AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರ ಪ್ರದೇಶ ವಿಮಾನ ನಿಲ್ದಾಣಕ್ಕೆ ಚಿರಂಜೀವಿ ಸಿನಿಮಾ ಹೆಸರಿಟ್ಟ ಸಿಎಂ!

ಈ ಬೆಳವಣಿಗೆ ತಿಳಿದ ನಂತರ ಚಿರಂಜೀವಿ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಆಂಧ್ರ ಪ್ರದೇಶ ವಿಮಾನ ನಿಲ್ದಾಣಕ್ಕೆ ಚಿರಂಜೀವಿ ಸಿನಿಮಾ ಹೆಸರಿಟ್ಟ ಸಿಎಂ!
ಚಿರಂಜೀವಿ
ರಾಜೇಶ್ ದುಗ್ಗುಮನೆ
| Edited By: |

Updated on:Mar 25, 2021 | 4:45 PM

Share

ಆಂಧ್ರ ಪ್ರದೇಶದಲ್ಲಿ ಸಿನಿಮಾ ಕಲಾವಿದರನ್ನು ಆರಾಧಿಸುವ ಪದ್ಧತಿ ಜಾರಿಯಲ್ಲಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋಗಳಿಗೋಸ್ಕರ ಏನು ಮಾಡಲೂ ಸಿದ್ಧರಿರುತ್ತಾರೆ. ಅನೇಕ ರಸ್ತೆಗಳಿಗೆ ಹೀರೋಗಳ ಹೆಸರಿಟ್ಟ ಉದಾಹರಣೆ ಕೂಡ ಇದೆ. ಈಗ ಅಚ್ಚರಿ ಎಂದರೆ, ಆಂಧ್ರಪ್ರದೇಶದ ವಿಮಾನ ನಿಲ್ದಾಣಕ್ಕೆ ಚಿರಂಜೀವಿ ಸಿನಿಮಾ ಹೆಸರನ್ನು ಇಡಲಾಗಿದೆ. ಅಷ್ಟಕ್ಕೂ ಹೀಗೆ ಇಡೋಕೆ ಕಾರಣ ಏನು ಎನ್ನುವ ಬಗ್ಗೆ ಇಲ್ಲಿದೆ ಉತ್ತರ. ಕರ್ನೂಲ್​ ವಿಮಾನ ನಿಲ್ದಾಣಕ್ಕೆ ಉಯ್ಯಲವಾಡ ನರಸಿಂಹ ರೆಡ್ಡಿ ಎಂದು ನಾಮಕರಣ ಮಾಡಲಾಗಿದೆ. ಇವರು ಸ್ವಾತಂತ್ರ್ಯ ಹೋರಾಟಗಾರರು. ಇವರ ಕುರಿತು ಸಿದ್ಧವಾದ ಚಿತ್ರವೇ ಸೈರಾ ನರಸಿಂಹ ರೆಡ್ಡಿ. ಈ ಸಿನಿಮಾದಲ್ಲಿ ಚಿರಂಜೀವಿ ಅವರು ನರಸಿಂಹ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಸಾಕಷ್ಟು ಪ್ರಶಂಸೆಗಳಿಸಿತ್ತು.

ಈ ಬೆಳವಣಿಗೆ ತಿಳಿದ ನಂತರ ಚಿರಂಜೀವಿ ಖುಷಿಯಾಗಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕರ್ನೂಲ್ ವಿಮಾನ ನಿಲ್ದಾಣಕ್ಕೆ ಭಾರತದ ಮೊಟ್ಟಮೊದಲ ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಹೆಸರನ್ನು ಇಡಲಾಗಿದೆ. ಈ ಕ್ರಮಕ್ಕೆ ಮುಖ್ಯಮಂತ್ರಿ ವೈ.ಎಸ್​. ಜಗನ್​ ಅವರಿಗೆ ಧನ್ಯವಾದ ಹೇಳುತ್ತೇನೆ. ನರಸಿಂಹರೆಡ್ಡಿ ಪಾತ್ರವನ್ನು ಮಾಡಿದ ನಾನೇ ಧನ್ಯ ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಕಾಜಲ್​ ಅಗರ್​ವಾಲ್​ ಚಿತ್ರದ ನಾಯಕಿ. ರಾಮ್​ ಚರಣ್​ ಸಿನಿಮಾದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದಾರೆ. ಜತೆಗೆ ಚಿತ್ರವನ್ನು ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಮೇ 13ರಂದು ಚಿತ್ರ ರಿಲೀಸ್​ ಆಗುತ್ತಿದೆ. ಈ ಸಿನಿಮಾದ ಬಜೆಟ್​ ಬರೋಬ್ಬರಿ 140 ಕೋಟಿ ರೂಪಾಯಿ ಅನ್ನೋದು ವಿಶೇಷ.

ಇದನ್ನೂ ಓದಿ: ನಟ ಸೋನು ಸೂದ್​ಗೆ ಅಭಿಮಾನಿಗಳಿಂದ ದೇವಾಲಯ ನಿರ್ಮಾಣ; ಸೋನು ಜತೆ ಫೈಟಿಂಗ್ ಮಾಡಲು ಚಿರಂಜೀವಿ ನಕಾರ !

Published On - 4:44 pm, Thu, 25 March 21