ತೆಲುಗಿನಲ್ಲಿ ಹೊಸ ಸಿನಿಮಾ ಘೋಷಿಸಿದ ಕೆವಿಎನ್

KVN productions: ಕೆವಿಎನ್ ಪ್ರೊಡಕ್ಷನ್ಸ್ ಭಾರತದ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಹಲವು ಸಿನಿಮಾಗಳ ಮೇಲೆ ಹೂಡಿಕೆ ಮಾಡುತ್ತಿದೆ. ‘ಟಾಕ್ಸಿಕ್’, ‘ಜನ ನಾಯಗನ್’ ಅಂಥಹಾ ಭಾರಿ ಬಜೆಟ್​​ ಸಿನಿಮಾಗಳ ಮೇಲೆ ಹೂಡಿಕೆ ಮಾಡಿ, ಬಿಡುಗಡೆ ತಡವಾಗಿದ್ದರೂ ಸಹ ಸಿನಿಮಾ ನಿರ್ಮಾಣದಲ್ಲಿ ಹಿಂದುಳಿಯುತ್ತಿಲ್ಲ, ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ಬೆಂಬಲವಾಗಿ ನಿಲ್ಲುತ್ತಿದೆ. ಇದೀಗ ತೆಲುಗಿನಲ್ಲಿ ಮತ್ತೊಂದು ಹೊಸ ಸಿನಿಮಾವನ್ನು ಕೆವಿಎನ್ ಘೋಷಣೆ ಮಾಡಿದೆ.

ತೆಲುಗಿನಲ್ಲಿ ಹೊಸ ಸಿನಿಮಾ ಘೋಷಿಸಿದ ಕೆವಿಎನ್
Kvn Productions

Updated on: Jun 19, 2026 | 1:04 PM

ಕೆವಿಎನ್ ಪ್ರೊಡಕ್ಷನ್ಸ್ (KVN Production) ಭಾರತದ ಜನಪ್ರಿಯ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಹಲವು ಸಿನಿಮಾಗಳ ಮೇಲೆ ಹೂಡಿಕೆ ಮಾಡುತ್ತಿದೆ. ‘ಟಾಕ್ಸಿಕ್’, ‘ಜನ ನಾಯಗನ್’ ಅಂಥಹಾ ಭಾರಿ ಬಜೆಟ್​​ ಸಿನಿಮಾಗಳ ಮೇಲೆ ಹೂಡಿಕೆ ಮಾಡಿ, ಬಿಡುಗಡೆ ತಡವಾಗಿದ್ದರೂ ಸಹ ಸಿನಿಮಾ ನಿರ್ಮಾಣದಲ್ಲಿ ಹಿಂದುಳಿಯುತ್ತಿಲ್ಲ, ಹೊಸ ಹೊಸ ಪ್ರತಿಭೆಗಳನ್ನು ಹುಡುಕಿ ಬೆಂಬಲವಾಗಿ ನಿಲ್ಲುತ್ತಿದೆ. ಇದೀಗ ತೆಲುಗಿನಲ್ಲಿ ಮತ್ತೊಂದು ಹೊಸ ಸಿನಿಮಾವನ್ನು ಕೆವಿಎನ್ ಘೋಷಣೆ ಮಾಡಿದೆ.

‘ಮ್ಯಾಡ್’, ‘ಆಯ್’ ಮತ್ತು ‘ಮ್ಯಾಡ್ ಸ್ಕ್ವೇರ್’ ಚಿತ್ರಗಳ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಯುವ ನಟ ನರ್ನೆ ನಿತಿನ್ ನಟನೆಯ ಹೊಸ ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡಲಿದೆ. ಪ್ರೇಮಕತೆಯುಳ್ಳ ‘ಜೂನಿಯರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಲಿದ್ದಾರೆ. ಸದ್ಯಕ್ಕೆ #NN5 ಎಂದು ಸಿನಿಮಾವನ್ನು ಕರೆಯಲಾಗುತ್ತಿದೆ. ಈ ಘೋಷಣೆಯನ್ನು ನರ್ನೆ ನಿತಿನ್ ಅವರ ಹುಟ್ಟುಹಬ್ಬದ ದಿನದಂದು ಬಹಳ ವಿಭಿನ್ನವಾಗಿ ಮಾಡಲಾಗಿದೆ. ಚಿತ್ರತಂಡವು ಸಾಮಾಜಿಕ ಜಾಲತಾಣದ ಶೈಲಿಯಲ್ಲಿ ವಿನ್ಯಾಸಗೊಳಿಸಿದ ಪೋಸ್ಟರ್ ಮೂಲಕ ಸಿನಿಮಾವನ್ನು ಪರಿಚಯಿಸಿದೆ.

ಪೋಸ್ಟರ್​​ನಲ್ಲಿ ‘ಆಕಾಶದಲ್ಲಿರುತ್ತೆ ಮೂನ್.. ನೀವೇ ನನ್ನ ಲೈಫ್‌ಗೆ ಕ್ವೀನ್’ ಎಂದು ಬರೆಯಲಾಗಿದೆ. ಸಿನಿಮಾದ ನಾಯಕ ಅಥವಾ ನಾಯಕಿಯ ಮುಖ ಬಹಿರಂಗಪಡಿಸಿಲ್ಲ. ಪೋಸ್ಟರ್‌ನಲ್ಲಿರುವ ಗಮನಾರ್ಹ ಅಂಶವೆಂದರೆ ಜೂನಿಯರ್ ಎನ್‌ಟಿಆರ್ ಅವರು ಪೋಸ್ಟ್​​ಗೆ ಲೈಕ್ ಮಾಡಿರುವ ರೀತಿ ಪೋಸ್ಟರ್​​ನಲ್ಲಿ ಡಿಸೈನ್ ಮಾಡಲಾಗಿದೆ. ಚಿತ್ರದ ತಾಂತ್ರಿಕ ತಂಡದಲ್ಲಿ ಛಾಯಾಗ್ರಾಹಕ ರಾಮ ಮಾರುತಿ ಎಂ, ಸಂಕಲನಕಾರ ನಿರಂಜನ್ ದೇವರಮನೆ ಮತ್ತು ಕಲಾ ನಿರ್ದೇಶಕ ಶಿವ ಕಮೇಶ್ ಡಿ. ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಅಂದು ಶಿವಣ್ಣ, ಇಂದು ಧನುಷ್; ‘ಓಂ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಘೋಷಣೆ

ಕೆವಿಎನ್ ಇದೇ ವಾರ ಕನ್ನಡದಲ್ಲಿ ಗಿಲ್ಲಿ ನಟ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಘೋಷಿಸಿದೆ. ಅದರ ಬೆನ್ನಲ್ಲೆ ಇದೀಗ ತೆಲುಗು ಸಿನಿಮಾ ಒಂದನ್ನು ಘೋಷಣೆ ಮಾಡಿರುವುದು ವಿಶೇಷ. ಕೆವಿಎನ್​​ ಈಗಾಗಲೇ ಒಂದು ತೆಲುಗು ಸಿನಿಮಾ ಘೋಷಣೆ ಮಾಡಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಲಿರುವ ಸಿನಿಮಾಕ್ಕೆ ಕೆವಿಎನ್ ಬಂಡವಾಳ ಹೂಡುತ್ತಿದೆ. ಇತ್ತೀಚೆಗೆ ಆ ಸಿನಿಮಾದ ಮುಹೂರ್ತವೂ ನಡೆದಿದೆ. ಅದರ ಬೆನ್ನಲ್ಲೆ ಇದೀಗ ಎರಡನೇ ತೆಲುಗು ಸಿನಿಮಾ ಘೋಷಣೆ ಮಾಡಿದೆ.

ಕೆವಿಎನ್​​ ನಿರ್ಮಾಣದ ‘ಜನ ನಾಯಗನ್’, ‘ಟಾಕ್ಸಿಕ್’ ಸಿನಿಮಾಗಳು ಬಿಡುಗಡೆ ಆಗಬೇಕಿದೆ. ಮಲಯಾಳಂನ ‘ಬಾಲನ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಅಕ್ಷಯ್ ಕುಮಾರ್ ನಟನೆಯ ‘ಹೈವಾನ್’ ಹಿಂದಿ ಸಿನಿಮಾ ಚಿತ್ರೀಕರಣವಾಗುತ್ತಿದೆ. ಕನ್ನಡದಲ್ಲಿ ಶಿವಣ್ಣ ನಟನೆಯ ‘ಬೇಲ್’ ಸಿನಿಮಾ ನಿರ್ಮಾಣವಾಗುತ್ತಿದೆ. ಜೊತೆಗೆ ಇತ್ತೀಚೆಗಷ್ಟೆ ಗಿಲ್ಲಿ ನಟನ ಸಿನಿಮಾ ಸಹ ಘೋಷಣೆಯಾಗಿದೆ. ಚಿರಂಜೀವಿ ಮತ್ತು ನರ್ನೆ ನಿತಿನ್ ನಟನೆಯ ಸಿನಿಮಾಗಳು ಸಹ ಚಿತ್ರೀಕರಣ ಹಂತದಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us