಡೆ ಮಿಯಾ ಚೋಟೆ ಮಿಯಾ’ ಹಾಗೂ ‘ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದಾರೆ. ‘ಸ್ಕೈ ಫೋರ್ಸ್’ ಹೆಸರಿನ ಸಿನಿಮಾದಲ್ಲಿ ಪ್ರಸ್ತುತ ನಟಿಸುತ್ತಿದ್ದಾರೆ. ಇದರ ಜೊತೆಗೆ ‘ಜಾಲಿ ಎಲ್​ಎಲ್​ಬಿ 3’ ಸಿನಿಮಾದಲ್ಲಿಯೂ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು