ಸೂರ್ಯ ಗೆಲುವಿನ ಓಟಕ್ಕೆ ತಡೆಯೇ ಇಲ್ಲ, ಮತ್ತೊಬ್ಬ ಸ್ಟಾರ್ ನಿರ್ದೇಶಕನ ಜೊತೆ ಸಿನಿಮಾ
ಸೂರ್ಯಗೆ 2026 ಭಾರಿ ಅದೃಷ್ಟ ತಂದಿದೆ. ಯಾವ ಮಟ್ಟಿಗೆಂದರೆ ಸೂರ್ಯ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ‘ಕಂಗುವ’, ‘ರೆಟ್ರೊ’ ಇನ್ನೂ ಕೆಲ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯ ಈಗ ಒಂದರ ಹಿಂದೊಂದು ಹಿಟ್ ಕೊಡುತ್ತಿದ್ದು, ತಮ್ಮ ಈ ಜಯಭೇರಿ ಮುಂದುವರೆಸಲು ಇದೀಗ ಮತ್ತೊಬ್ಬ ಹಿಟ್ ಸಿನಿಮಾ ನಿರ್ದೇಶಕನ ಜೊತೆಗೆ ಕೈಜೋಡಿಸಿದ್ದಾರೆ.

ಮುಖ್ಯಾಂಶಗಳು
- ತಮಿಳಿನ ಸ್ಟಾರ್ ನಟ ಸೂರ್ಯ
- ಮತ್ತೊಂದು ಗೆಲ್ಲುವ ಸಿನಿಮಾ
- ‘ಮಂದಾಡಿ’ ನಿರ್ದೇಶಕನ ಜೊತೆ ಸೂರ್ಯ ಸಿನಿಮಾ
ತಮಿಳಿನ ಸ್ಟಾರ್ ನಟ ಸೂರ್ಯ, ಒಂದೇ ವರ್ಷದಲ್ಲಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಹಿಟ್ ಸಿನಿಮಾ ಇಲ್ಲದೆ ಸೊರಗಿದ್ದ ಸೂರ್ಯಗೆ 2026 ಭಾರಿ ಅದೃಷ್ಟ ತಂದಿದೆ. ಯಾವ ಮಟ್ಟಿಗೆಂದರೆ ಸೂರ್ಯ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ‘ಕಂಗುವ’, ‘ರೆಟ್ರೊ’ ಇನ್ನೂ ಕೆಲ ಸಿನಿಮಾಗಳ ಸೋಲಿನಿಂದ ಕಂಗೆಟ್ಟಿದ್ದ ಸೂರ್ಯ ಈಗ ಒಂದರ ಹಿಂದೊಂದು ಹಿಟ್ ಕೊಡುತ್ತಿದ್ದು, ತಮ್ಮ ಈ ಜಯಭೇರಿ ಮುಂದುವರೆಸಲು ಇದೀಗ ಮತ್ತೊಬ್ಬ ಹಿಟ್ ಸಿನಿಮಾ ನಿರ್ದೇಶಕನ ಜೊತೆಗೆ ಕೈಜೋಡಿಸಿದ್ದಾರೆ.
ಸೂರ್ಯ ನಟನೆಯ ‘ಕರುಪ್ಪು’ ಮತ್ತು ‘ವಿಶ್ವನಾಥ್ ಆಂಡ್ ಸನ್ಸ್’ ಇದೇ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಕೆಲ ದಿನಗಳ ಹಿಂದಷ್ಟೆ ರಿಲೀಸ್ ಆದ ಸೂರ್ಯ ನಟನೆಯ ‘ಸೀನ್’ ಸಿನಿಮಾ ಸಹ ಸೂಪರ್ ಹಿಟ್ ಆಗಿದೆ. ಆ ಮೂಲಕ ಸೂರ್ಯ ಹ್ಯಾಟ್ರಿಕ್ ಜಯ ಕಂಡಿದ್ದಾರೆ. ‘ಸೀನ್’ ಸಿನಿಮಾವನ್ನು ಮಲಯಾಳಂನ ಸ್ಟಾರ್ ನಿರ್ದೇಶಕ ಜಿತು ಮಾಧವನ್ ನಿರ್ದೇಶಿಸಿದ್ದರು. ಇದೀಗ ಸೂರ್ಯ ಮತ್ತೊಬ್ಬ ಹಿಟ್ ನಿರ್ದೇಶಕನ ಜೊತೆಗೆ ಕೈಜೋಡಿಸಿದ್ದಾರೆ. ಆ ಮೂಲಕ ತಮ್ಮ ಗೆಲುವಿನ ನಾಗಾಲೋಟವನ್ನು ಮುಂದುವರೆಸುವ ಭರವಸೆ ನೀಡಿದ್ದಾರೆ.
ಕೆಲ ತಿಂಗಳ ಹಿಂದಷ್ಟೆ ಬಿಡುಗಡೆ ಆದ ತಮಿಳು ಸಿನಿಮಾ ‘ಮಂದಾಡಿ’ ಚಿತ್ರಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ತಮಿಳಿನ ನಟ ಸೂರಿ ಮತ್ತು ತೆಲುಗಿನ ಸುಹಾಸ್ ಒಟ್ಟಿಗೆ ನಟಿಸಿದ್ದ ಆ ಸಿನಿಮಾದ ಮಾಸ್ ದೃಶ್ಯಗಳು, ಕತೆ, ನಟರ ಅಭಿನಯ ಎಲ್ಲವೂ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ‘ಮಂದಾಡಿ’ ಸಿನಿಮಾ ಅನ್ನು ಮತಿಮಾರನ್ ನಿರ್ದೇಶನ ಮಾಡಿದ್ದರು. ಇದೀಗ ಸೂರ್ಯ ಅವರು ಮತಿಮಾರನ್ ಜೊತೆಗೆ ಕೈಜೋಡಿಸಿದ್ದು, ಮುಂದಿನ ಸೂರ್ಯ ಅವರ ಮುಂದಿನ ಸಿನಿಮಾ ಅನ್ನು ಮತಿಮಾರನ್ ನಿರ್ದೇಶಿಸಲಿದ್ದಾರೆ.
ಇದನ್ನೂ ಓದಿ:20 ವರ್ಷದ ಹಿಂದೆ ‘ರಾಮಾಯಣ’ ಸಿನಿಮಾ ಘೋಷಿಸಿದ್ದ ಸಲ್ಲು, ನಿಲ್ಲಿಸಿದ್ದು ಏಕೆ?
ತಮಿಳಿನ ಲಿಜೆಂಡರಿ ನಟ ಎಂಜಿಆರ್ ನಟಿಸಿದ್ದ ‘ಪಡಗೊಟ್ಟಿ’ ಸಿನಿಮಾದ ಹೆಸರನ್ನು ಇದೀಗ ಸೂರ್ಯ ಅವರ ಹೊಸ ಸಿನಿಮಾಕ್ಕೆ ಇರಿಸಲಾಗಿದ್ದು, ಈ ಸಿನಿಮಾ ಸಹ ‘ಮಂದಾಡಿ’ ರೀತಿ ಸಮುದ್ರದಲ್ಲಿ ನಡೆಯುವ ಕತೆಯನ್ನು ಒಳಗೊಂಡಿರಲಿದೆ. ‘ಪದಗೊಟ್ಟಿ’ ಎಂದರೆ ದೋಣಿ ನಡೆಸುವವ ಎಂದರ್ಥವಾಗಿದ್ದು, ಸೂರ್ಯ ಅವರು ದೋಣಿ ನಡೆಸುವ ಅಂಬಿಗನ ಪಾತ್ರದಲ್ಲಿ ನಟನೆ ಮಾಡಲಿದ್ದಾರೆ. ವಿಶೇಷವೆಂದರೆ ಈ ‘ಪದಗೊಟ್ಟಿ’ ಸಿನಿಮಾ ಸೂರ್ಯ ನಟನೆ 49ನೇ ಸಿನಿಮಾ ಆಗಿರಲಿದೆ. ಈ ಸಿನಿಮಾಕ್ಕೆ ಕಲೈಪುಲಿ ಎಸ್ ಥನು ಬಂಡವಾಳ ಹೂಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




